20th December 2024
Share

TUMAKURU:SHAKTHIPEETA FOUNDATION

ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ಈಗಾಗಲೇ ಘೋಶಿಸಿರುವಂತೆ, 2022 ರೊಳಗೆ ತುಮಕೂರು ಜಿಲ್ಲಾದ್ಯಾಂತ ಕೈಗೊಳ್ಳುವ ಯೋಜನೆಗಳಿಗೆ ಅಗತ್ಯವಿರುವ ಅನುದಾನವನ್ನು, 2021-2022 ರ ಆಯವ್ಯಯದಲ್ಲಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ಮನವೊಲಿಸಿ, ಅನುದಾನ ನಿಗದಿ ಮಾಡುವ ಮೂಲಕ ನಿಮ್ಮ ತಾಕತ್ತನ್ನು ಪ್ರದರ್ಶಿಸಿ. ಜನತೆಯ ಮತ್ತು ಮೋದಿಯವರ ಮನಸ್ಸಿನಲ್ಲಿ ಸದಾ ಕಾಲ ಉಳಿಯಿರಿ. ಅಧಿಕಾರಿಗಳ ಕೈಯಲ್ಲಿ ಕೆಲಸ ತೆಗೆಯುವುದು ಒಂದು ಕಲೆ ಇದು ಇಬ್ಬರಿಗೂ ತಿಳಿದಿರಲಿ.

ಶ್ರೀ ಜಿ.ಸಿ.ಮಾಧುಸ್ವಾಮಿಯವರು ತುಮಕೂರು ಜಿಲ್ಲಾ ಮಂತ್ರಿಯವರು ಮತ್ತು ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರು ಇಬ್ಬರ ಕೈಯಲ್ಲೂ ಪ್ರಭಲ ಅಸ್ತ್ರಗಳಿವೆ. ಒಬ್ಬರಿಗಿಂತ ಒಬ್ಬರು ಬುದ್ದಿವಂತರು, ಈ ಬುದ್ದಿವಂತಿಕೆಯನ್ನು ಮೋದಿಯವರ ಕನಸಿಗೆ ಬಳಸಿ ಇದು ಜಿಲ್ಲೆಯ ಜನತೆಯ ಧ್ವನಿ.’

