TUMAKURU:SHAKTHUIPEETA FOUNDATION
ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟವನ್ನು ಸಮಗ್ರ ಅಭಿವೃದ್ಧಿ ಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ದಿಶಾ ಸಮಿತಿ ಅಧ್ಯಕ್ಷ ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ದಿನಾಂಕ:22.01.2021 ರಂದು ನಡೆದ ದಿಶಾ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಮಕೂರು ಜಿಲ್ಲೆಯ ಪ್ರವಾಸೋಧ್ಯಮ ಕ್ಷೇತ್ರಗಳ ಜಿಐಎಸ್ ಲೇಯರ್ ಮಾಡಿ ತುಮಕೂರು ಜಿಐಎಸ್ ಪೋರ್ಟಲ್‌ಗೆ ಅಫ್ ಲೋಡ್ ಮಾಡಲು ಸೂಚಿಸಿದ್ದಾರೆ.
ಮಧುಗಿರಿ ಏಕಶಿಲಾ ಬೆಟ್ಟ ಅಭಿವೃದ್ಧಿ ಬಗ್ಗೆ ಕನಸು ಕಾಣುತ್ತಿರುವ ಆಸಕ್ತರು ಸೂಕ್ತ ಸಲಹೆ ನೀಡುವ ಮೂಲಕ ಉತ್ತಮ ಯೋಜನೆ ರೂಪಿಸುವುದು ಅಗತ್ಯವಾಗಿದೆ.