28th March 2024
Share

TUMAKURU:SHAKTHUIPEETA FOUNDATION

ದಿನಾಂಕ:22.01.2021 ರಂದು ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರು ಜಿಐಎಸ್ ಪೋರ್ಟಲ್  ಉದ್ಘಾಟನೆಯನ್ನು ಮಾಡಿದ್ದಾರೆ. ಇದರ ಅನುಷ್ಠಾನ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ? ಅನುಷ್ಠಾನದ ರೀತಿಯನ್ನು ಇಂದಿನಿಂದ(24.01.2021) ಆರಂಭಿಸುತ್ತಿದ್ದೇನೆ.

ಈ ಸಲಹೆಯನ್ನು ನಾನು ತುಮಕೂರು ಜಿಐಎಸ್ ಪೋರ್ಟಲ್‌ನಲ್ಲೂ ಅಫ್‌ಲೋಡ್ ಮಾಡುತ್ತೇನೆ.

  1. ಮಾನ್ಯ ಪ್ರಧಾನ ಮಂತ್ರಿಯವರ ಕಚೇರಿ.
  2. ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ.
  3. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಕಾರ್ಯದರ್ಶಿಯವರಿಗೆ.
  4. ಆಯಾ ಇಲಾಖೆಯ ಉನ್ನತ ಅಧಿಕಾರಿಗಳಿಗೆ.
  5. ಜಿಲ್ಲಾ ಉಸ್ತವಾರಿ ಸಚಿವರಿಗೆ.
  6. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ.
  7. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ.
  8. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಓ ಗಳಿಗೆ.
  9. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ. 

ಇವರೆಲ್ಲರಿಗೂ ರವಾನಿಸಿ ಸೂಕ್ತ ಕ್ರಮಕೈಗೊಳ್ಳಲು ಮನವಿ ಮಾಡಲು ಚಿಂತನೆ ನಡೆಸಿದ್ದೇನೆ. ಓದುಗರಾದ ತಮಗೂ ವಿಷಯ ತಲುಪಿಸಿದ್ದೇನೆ ಎಂಬ ಖುಷಿ ನನಗಿದೆ. ತಾವೂ ಸಹ ಸಲಹೆ ಅಥವಾ ತಮ್ಮ ಅಭಿಪ್ರಾಯ ನೀಡಬಹುದು.

ಹೀಗೇಕೆ ಎಂಬ ಪ್ರಶ್ನೆ ತಮಗೆ ಬರಬಹುದು. ನಾನು ಕಳೆದ 31 ವರ್ಷಗಳಿಂದ ನನ್ನ ಹುಟ್ಟೂರಾದ ಗುಬ್ಬಿ ತಾಲ್ಲೂಕಿನ ಕುಂದರನಹಳ್ಳಿ ಸಮಗ್ರ ಅಭಿವೃದ್ಧಿ ಯೋಜನೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು ವಜ್ರದ ಶ್ರೀ ತೀರ್ಥರಾಮೇಶ್ವರ ಪುಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆ, ತುಮಕೂರು ನಗರದ ಸಮಗ್ರ ಅಭಿವೃದ್ಧಿ ಯೋಜನೆ, ತುಮಕೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆ, ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಯೋಜನೆ, ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ಧಿ ಯೋಜನೆ ಮತ್ತು ಕರ್ನಾಟಕ ರಾಜ್ಯದ್ಯಾಂತ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ ಜಾರಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಇದ್ದೇನೆ.

 ಮಾನ್ಯ ಮಾಜಿ ಪ್ರಧಾನ ಮಂತ್ರಿಯವರಾದ ಶ್ರೀ ಮನೋಮೋಹನ್‌ಸಿಂಗ್‌ರವರು ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ತರುವ ಮೂಲಕ ಅಭಿವೃದ್ಧಿಯಲ್ಲಿ ಪಾರದರ್ಶಕತೆ ತರುವಲ್ಲಿ ಒಂದು ಕ್ರಾಂತಿಯನ್ನೆ ಮಾಡಿದರು. ಇದನ್ನು ದುರುಪಯೋಗ ಮಾಡಿಕೊಂಡುವರು ಇದ್ದಾರೆ. ಭ್ರಷ್ಟರಿಗೆ ಎಚ್ಚರಿಕೆ ಘಂಟೆಯೂ ಆಗಿದೆ.

