22nd November 2024
Share

ಶ್ರೀಭೈರತಿಬಸವರಾಜ್‌ರವರ ಗಡುವು ನಾಗರೀಕ ಆಂದೋಲನ- 2 ನೇ ದಿವಸ ದಿನಾಂಕ:10.01.2021

G.S.BASAVARAJ S.SHAFI AHAMAD, late PRAHALD RAO. D.BASAVARAJ, ANJAN & KUNDARANAHALLI RAMESH

TUMAKURU:SHAKTHIPEETA FOUNDATION

1999 ರಲ್ಲಿ ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್‌ರವರ ಕಚೇರಿಗೆ, ತುಮಕೂರು ನಗರದ ಪ್ರಹ್ಲಾದ್ ಪಾರ್ಕ್ ಅಭಿವೃದ್ಧಿಗೆ ಅನುದಾನ ನೀಡಲು ಅರ್ಜಿ ಹಿಡಿದು ಬಂದ ಪ್ರಹ್ಲಾದ್ ರಾವ್ ರವರು ತುಮಕೂರು ನಗರದ ಉದ್ಯಾನವನಗಳ ಬಗ್ಗೆ ವಿಶೇಷ ಗಮನ ಹರಿಸಲು ಕಾರಣೀಭೂತರಾದರು.

ಪಾರ್ಕ್‌ಗಳ ದತ್ತು ನೀಡಲು ಸಂಸದರು ಘೋಷಣೆ ಮಾಡಿದಾಗ ಸಂಸದರ ಕಚೇರಿಗೆ ಬಂದ ಶ್ರೀ ಎಂ.ಎಸ್.ರುದ್ರಮೂರ್ತಿರವರು ಅಕ್ಷರಷಃ ರುದ್ರತಾಂಡವ ಆಡಿದ್ದು ಇನ್ನೂ ನೆನಪಿದೆ.

ಅಂದಿನಿಂದ ಉದ್ಯಾನವನಗಳ ಹುಡುಕಾಟಕ್ಕೆ ತೀವೃತರವಾದ ಹೋರಾಟ ಆರಂಭವಾಯಿತು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ, ಆಗಿನ ಜಿಲ್ಲಾಧಿಕಾರಿ ಶ್ರೀ ಉಮಾಶಂಕರ್‌ರವರು ನಗರದ ಉದ್ಯಾನವನಗಳ ಸಮೀಕ್ಷೆ ನಡೆಸಲು ಚಾಲನೇ ನೀಡುವವರೆಗೂ ನಿರಂತರವಾಗಿ ನಡೆದಿತ್ತು.

2006  ರಲ್ಲಿ ತುಮಕೂರು ನಗರದಲ್ಲಿ ಇದ್ದ ಸುಮಾರು 533 ಲೇಔಟ್‌ಗಳ ಪ್ರತಿಯನ್ನು ಶ್ರೀ ಎಂ.ಎಸ್.ರುದ್ರಮೂರ್ತಿರವರು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಪಡೆದಿದ್ದು, ಲೇಔಟ್‌ವಾರು ಉದ್ಯಾನವನ ಅಧ್ಯಯನ ಮಾಡಿದ್ದು ಇತಿಹಾಸ.

ಬಹುಷಃ ಶ್ರೀ ಅದರ್ಶಕುಮಾರ್‌ರವರು ಆಯುಕ್ತರಾಗಿದ್ದಾಗ ಸರ್ವೆಯರ್ ಶ್ರೀ ಶಿವಶಂಕರ್ ಮತ್ತು ತಂಡ ಸಮೀಕ್ಷೆ ನಡೆಸಿ, ಕೊನೆಗೂ ದಿನಾಂಕ:31.03.2011   ರ ಅಂತ್ಯಕ್ಕೆ ತುಮಕೂರು ನಗರದಲ್ಲಿ 458 ಉದ್ಯಾನವನಗಳಿವೆ, ಇದರಲ್ಲಿ ಸುಮಾರು 147 ಉದ್ಯಾನವನಗಳು ಒತ್ತುವರಿಯಾಗಿವೆ(ಪಟ್ಟಿಯಲ್ಲಿಯೇ ಗೊಂದಲವಿದೆ) ಎಂದು ಪ್ರಕಟಣೆ ಮಾಡಿದ್ದು ಇತಿಹಾಸ.

