21st May 2024
Share
PANDITH JAWAHAR ಹಸಿರು ಪ್ರೇಮಿ

TUMAKURU:SHAKTHIPEETA FOUNDATION

ಮರಗಳನ್ನು ಕಡಿದು ರಸ್ತೆ ಪುನರ್ ನಿರ್ಮಾಣ ಮಾಡಬೇಕು ಎಂಬ ವಿಷಯ ಚರ್ಚೆಗೆ ಬಂದಾಗ, ರೈಲ್ವೇ ಸ್ಟೇಷನ್ ರಸ್ತೆ ಅಭಿವೃದ್ಧಿ ಪ್ಲಾನ್ ಮಾಡಿದ ಅನನುಭವಿ ಇಂಜಿನಿಯರ್‌ಗಳನ್ನು ಜಿಲ್ಲಾಧಿಕಾರಿ ಶ್ರೀ ರಾಕೇಶ್‌ಕುಮಾರ್‌ರವರು ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ನಯವಾಗಿ ಛೇಡಿಸಿದರು.

ದೇಶದ ಸ್ಮಾರ್ಟ್ ಸಿಟಿಗಳು ಹಾಳಾಗಲು ಪ್ರಮುಖ ಕಾರಣ ಅನನುಭವಿಗಳ, ಹೊಸಬರ ನೇಮಕಮಾಡಲು ಮಾಡಿರುವ ಆದೇಶ. ಯಾರು ಏನೇ ಹೇಳಲಿ, ಒಪ್ಪಲಿ ಬಿಡಲಿ, ಯಾವುದೇ ಕೆಲಸವಾಗಲಿ ಅನುಭವ ಮುಖ್ಯ.

ಸತ್ಯ ಹೇಳಿದರೆ ಚೋಳು ಕಡಿದ ಹಾಗೆ ಆಡುವ ಜನರಿಗೆ ಏನು ಮಾಡಲು ಸಾಧ್ಯವಿಲ್ಲ. ತಪ್ಪಾದ ಮೇಲೆಯೂ ಏನು ಆಗಿಲ್ಲ ಎನ್ನುವ ರೀತಿ ವರ್ತಿಸುವ, ಆತ್ಮಾವಲೋಕನವನ್ನು ಮಾಡಿಕೊಳ್ಳದವರಿಗೆ ದೇವರೇ ಬುದ್ದಿ ಕೊಡಬೇಕು.

ಸೇವ್ ಟ್ರಿ ಎಂದು ನನಗೆ ಹಲವಾರು ಮೆಸೇಜ್ ಬಂದಿದ್ದು ನಿಜ, ಶ್ರೀ ಪಂಡಿತ್ ಜವಾಹರ್ ಅಂತೂ ಒಂದು ವ್ಯಾಖ್ಯಾನವನ್ನೇ ಬರೆದಿದ್ದರು. ನಾನು ಅವರಿಗೆ ಮೆಸೇಜ್ ಕಳುಹಿಸಿದ್ದು ಇಷ್ಟೆ? ನಿಮ್ಮ ಫೋಟೋ ಕಳುಹಿಸಿ ಎಂದಂಷ್ಟೆ.’

ಹಸಿರು ತುಮಕೂರು ಯೋಜನೆ ಜಾರಿ ಮಾಡಿದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಹತ್ತಾರು ಭಾರಿ ಹೇಳಿದರೂ ಹಸಿರು ತುಮಕೂರು ಯೋಜನೆ  ಮುಂದುವರೆಸದ ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಇಬ್ಬರ ಮಾತನ್ನು ನಾನು ಅನುಭವಿಸಿದ್ದೇನೆ. ಹೌದು ಯಾರು ಏನೇ ಟೀಕೆ ಮಾಡಲಿ ತುಮಕೂರಿನಲ್ಲಿ ಸಂಸದರ ಅನುದಾನದಲ್ಲಿ ಸುಮಾರು 25000 ಮರಗಳಂತೂ ಬೆಳೆದು ರಾರಾಜಿಸುತ್ತಿವೆ.

 ಶಾಸಕರು ನನಗೆ ಹೇಳಿದ ಮಾತು ಸಾರ್ ನಗರದಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ, ಮರಗಿಡಗಳನ್ನು ವಿಧಿ ಇಲ್ಲ ಎನ್ನುವ ಕಡೆ ಕಡಿಯಲೇ ಬೇಕು. ಕಡಿಯೋಣ, ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿವೆ, ಮುಗಿದ ತಕ್ಷಣ ತುಮಕೂರು ತುಂಬಾ ಗಿಡಗಳನ್ನು ಹಾಕಿ ನಗರವನ್ನೇ ಹಸಿರು ಶೃಂಗಾರ’ ಮಾಡೋಣ ಎಂಬ ಶಾಸಕರ ಮಾತು ನನಗೂ ಸರಿ ಎನಿಸಿದೆ.

 ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕರವರು ಸಾರ್ ಸಂಸದರು ನಾನು ತುಮಕೂರಿಗೆ ಬರುವಾಗ ಅವರನ್ನು ಭೇಟಿಯಾದಾಗ ನನಗೆ ಮೂರು ಅಂಶಗಳನ್ನು ಒತ್ತಿಹೇಳಿದ್ದಾರೆ, ಬಡವರಿಗೆ ಮನೆ ಕೊಡುವ ವಿಚಾರ, ಜಿಐಎಸ್ ಮಾಡುವ ವಿಚಾರ ಮತ್ತು ನಗರದ ತುಂಬಾ ಗಿಡಹಾಕುವ ವಿಚಾರ ನಾನು ಸಹ ಈ ಮೂರು ವಿಚಾರಗಳನ್ನು ಪ್ರತಿ ದಿನ ಅವಲೋಕನ ಮಾಡುತ್ತಿದ್ದೇನೆ.

ಗಿಡ ಹಾಕಲು ನನಗೆ ನಗರದ ಹಸಿರು ಪ್ರೇಮಿಗಳ ಸಹಕಾರ ಬೇಕು. ಗಿಡ ಹಾಕಿದರೇ ಸಾಲದು, ಎಲ್ಲಿ ಯಾವ ಗಿಡಗಳನ್ನು ಹಾಕಬೇಕು, ಹೇಗೆ ಕಾಪಾಡಬೇಕು ಎಂಬ ಬಗ್ಗೆ ಅನುಭವವಿರುವ  ಸಂಘಸಂಸ್ಥೆಗಳು ಮುಂದೆ ಬರಬೇಕು.

ಸೇವ್ ಟ್ರಿ ಎಂದು ಹೇಳಿಕೆ ನೀಡುವಷ್ಟೆ, ಮರಗಿಡಗಳನ್ನು ಉಳಿಸಲು ಶ್ರಮಿಸುವಷ್ಟೆ, ಹೊಸದಾಗಿ ಗಿಡಹಾಕಲು ಶ್ರಮಿಸುವುದು ಪ್ರಾಮುಖ್ಯವಾಗಿದೆ. ಆದ್ದರಿಂದ ಕಡೆಯೂ ಗಮನಕೊಡಿ, ಉಳಿಸುವಷ್ಟು ಉಳಿಸೋಣ, ಬೆಳೆಸುವಷ್ಟು ಬೆಳೆಸೋಣ. ಅಕ್ಕಿ ಖರ್ಚಾಗಬಾರದು- ಮಕ್ಕಳು ಬಡವಾಗಬಾರದು ಎಂದರೆ ಹೇಗೆ ಸ್ವಾಮಿ?’

 ಹಸಿರು ತುಮಕೂರು ಯೋಜನೆ ಜಾರಿ ಮಾಡಿದಾಗ, ಈ ಊರಿನಲ್ಲಿ ಗಿಡ ಹಾಕುವ ಪರಿಸರ ಪ್ರೇಮಿಗಳು ಯಾರು?ಗಿಡಗಳನ್ನು ಹಾಕದೇ ಡೋಂಗಿ ಪರಿಸರವಾದಿಗಳು ಯಾರು ಎಂಬ ವಿಚಾರ ನನಗೆ ಮನಸ್ಸಿನಲ್ಲಿ ಹಚ್ಚಾಗಿ ಉಳಿದಿದೆ.

ಈಗ ನಾವು ನೀವೂ ಮಾಡಬೇಕಾಗಿರುವುದು ಇಷ್ಟೆ, ಹಸಿರು-ತುಮಕೂರು 3 ನೇ ಹಂತದ ಯೋಜನೆ ಜಾರಿಮಾಡಬೇಕು. ಇಡೀ ನಗರದ ತುಂಬಾ ಎಲ್ಲೆಲ್ಲಿ, ಯಾವ ಯಾವ, ಜಾತಿಯ ಎಷ್ಟು ಗಿಡಗಳನ್ನು ಹಾಕಬೇಕು ಎಂಬ ಬಗ್ಗೆ ಉತ್ತಮವಾದ ಸಲಹೆ ಮತ್ತು ಸಂರಕ್ಷಣೆ ಮಾಡಲು ಸಹಕಾರ ನೀಡುವ ಕೆಲಸವನ್ನು ನಗರಾಡಳಿತಕ್ಕೆ ಮಾಡಬೇಕು.

