TUMKURU:SHAKTHIPEETA FOUNDATION
ದೀನ್ ದಯಾಳ್ ಉಪಾಧ್ಯಾಯ ಯೋಜನೆ-ರಾಷ್ಟ್ರೀಯ ಗ್ರಾಮೀಣಾ ಜೀವನೋಪಾಯ ಅಭಿಯಾನ
(ಡೇ-ಎನ್‌ಆರ್‌ಎಲ್‌ಎಮ್)
ಗ್ರಾಮೀಣಾಭಿವೃದ್ಧಿ ಸಚಿವಾಲಯವು ತನ್ನ ಪ್ರಮುಖ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ್ ಯೋಜನೆ(ಎಸ್‌ಜೆಎಸ್‌ವ್ಯೆ)ಯನ್ನು ಪುನರ್ ರಚಿಸಿ ದೀನ್ ದಯಾಳ್ ಉಪಾಧ್ಯಾಯ ಯೋಜನೆ-ರಾಷ್ಟ್ರೀಯ ಗ್ರಾಮೀಣಾ ಜೀವನೋಪಾಯ ಅಭಿಯಾನ (ಡೇ-ಎನ್‌ಆರ್‌ಎಲ್‌ಎಮ್) ಕಾರ್ಯಕ್ರಮವನ್ನಾಗಿ ಮಾರ್ಪಾಡಿಸಲಾಗಿರುತ್ತದೆ.
- ಸದರಿ ಕಾರ್ಯಕ್ರಮವನ್ನು 2013-2014 ನೇ ಸಾಲಿನಿಂದ ರಾಷ್ಟ್ರದಾದ್ಯಂತ ಜಾರಿಗೊಳಿಸುತ್ತಿದೆ.
- ಡೇ-ಎನ್‌ಆರ್‌ಎಲ್‌ಎಮ್ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಸಂಜೀವಿನಿ’ – ಕೆಎಸ್‌ಆರ್‌ಎಲ್‌ಪಿಎಸ್ ಎಂದು ಮರು ನಾಮಕರಣ ಮಾಡಿ 2012-2014 ರಿಂದ ರಾಜ್ಯದಾದ್ಯಂತ ಅನುಷ್ಟಾನಗೊಳಿಸಲಾಗುತ್ತಿರುತ್ತದೆ.
- ರಾಜ್ಯದಲ್ಲಿ ಅಭಿಯಾನವನ್ನು ಕಾರ್ಯಗತಗೊಳಿಸಲು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವಧನ ಸಂಸ್ಥೆ(ಕೆಎಸ್‌ಆರ್‌ಎಲ್‌ಪಿಎಸ್)ಯನ್ನು ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್-1961 ರಡಿ ನೋಂದಣಿ ಮಾಡಲಾಗಿದೆ.
ಸಂಜೀವಿನಿ ಕಾರ್ಯಕ್ರಮದ ಗುರಿ.
ಲಾಭಯುತ ಆದಾಯವನ್ನು ಒದಗಿಸುವುದರ ಮೂಲಕ ಬಡತನದ ತೀವ್ರತೆಯನ್ನು ಕಡಿಮೆಗೊಳಿಸುವುದು ಮತ್ತು ಸಮುದಾಯ ಸಂಸ್ಥೆಗಳ ಮೂಲಕ ಸ್ವ-ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದರಿಂದಾಗಿ ಗ್ರಾಮೀಣ ಜನರ ಜೀವನ ಮಟ್ಟದಲ್ಲಿ ಸಮರ್ಥನೀಯ ವಾದ ಅಭಿವೃದ್ಧಿಯನ್ನು ಕಾಣುವುದು
ತುಮಕೂರು ಜಿಲ್ಲೆಯಲ್ಲಿ ಎನ್‌ಆರ್‌ಎಲ್‌ಎಮ್- ’ಸಂಜೀವಿನಿ’ ಕಾರ್ಯಕ್ರಮ.
ತುಮಕೂರು ಜಿಲ್ಲೆಯಲ್ಲಿ 2013-2014 ನೇ ಸಾಲಿನಿಂದಲೂ ದೀನ್ ದಯಾಳ್ ಉಪಾಧ್ಯಾಯ ಯೋಜನೆ-ರಾಷ್ಟ್ರೀಯ ಗ್ರಾಮೀಣಾ ಜೀವನೋಪಾಯ ಅಭಿಯಾನ (ಡೇ-ಎನ್‌ಆರ್‌ಎಲ್‌ಎಮ್) ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುತ್ತಿರುತ್ತದೆ. ಪ್ರಾರಂಭದಲ್ಲಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ ಮತ್ತು ಪಾವಗಡ ತಾಲ್ಲೂಕಗಳನ್ನು ಇನ್‌ಟೆನ್ಸಿವ್/ಎನ್‌ಆರ್‌ಎಲ್‌ಪಿ (ರಾಷ್ಟ್ರೀಯ ಗ್ರಾಮೀಣಾ ಜೀವನೋಪಾಯ ಯೋಜನೆ) ತಾಲ್ಲೂಕುಗಳೆಂದು ಪರಿಗಣಿಸಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗಿರುತ್ತದೆ.
2019-2020 ನೇ ಸಾಲಿನಲ್ಲಿ ಎನ್‌ಆರ್‌ಎಲ್‌ಪಿ (ರಾಷ್ಟ್ರೀಯ ಗ್ರಾಮೀಣಾ ಜೀವನೋಪಾಯ ಯೋಜನೆ) ಯೋಜನೆ ಮುಕ್ತಾಯಗೊಂಡಿದ್ದರಿಂದ ಸದರಿ ತಾಲ್ಲೂಕುಗಳನ್ನು ಎನ್‌ಆರ್‌ಇಟಿಪಿ(ರಾಷ್ಟ್ರೀಯ ಗ್ರಾಮೀಣಾ ಆರ್ಥಿಕ ರೂಪಾಂತರ ಯೋಜನೆ) ತಾಲ್ಲೂಕುಗಳೆಂದೂ ಪರಿಗಣಿಸಲಾಗಿರುತ್ತದೆ. 2018-2019 ನೇ ಸಾಲಿನಿಂದ ಇನ್ನುಳಿದ 06ತಾಲ್ಲೂಕುಗಳಾದ ಗುಬ್ಬಿ, ಕೊರಟಗೆರೆ, ಕುಣಿಗಲ್, ತಿಪಟೂರು, ತುಮಕೂರು ಮತ್ತು ತುರುವೇಕೆರೆ ತಾಲ್ಲೂಕುಗಳನ್ನು ಎನ್‌ಆರ್‌ಎಲ್‌ಎಮ್ (ರಾಷ್ಟ್ರೀಯ ಗ್ರಾಮೀಣಾ ಜೀವನೋಪಾಯ ಅಭಿಯಾನ) ತಾಲ್ಲೂಕುಗಳೆಂದೂ ಪರಿಗಣಿಸಿ ಕಾರ್ಯಕ್ರಮವನ್ನು ಅನುಷ್ಟಾನ ಮಾಡಲಾಗುತ್ತಿರುತ್ತದೆ.