 ಪ್ರಸ್ತುತ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಜಿಯವರ ಕನಸಿನ ಡಿಜಿಟಲ್ ಇಂಡಿಯಾ ಮತ್ತು ದಿಶಾ ಸಮಿತಿಯ ಮಾರ್ಗದರ್ಶಿ ಸೂತ್ರದ ಪ್ರಕಾರ, 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡೇಟಾ ಜಿಲ್ಲೆಯಾಗಿ ಘೋಷಣೆ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ, ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯ ಹಾಗೂ ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯನಾದ ನಾನು ಶೇ 100 ಗುರಿ ತಲುಪಲು, ಡಿಜಿಟಲ್ ಅನುಸರಣೆ ಮಾಡಲು ನಿರ್ಧಿಷ್ಠ ಗುರಿ ಹೊಂದಿದ್ದೇನೆ’

ಅಭಿವೃದ್ಧಿಯಲ್ಲಿ ಸಾಮಾಜಿಕ ಕ್ರಾಂತಿ ಬರಲೇ ಬೇಕು. ಬಹುತೇಕ ಯೋಜನೆಗಳು ಪೊಲಿಟಿಕಲ್ ಯೋಜನೆಗಳಾಗುತ್ತಿವೆ. ಅನಗತ್ಯ ಕಡೆ ಸಾಕಷ್ಟು ಹಣ ದುರುಪಯೋಗವಾಗಲಿದೆ. ನೀಡ್ ಬೇಸ್ಡ್ ಯೋಜನೆ ಮಾಡುವಲ್ಲಿ ಅಧಿಕಾರಿಗಳಿಗೆ ತೊಡರುಗಳು ಜಾಸ್ತಿ ಇವೆ. ವರ್ಷ ಪೂರ್ತಿ ಕೆಲಸ ಮಾಡದೇ ಮಾರ್ಚ್‌ನಲ್ಲಿ ಬಿಲ್ ಮಾಡುವ ಸಂಸ್ಕೃತಿ ಕೊನೆಗಾಣಿಸಲೇ ಬೇಕು. ಇದೆಲ್ಲಾ ಮಾಡಬೇಕಾದರೆ ಡಿಜಿಟಲ್ ಡೇಟಾ ಪಕ್ಕಾ ಇರಬೇಕು. ಇದರ ಅನಾಲೀಸಿಸ್ ಮಾಡಿದಲ್ಲಿ ಮಾತ್ರ ಸಾಧ್ಯ.

 ಈ ಪ್ರಯತ್ನದ ಮೊದಲ ಭಾಗವಾಗಿ ದಿನಾಂಕ:೨೧.೦೯.೨೦೧೯ ರಿಂದ ಶ್ರಮಿಸಿದ್ದರಿಂದ, ತುಮಕೂರು ಜಿಐಎಸ್ ಪೋರ್ಟಲ್ ಉದ್ಘಾಟನೆ ಆಗಿದೆ. ಕಾಟಾಚಾರಕ್ಕೆ ಆಗದೇ ತುಮಕೂರು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿರುವ ಅಂತರರಾಷ್ಟ್ರೀಯ ಮಟ್ಟದ ಏರ್ ಪೋರ್ಟ್-2 ಯೋಜನೆಯಿಂದ ಆರಂಭಿಸಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ್ತು ನಗರ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯದ ಸ್ಥಿತಿಗತಿಯ ಬಗ್ಗೆಯೂ ಡಿಜಿಟಲ್ ಪ್ರಗತಿಪರಿಶೀಲನೆ ಮಾಡಲು ಯಾವ, ರೀತಿ ಶ್ರಮಿಸಲಾಗಿದೆ ಎಂಬ ಬಗ್ಗೆ ಡಿಜಿಟಲ್ ದಾಖಲೆ ಮಾಡಲು ಪಣತೊಟ್ಟಿದ್ಧೆನೆ.  

ಅಧಿಕಾರಿ ಮಿತ್ರರರೇ ನೀವೂ ಯಾರು ನನಗೆ ಶತ್ರುಗಳಲ್ಲ! ನೀವೂ ಕಾಲಮಿತಿಯಲ್ಲಿ ಮಾಡದ ಅಭಿವೃದ್ಧಿ ಕೆಲಸ ಮಾತ್ರ ಶತೃತ್ವ ಮಾಡಲಿದೆ. ಕಚೇರಿ ಸಿಬ್ಬಂಧಿ, ನಿರ್ವಣೆಗೆ ವೆಚ್ಚ, ಓಡಾಡಲು ವಾಹನ ಟಿಎ-ಡಿಎ ಎಲ್ಲವನ್ನೂ ಪಡೆಯುವ ತಾವೂಗಳು ಏಕೆ ಸರಿಯಾಗಿ ಕಾರ್ಯನಿರ್ವಹಿತ್ತಿಲ್ಲ? ಎಲ್ಲರೂ ಹೀಗಿಲ್ಲ ಪರಿಶುದ್ಧ ಕೆಲಸಗಾರರ ಸಂಖ್ಯೆಯೇ ಜಾಸ್ತಿ ಇದೆ.

 ಇದೆಲ್ಲಾ ನೀವು ಕೈಗೊಳ್ಳುವ ಯೋಜನೆಗಳ ರೀತಿಯಲ್ಲಿದೆ. ನಾನು ಇಂದಿನಿಂದ ಯೋಜನಾವಾರು ಅನಾಲೀಸಸ್ ಮಾಡುತ್ತೇನೆ. ಒಬ್ಬ ಸಂಸದ ತನ್ನ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಎಷ್ಟು ಯೋಜನೆಗಳು ಬರಲಿವೆ. ಈ ವರ್ಷ ಎಷ್ಟು ಹಣ ಬಂದಿದೆ, ಎಷ್ಟು ಹಣ ಖರ್ಚಾಗಿದೆ  ಎಂಬ ಪಕ್ಕಾ ದಾಖಲೆಯನ್ನು ತುಮಕೂರು ಸೇರಿದಂತೆ ದೇಶದ ಯಾವೊಬ್ಬ ಸಂಸದನು ಹೇಳುವ ಸ್ಥಿತಿಯಲ್ಲಿ ಇಲ್ಲ.

 ಮತ್ತೆ ದಿಶಾ ಸಮಿತಿ ಏಕಿರಬೇಕು. ಮಾನ್ಯ ಪ್ರಧಾನಿಯವರ ಉದ್ದೇಶವಾದರೂ ಏನು? ಕೆಲಸವಿಲ್ಲದೆ ಕಾಟಾಚಾರಕ್ಕೆ ಸಭೆ ನಡೆಯಬೇಕೆ. ದೇಶದಲ್ಲಿಯೇ ಒಂದು ಮಾದರಿ ದಿಶಾ ಸಭೆ ನಡೆಯಬೇಕಾದರೆ ಕೆಲವರ ಪಾಲಿಗೆ ಯಾರಾದರೂ ಒಬ್ಬರು ವಿಲನ್ ಆಗಲೇ ಬೇಕಾಗಿದೆ.

 ಸರ್ಕಾರಿ ಬಸ್ಸಿನಲ್ಲಿ ಓಡಾಡಿಕೊಂಡು, ಯಾವುದೇ ಟಿಎ-ಡಿಎ ಪಡೆಯದೇ 31 ವರ್ಷ ಅಭಿವೃದ್ಧಿ ತಪಸ್ಸು ಮಾಡುವ ನಮ್ಮ ಸಂಸ್ಥೆಯ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿಯಲ್ಲಿ ನಾನೊಬ್ಬನೇ ಯಾವ ರೀತಿ ದಾಖಲೆ ಸಂಗ್ರಹ ಮಾಡಿದ್ದೇನೆ ನೋಡಿ. ಎಷ್ಟು ಯೋಜನೆಗಳ ಬಗ್ಗೆ ಸುಧಾರಣೆ ಮಾಡಿಸಿದ್ದೇನೆ ಎಂಬುದು ನನಗಂತು ಹರ್ಷತಂದಿದೆ. ಇದೂ ಒಂದೆರಡು ದಿವಸದ ಕೆಲಸವಲ್ಲ, ಫೋರಂ 20 ವರ್ಷ ಪೂರೈಸಲಿದೆ.

 ಫೋರಂಗೆ ನಾನೇ ಅಧ್ಯಕ್ಷ, ನಾನೇ ಜವಾನ, ನಾನೇ ಗುಮಾಸ್ತ, ನಾನೇ ಡ್ರೈವರ್, ನಾನೇ ಕಂಪ್ಯೂಟರ್ ಆಪರೇಟರ್, ನಾನೇ ಹೌಸ್ ಕೀಫರ್, ನಾನೇ ಇ ಪೇಪರ್ ಎಡಿಟರ್, ನಮ್ಮ ಕಚೇರಿಯೇ ನನ್ನ ವಾಸದ ಮನೆ, ನನ್ನ ಪರಿಶುದ್ಧ ತಪಸ್ಸು ಅಭಿವೃದ್ಧಿ. ಸತ್ಯ ಕೆಲವರಿಗೆ ಕಹಿಯಾಗಲಿದೆ. ಆದರೇ ನಾನು ಏನೂ ಮಾಡಲು ಸಾಧ್ಯವಿಲ್ಲ. ನಾನು ನಿಗದಿ ಮಾಡಿಕೊಂಡಿರುವ ಕಾಲಮಿತಿ ಕೇವಲ ದಿನಾಂಕ:15.08.2022  (75 ನೇ ಸ್ವಾತಂತ್ರ್ಯದ ದಿವಸ) ರವರೆಗೆ ಮಾತ್ರ.

 ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮಿತ್ರರರೇ-ದಯವಿಟ್ಟು ಕ್ಷಮಿಸಿ,  ಕಳ್ಳಾಟ ಆಡುವ ಅಧಿಕಾರಿಗಳಿಗೆ, ಉಡಾಫೆ ಹೊಡೆಯುವ ಅಧಿಕಾರಿಗಳಿಗೆ ಶಕ್ತಿಪೀಠ ಫೌಂಡೇಷನ್ ಸಿಂಹ ಸ್ವಪ್ನವಾಗಲಿದೆ. ದುರ್ಗಿ ಅವತಾರ ತಾಳಲೇ ಬೇಕಾಗಿದೆ.

 ಉತ್ತಮವಾಗಿ ಕಾಲ ಕಾಲಕ್ಕೆ ಅಫ್‌ಲೋಡ್ ಮಾಡುವ, ಬಂದಿರುವ ಹಣವನ್ನು ಆಯಾ ವರ್ಷದಲ್ಲಿ ಖರ್ಚು ಮಾಡುವ, ಹೊಸ, ಹೊಸ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸುವ, ಹುಡುಕಿ ತಡಕಿ ಕೆಲಸಮಾಡುವ ಅಧಿಕಾರಿಗಳಿಗೆ ರ್‍ಯಾಂಕಿಂಗ್ ನೀಡಿ ಶಕ್ತಿಪೀಠ ಫೌಂಡೇಷನ್ ಮತ್ತು ಜಿಲ್ಲಾಡಳಿತದ ಪರವಾಗಿ ನಾಗರೀಕ ಸನ್ಮಾನ ಮಾಡಲಾಗುವುದು ಎಂಬ ಆಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

 ನಮ್ಮ ಇ-ಪೇಪರ್ ದಿಶಾ ಪೇಪರ್ ಆಗಿ ಪರಿವರ್ತನೆ ಆಗಿದೆ ಎಂಬ ಭಾವನೆಯನ್ನು ಆನೇಕ ಓದುಗರು ವ್ಯಕ್ತಪಡಿಸುತ್ತಿದ್ದಾರೆ. ದಿನಾಂಕ:19.12.2019 ರಂದು ಸರಳವಾಗಿ ಆರಂಭಿಸಿದ ಪೇಪರ್ ಅನಾಲಿಟಿಕ್ಸ್ ಗಮನಿಸಿ.

ದೇಶ – ವಿದೇಶಗಳಿಂದ ಓದುಗರು ನನಗೆ ಸ್ಪೂರ್ತಿ ತುಂಬುತ್ತಿರುವುದನ್ನು ನೋಡಿ ನನಗಂತೂ ಖುಷಿಯಾಗಿದೆ. ಅದೇ ರೀತಿ ವಿವಿಧ ಸ್ಟೇಟಸ್ ಓದಿ ನಕ್ಕು ಎಂಜಾಯ್ ಮಾಡುತ್ತಿದ್ದೇನೆ, ಪರ- ವಿರೋಧ ಯಾವುದೇ ಅಭಿಪ್ರಾಯಗಳಿಗೆ ಕಾಮೆಂಟ್ ಮಾಡದಿರಲು ನಿರ್ಧರಿಸಿದ್ದೇನೆ ಓದುಗರು ದಯವಿಟ್ಟು ಕ್ಷಮಿಸಿ. 

-ಕುಂದರನಹಳ್ಳಿ ರಮೇಶ್