ಶಾಸಕರು ಮತ್ತು ಸಂಸದರು ಗಿಡಗಳಿಗೆ ಬೇಕಾಗುವ ಅನುದಾನ ನೀಡಲಿದ್ದಾರೆ, ಇದರಲ್ಲಿ ಎರಡು ಮಾತಿಲ್ಲ. ಗಿಡ ಬೆಳೆಸುವ ಶುದ್ಧ ಕೈಗಳು ಬೇಕು ಪಂಡಿತ್‌ರವರೇ, ಮರ ಸಂರಕ್ಷಣೆ ಮಾಡುವ ತಂಡದ ಸದಸ್ಯರುಗಳು ಗಿಡಹಾಕಲು ಚಿಂತನೆ ಮಾಡಿ ಅಧಿಕಾರಿಗಳಿಗೆ ಸಹಕರಿಸಿದಲ್ಲಿ ಅದೂ ಪುಣ್ಯದ ಕೆಲಸವೇ? ‘

ದಿಶಾ ಸಭೆಯ ನಡವಳಿಕೆ ಗಮನಿಸಿ, ಮರಗಿಡಹಾಕಲು ಎಷ್ಟು ಕಸರತ್ತು ಮಾಡುತ್ತಿದ್ದೇವೆ, ಒಂದು ಸಣ್ಣ ಉದಾಹರಣೆ ಪಿಎಂಜಿವೈ ರಸ್ತೆ ಅಭಿವೃದ್ಧಿ ಮಾಡುವಾಗ ಶೇಕಡ ೧ ರಷ್ಟು ಹಣ ಗಿಡಹಾಕಲು ಕೊಟ್ಟಿದ್ದಾರೆ. ಈ ಹಣದಲ್ಲಿ ಹಾಕಿರುವ ಗಿಡ ಎಷ್ಟು, ಬದುಕಿರುವ ಮರಗಳು ಎಷ್ಟು ಎಂಬ ಹಸಿರು ಬಾಯಿ ಬಡಿದುಕೊಂಡರೂ ಲೆಕ್ಕ ಇನ್ನೂ ದೊರಕಿಲ್ಲ.

 ‘ಸಂಸದರಿಗೆ ನಗರದಲ್ಲಿ ಹಾಕಿರುವ ಗಿಡಗಳನ್ನು ತೋರಿಸುವ ಶಕ್ತಿ ಇದೆ. ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳು ಗಿಡಹಾಕಲು ಖರ್ಚು ಮಾಡಿದ ಹಣದ ಲೆಕ್ಕ ತೋರಿಸುತ್ತಾರೆ, ಗಿಡ ತೋರಿಸಿ ಎಂದರೆ ಅವರಿಗೆ ನೇಪಥ್ಯ. ಹೀಗೆ ಆಗಬಾರದು ಎಂದರೇ ತುಮಕೂರಿನಲ್ಲಿ ಇನ್ನೊಂದು ಹಸಿರು ತುಮಕೂರು ಯೋಜನೆ ಜನರ ಸಹಭಾಗಿತ್ವದಲ್ಲಿ ಜಾರಿಯಾಗಲೇ ಬೇಕು.’

ನನಗಂತೂ ಈಗ ಸಮಯವಿಲ್ಲ, ನನಗೆ ನಮ್ಮ ಶಕ್ತಿಪೀಠ ಕ್ಯಾಂಪಸ್‌ನಲ್ಲಿಯೇ ಗಿಡಹಾಕುವ ಕೆಲಸದಲ್ಲಿ ತೊಡಗಿದ್ದೇನೆ, ಇನ್ನೂ ಮೂರು ವರ್ಷ ಮಾದರಿಯಾಗಿ ಗಿಡ ಬೆಳೆಸುವ ತಪಸ್ಸು ನನ್ನದಾಗಿದೆ. ಹೇಳಿದಷ್ಟು ಸುಲಭವಲ್ಲ ನಗರದಲ್ಲಿ ಗಿಡಬೆಳೆಸುವುದು. ಅದೂ ಒಂದು ತಪಸ್ಸು.

ಇನ್ನೂ ತುಮಕೂರಿನಲ್ಲಿ ಗಿಡಬೆಳೆಸುವ ಸರದಿ ಶಾಸಕರದ್ದು ಮತ್ತು ಅವರ ತಂಡದ್ದು ಕಾದು ನೋಡೋಣ?