21st November 2024
Share

TUMAKURU:SHAKTHIPEETA FOUNDATION

ಮಧುಗಿರಿ ಮಾಜಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರ ಮನವಿ ಮೇರೆಗೆ ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟದಲ್ಲಿ ಕೇಬಲ್ ಕಾರ್ ನಿರ್ಮಿಸುವುದಾಗಿ 2015-16 ನೇ ಸಾಲಿನ ಆಯವ್ಯಯದಲ್ಲಿ ಆಗಿನ ಮಾನ್ಯಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಮಂಡಿಸಿದ್ದು ಇತಿಹಾಸ.

ಮಧುಗಿರಿ ತಾಲ್ಲೂಕು ಕಸಬಾ ಹೋಬಳಿ, ಹರಿಹರರೊಪ್ಪ  ಗ್ರಾಮದ ಸರ್ವೆ ನಂಬರ್ 7 ರಲ್ಲಿ 65 ಎಕರೆ 3 ಗುಂಟೆ ಜಮೀನಿನ ಪೈಕಿ 9 ಎಕರೆ 20 ಗುಂಟೆ ಜಮೀನನ್ನು ಪ್ರವಾಸೋಧ್ಯಮ ಇಲಾಖೆಗೆ ಮಂಜೂರು ಮಾಡಲಾಗಿದೆಯಂತೆ.

ಕೇಬಲ್ ಕಾರ್ ನಿರ್ಮಿಸಲು ನಿರಪೇಕ್ಷಣಾ ಪತ್ರ ನೀಡುವಂತೆ ದಿನಾಂಕ:14.07.2016   ರಂದು  ಆರ್ಕ್ಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಇವರಿಗೆ ಪತ್ರ ಬರೆದಿದ್ದಾರಂತೆ. ಇದೂವರೆಗೂ ದಿಶಾ ಸಮಿತಿಯ ಸಭೆಯಲ್ಲಿ ಈ ವಿಚಾರ ಮಂಡಿಸದ ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳಿಗೆ ಯಾವ ರೀತಿ ಸನ್ಮಾನ ಮಾಡಬೇಕೋ ಗೊತ್ತಾಗುತ್ತಿಲ್ಲ.

ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಸುಮಾರು 5 ವರ್ಷ ನೆನೆಗುದಿಗೆ ಬೀಳುವುದಾದರೆ ಸಂಸದರ ಪಾತ್ರ ಏನು? ಈ ಯೋಜನೆಯ ಬಗ್ಗೆ ಅಧಿಕಾರಿಗಳು ಸಂಸದರ ಗಮನಕ್ಕೆ ಏಕೆ ತಂದಿಲ್ಲ? ಕೊನೆ ಪಕ್ಷ ಮಧುಗಿರಿ ಏಕಶಿಲಾಬೆಟ್ಟ ಅಭಿವೃದ್ಧಿ ಆಸಕ್ತರಾದರೂ ಸಂಸದರ ಗಮನಕ್ಕೆ ತಂದಿದ್ದಾರೋ ಅಥವಾ ಇಲ್ಲವೋ ನನಗಂತೂ ತಿಳಿದಿಲ್ಲ.

 ಈ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ದಿನಾಂಕ:22.01.2021   ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಸಂಸದರು ಕೂಡಲೇ ಆರ್ಕ್ಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಜೊತೆ ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ.