22nd December 2024
Share
G.S.BASAVARAJ, RAKESH SINGH IAS, Dr.R.N.SANKHUA, KUNDARANHALLI RAMESH & OTHERS

TUMAKURU:SHATKHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 64 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-26  ದಿನಾಂಕ: 12.01.2021  

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ, ರಾಜ್ಯ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರು ಮತ್ತು ಕೇಂದ್ರ ಸರ್ಕಾರದ  NATI0NALWATER DEVELOPMENT AGENCY ಮುಖ್ಯ ಇಂಜಿನಿಯರ್ ಶ್ರೀ Dr. R.N.SANKHUA ರವರೊಂದಿಗೆ ದಿನಾಂಕ:11.01.201 ರಂದು ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಕಚೇರಿಯಲ್ಲಿ ಸಂಜೆ 4.30  ಕ್ಕೆ  ಮಹತ್ವದ ಸಮಾಲೋಚನೆ ನಡೆಯಿತು.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಬರೆದ ಮೂರು ಪತ್ರಗಳ ಬಗ್ಗೆ ಮತ್ತು ರಾಜ್ಯ ಸರ್ಕಾರದ ರಾಜ್ಯದ ನದಿಜೋಡಣೆ ಬಗ್ಗೆ ಕೈಗೊಳ್ಳುತ್ತಿರುವ ಹಲವಾರು ಯೋಜನೆಗಳ ಬಗ್ಗೆ ವಿವರವಾದ ಚರ್ಚೆ ನಡೆಯಿತು.

  ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಅನುಮೋದನೆಗೆ ಸಭೆ ನಡವಳಿಕೆ ಪ್ರತಿಯನ್ನು ರವಾನಿಸಲಾಗಿದೆ, ಇಂದು ಅಥವಾ ನಾಳೆ ಸಚಿವರ ಅನುಮೋದನೆ ದೊರಕಿದ ನಂತರ ಪ್ರಸ್ತಾವನೆಯ ಬಗ್ಗೆ ನಿಮ್ಮ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಲಾಗುವುದು ಎಂದು ರಾಕೇಶ್ ಸಿಂಗ್‌ರವರು ತಿಳಿಸಿದರು.

ಶ್ರೀ ಜಿ.ಎಸ್.ಬಸವರಾಜ್‌ರವರು ಮಾತನಾಡಿ ಕೇಂದ್ರ ಸರ್ಕಾರದ ನದಿಜೋಡಣೆಯಲ್ಲಿ ನೇತ್ರಾವತಿ ನದಿಯಿಂದ ಹೇಮಾವತಿ ನದಿಗೆ ಜೋಡಣೆ ಮಾಡುವ ಪ್ರಸ್ತಾಪ ಇತ್ತು. ಯೋಜನೆ ಬದಲಾಗಿ ಎತ್ತಿನಹೊಳೆ ಯೋಜನೆ ಜಾರಿಯಾಗುತ್ತಿದೆ. ಇದು ನೇತ್ರಾವತಿ ಮತ್ತು ಪಾಲಾರ್, ಪೆನ್ನಾರ್ ನದಿ ಜೋಡಣೆಯಾಗಲಿದೆ. ಆದ್ದರಿಂದ ಯೋಜನೆಯನ್ನು ಕೇಂದ್ರ ಸರ್ಕಾರ NPP ಯೋಜನೆಯಡಿ ಕೈಗೊಂಡು ಅನುದಾನ ನೀಡಲು ಸಲಹೆ ನೀಡಿದರು.’

  ರಾಜ್ಯ ಸರ್ಕಾರ ಸುಮಾರು 500 ಟಿಎಂಸಿ ಅಡಿ ನೀರಿನ ಯೋಜನೆ ರೂಪಿಸಲು ಸಿದ್ಧತೆ ನಡೆಸುತ್ತಿದೆ. ಎಲ್ಲಾ ಪ್ರಸ್ತಾವನೆಗಳಿಗೂ ಕೇಂದ್ರ ಸರ್ಕಾರ NPP ಯೋಜನೆಯಡಿ ಅನುದಾನ ನೀಡುವುದು ಅಗತ್ಯವಾಗಿದೆ. ಆದ್ದರಿಂದ ಶೀಘ್ರವಾಗಿ ಡಿಪಿಆರ್ ಮಾಡಲು ಸಲಹೆ ನೀಡಿದರು.

 ರಾಜ್ಯ ಸರ್ಕಾರ ನಮಗೆ ಪತ್ರ ಬರೆದ ಮರುದಿನದಿಂದ ನಾವು ಡಿಪಿಆರ್ ಮಾಡಲು ಸಿದ್ಧವಿರುವುದಾಗಿ ಹಾಗೂ ಎತ್ತಿನಹೊಳೆ ಯೋಜನೆ ಬಗ್ಗೆ ಶೀಘ್ರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವುದಾಗಿ ಇಂಜಿನಿಯರಗಳ ತಂಡ ಸಂಸದರಿಗೆ ಭರವಸೆ ನೀಡಿತು.

 ಈ ಸಭೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಇಂಜಿನಿಯರ್‌ಗಳಾದ ಶ್ರೀ ರಾಜೇಶ್ವರರಾವ್, ಶ್ರೀ ರೆಡ್ಡಿ, ಶ್ರೀ ಕೃಷ್ಣಮೂರ್ತಿ, ಶ್ರೀ ಚನ್ನಯ್ಯ, ಶ್ರೀ ಶರಣಪ್ಪ, ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಇನ್ನೂ ಮಂತಾದವರು ಭಾಗವಹಿಸಿದ್ದರು.