19th April 2024
Share

TUMAKURU:SHAKTHIPEETA FOUNDATION

ಒಬ್ಬ ಅಧಿಕಾರಿ ಕರೆಮಾಡಿ ಹೇಳಿದ್ದು ಇಷ್ಟೆ, ಸಾರ್ ಗ್ರಾಮಪಂಚಾಯಿತಿ ಚುನಾವಣೆ ಪೂರ್ಣಗೊಂಡಿದೆ, ಒಂದು ಊರಿನಲ್ಲಿ 4-5 ಜನ ನಿಂತಿದ್ದಾರೆ. ಪ್ರತಿಯೊಬ್ಬ ಮತದಾರರ ಮೇಲೂ ಒಬ್ಬೊಬ್ಬರಿಗೂ ಸಿಟ್ಟಿದೆ. ನಿವೇಶನ/ವಸತಿ ಬೇಕು ಎಂದು ಅರ್ಜಿಹಾಕಿರುವವರ ಪಟ್ಟಿಯನ್ನು ಗ್ರಾಮವಾರು ಪಟ್ಟಿ ಬಿಡುಗಡೆ ಮಾಡಿದರೆ, ಸಾಕು. ಯಾರು ಬೋಗಸ್ ಅರ್ಜಿಹಾಕಿದ್ದಾರೆ. ಯಾರು ನಿಜವಾದ ಅರ್ಹರು, ಯಾರು ಅನರ್ಹರು ಎಂಬ ಪಕ್ಕಾ ಮಾಹಿತಿ ದೊರೆಯಲಿದೆ.

ಸರ್ಕಾರಿ ಜಮೀನು ಗುಳುಂ ಮಾಡಿರುವವರ ಜಾತಕವನ್ನು ಸಹ ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದವರು ಬಯಲಿಗೆ ಎಳೆಯುತ್ತಾರೆ. ಒಂದು ತಿಂಗಳು ಕಾಲವಕಾಶ ನೀಡಿ, ಆಂದೋಲನ ಮಾಡಿದರೆ, ಅರ್ಹರೆಲ್ಲರಿಗೂ ನಿವೇಶನ ನೀಡಿ, ತುಮಕೂರು ಜಿಲ್ಲೆಯಲ್ಲಿ ಯಾರೊಬ್ಬರೂ ನಿವೇಶನ ರಹಿತರು ಇಲ್ಲ ಎಂಬ ಘೋಷಣೆ ಮಾಡಬಹುದು.

ಪಕ್ಕಾ ವಸತಿ ರಹಿತರು ಯಾರು? ಎಂಬ ಮಾಹಿತಿಯೂ ದೊರೆಯಲಿದೆ. ಗ್ರಾಮಗಳಲ್ಲೇ ಲೋಕಾಯುಕ್ತರು, ಎಬಿಸಿ, ಸಿಬಿಐ ಸಂಸ್ಥೆಗಳಿಗಿಂತ ಪಕ್ಕಾ ಮಾಹಿತಿ ನೀಡುವ ಸಮಯ ಸಾರ್ ಇದು. ದಿಶಾ ಸಮಿತಿಯಲ್ಲಿ ನಿರ್ಣಯಮಾಡಿಸಿ, ನಾವೂ ಪಕ್ಕಾ ಲಿಸ್ಟ್ ನೀಡುತ್ತೇವೆ.

ನಿಜವಾದ ಅರ್ಹರಿಗೆ ವಸತಿಗಾಗಿ, ಅನುದಾನ ನೀಡುವುದು ಸರ್ಕಾರಗಳ ಕೆಲಸ. ನಮ್ಮ ಕರ್ತವ್ಯ ಶೇ 100 ರಷ್ಟು ಮಾಡಲು ಇದು ಒಳ್ಳೆಯ ಸುವರ್ಣ ಅವಕಾಶ. ತುಮಕೂರು ಜಿಲ್ಲೆಯ ದಿಶಾ ಸಮಿತಿಯಲ್ಲೂ ನಿರ್ಣಯಮಾಡಿಸಿ. ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲೂ ನಿರ್ಣಯಮಾಡಿಸಿ.

ದೇಶದ ಎಲ್ಲರಿಗೂ ಸೂರು, ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ 2022 ರ ಕನಸು ಮತ್ತು ತುಮಕೂರು ಜಿಲ್ಲೆಯಲ್ಲಿ 2022 ರೊಳಗೆ ನಿವೇಶನ ರಹಿತರಿಲ್ಲ, ವಸತಿ ರಹಿತರು ಇಲ್ಲ ಎಂಬ ಘೋಷಣೆ ಮಾಡುವ ಕನಸು ಹೊತ್ತಿರುವ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಆಸೆಯೂ ನೆರವೇರಲಿದೆ.

ಈಗ ಎರಡು ವರ್ಷದಿಂದ, ಕಬ್ಬಿಣ ಕಾಯಿಸಿದ್ದೀರಿ, ಈಗ ಹದವಾಗಿದೆ. ಸಂದರ್ಭ ಬಳಸಿಕೊಳ್ಳುವುದು ಸೂಕ್ತ ಎಂಬ ಬೊಂಬಾಟ್ ಐಡಿಯಾ ಕೊಟ್ಟ ಅಧಿಕಾರಿ, ದಯವಿಟ್ಟು ನನ್ನ ಹೆಸರು ಬರೆಯಬೇಡಿ ಸಾರ್ ಎಂಬ ಮಾತನ್ನು ಹೇಳಲು ಮರೆಯಲಿಲ್ಲಾ.