 ಅಂದಿನಿಂದ ಇಲ್ಲಿಯವರೆಗೂ ಒತ್ತುವರಿ ತೆಗೆಸುವ ತಾಕತ್ತು ಇರುವ ಮೇಯರ್ ಆಗಲಿ, ಆಯುಕ್ತಾರಗಲಿ, ಒತ್ತುವರಿ ತೆರವು ಟಾಸ್ಕ್ ಪೋರ್ಸ್ ಅಧ್ಯಕ್ಷರಾದ ಉಪವಿಭಾಗಾಧಿಕಾರಿಗಳಾಗಲಿ ಬಂದಿಲ್ಲ. ಆದರೂ ಆಗಾಗ ಉದ್ಯಾನವನಗಳ ಒತ್ತುವರಿ ತೆರವು ಗುಡುಗು-ಸಿಡಲು ಶಭ್ಧಗಳು ಆಗಿವೆ.

 ಬೆರಳಣಿಕೆಯಷ್ಟು ಒತ್ತುವರಿ ತೆರವು ಆಗಿರಬಹುದು. ಪ್ರಸ್ತುತ ರಾಜ್ಯದ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿಬಸವರಾಜ್ ರವರೇ ಕಾಲಮಿತಿ ಗಡುವು ನೀಡಿ ಒತ್ತುವರಿ ತೆರವು ಮಾಡಿ ಎಂದು ಹೇಳಿರುವುದು ವಿಶೇಷವಾಗಿದೆ.

ಸುಪ್ರಿಂ ಕೋರ್ಟ್ ಆದೇಶವನ್ನೇ ಪಾಲಿಸದ ಅಧಿಕಾರಿಗಳು ಸಚಿವರ ಆದೇಶವನ್ನು ಪಾಲಿಸುತ್ತಾರೆಯೇ ಎಂಬ ಅನುಮಾನವೂ ಇದೆ. ಆದರೂ ಮಾನವರ ಸಹಜ ಗುಣ ಆಶಾಭಾವನೆ, ಒತ್ತುವರಿ ಮುಕ್ತ ಉದ್ಯಾನವನಗಳನ್ನು ನಾವೂ ತುಮಕೂರು ನಗರದಲ್ಲಿ ನೋಡಬಹುದು ಎಂಬ ಹಗಲು ಕನಸು ನಮಗೂ ಇದೆ.

ತುಮಕೂರು ಸ್ಮಾರ್ಟ್ ಸಿಟಿಯವರಿಗೆ ಉದ್ಯಾನವನ ಗುರುತಿಸಿ, ಮುಳ್ಳುತಂತಿ ಹಾಕಿ, ನಾಮಫಲಕ ಹಾಕಿ, ಗಿಡಹಾಕಿ ಸಾಕು ಎಂದು, ನಾನು  ನಿರಂತರವಾಗಿ ಒತ್ತಾಯ ಮಾಡುತ್ತಾ ಬಂದಿದ್ದೇನೆ. ದಿನಾಂಕ:31.12.2021  ರಂದು ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿಯೂ ಸಭೆ ನಡವಳಿಕೆ ಮಾಡಲಾಗಿದೆ. ಪಾಲಿಕೆ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ತಗಲುವ ವೆಚ್ಚವನ್ನು ತುಮಕೂರು ಸ್ಮಾರ್ಟ್ ಸಿಟಿಯವರು ನೀಡಲು ಚರ್ಚಿಸಲಾಗಿದೆ.

 ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್‌ರವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಒತ್ತುವರಿ ಮಾಡಿರುವ ಮಹಾನ್ ವ್ಯಕ್ತಿಗಳ ಕೂಟ ಯಾವ ಲಾಭಿ ಆರಂಭ ಮಾಡುತ್ತಾರೋ ಕಾದು ನೋಡೋಣ?