  1. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ಕಾಂಪಿಟೇಷನ್ ಚೀನಾ ಯೋಜನೆಯಡಿಯಲ್ಲಿ ಜಿಲ್ಲೆಗೆ ಘೋಶಿಸಿದ್ದ ಕ್ರೀಡಾ ವಿಶ್ವವಿದ್ಯಾನಿಲಯ ಮತ್ತು ಕ್ರೀಡಾ ಕ್ಲಸ್ಟರ್ ಬದಲಾಗಿ ಜಿಲ್ಲಾದ್ಯಾಂತ ಪ್ರತಿ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ರೈತರ ಬೆಳೆಗಳಿಗೆ ಪೂರಕವಾದ ವಿವಿಧ ಫುಡ್ ಕ್ಲಸ್ಟರ್’ ಸ್ಥಾಪನೆ.
  2. 2022 ರೊಳಗೆ ಎಲ್ಲರಿಗೂ ಸೂರು ಯೋಜನೆಗಾಗಿ ನಿರ್ಧಿಷ್ಟ ಹಣ.
  3. 2022 ರೊಳಗಾಗಿ ಜಿಲ್ಲೆಯ ಎಲ್ಲಾ ರೈಲ್ವೆ ಮೇಲು ಸೇತುವೆ ಮತ್ತು ಕೆಳಸೇತುವೆಗಳ’ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ.
  4. 2022 ರೊಳಗಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಮತ್ತು ಮನೆಗಳಿಗೆ ವಿದ್ಯುತ್ ಸರಬರಾಜು’ ಮಾಡಲು ಅನುದಾನ.
  5. 2022 ರೊಳಗೆ ಜಿಲ್ಲೆಯ ಎಲ್ಲಾ ಮನೆಗಳಿಗೆ ಜಲಜೀವನ್ ಮಿಷನ್’ ಅಡಿಯಲ್ಲಿ ನಲ್ಲಿ ನೀರು ಸರಬರಾಜು ಮಾಡಲು ಅನುದಾನ.
  6. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ಎತ್ತಿನಹೊಳೆ ಯೋಜನೆಗೆ ಹೆಚ್ಚುವರಿ ಸುಮಾರು ೧೬ ಟಿಎಂಸಿ ಅಡಿ ನೀರಿನ ಕುಮಾರಧಾರ ಯೋಜನೆ’ಗೆ ಅನುದಾನ
  7. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ಹೇಮಾವತಿ ಯೋಜನೆಯಿಂದ ಮೈಕ್ರೋ ಇರ್ರಿಗೇಷನ್’ ಮಾಡಲು ಅನುದಾನ ಮತ್ತು ಉಳಿಯುವ ನೀರನ್ನು ಕೆರೆಗಳಿಗೆ ಅಲೋಕೇಷನ್ ಮಾಡುವುದು.
  8. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ಊರಿಗೊಂದು ಕೆರೆ-ಕೆರೆಗೆ ನದಿ ನೀರು’ ಯೋಜನೆಯಡಿ (ಹೇಮಾವತಿ, ಭಧ್ರಾ ಮೇಲ್ದಂಡೆ, ಎತ್ತಿನಹೊಳೆ ಮತ್ತುಕುಮಾರಧಾರ) ನದಿ ನೀರು ತುಂಬಿಸಲು ಅನುದಾನ.
  9. 2022 ರೊಳಗೆ ತುಮಕೂರು ಜಿಲ್ಲೆಯನ್ನು ಡೇಟಾ ಜಿಲ್ಲೆ’ಯಾಗಿ ಘೋಶಿಸಲು ಅಗತ್ಯವಿರುವ ಅನುದಾನ.(ಅಭಿವೃದ್ಧಿ ವಾರ್ ರೂಂ, ಅಭಿವೃದ್ಧಿ ಮೊಬೈಲ್ ಕಚೇರಿ, ಅಭಿವೃದ್ಧಿ ಗ್ರಂಥಾಲಯ ಮತ್ತು ಅಭಿವೃದ್ಧಿ ಇ-ಗ್ರಂಥಾಲಯ)
  10. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ರೈತರ ಮಕ್ಕಳಿಗೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ನೀಡಲು ಇನ್ವೆಸ್ಟ್ ತುಮಕೂರು’ ವರದಿ ಸಿದ್ಧಪಡಿಸಿ ವ್ಯಾಪಕ ಆಂದೋಲನ ರೂಪಿಸಲು ಅಗತ್ಯವಿರುವ ಅನುದಾನ.
  11. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ಸಂಜೀವಿನಿ ಮತ್ತು ಇತರೆ ಯೋಜನೆಯಡಿಯಲ್ಲಿ ಮಹಿಳಾ ಸಂಘಟನೆಗಳು ಉತ್ಪಾದನೆ ಮಾಡುವ ಉತ್ಪನ್ನಗಳ ಮಾರಾಟ ಮಾಡಲು ತುಮಕೂರು ನಗರದಲ್ಲಿ ಮಹಿಳಾ ಉತ್ಪನ್ನಗಳ ಮಾಲ್’.
  12. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ಒಂದು ಜಿಲ್ಲೆ – ಒಂದು ಉತ್ಪನ್ನ’ . ಯೋಜನೆಯ ಸದುಪಯೋಗ ಮಾಡಲು ಅಗತ್ಯವಿರುವ ಅನುದಾನ.
  13. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ರೈತರ ಮಕ್ಕಳಿಗೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಮತ್ತು ಸ್ವಯಂಉದ್ಯೋಗ ತುಮಕೂರು ಜಿಲ್ಲೆ ಪ್ರವಾಸೋಧ್ಯಮ ಮತ್ತು ಹೆರಿಟೇಜ್ ಸರ್ಕ್ಯೂಟ್‌ಗೆ’ ಅಗತ್ಯವಿರುವ ಅನುದಾನ.
  14. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ತುಮಕೂರು ಜಿಲ್ಲೆಯ ಅರ್ಹರೆಲ್ಲರಿಗೂ ಸಾಮಾನ್ಯ ಭಧ್ರತೆ’ ಯೋಜನೆಗಳ ಸೌಲಭ್ಯ ನೀಡುವುದು.
  15. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ತುಮಕೂರು ಜಿಲ್ಲೆಯ ಅರ್ಹರೆಲ್ಲರಿಗೂ ಆಯುಷ್ಮಾನ್ ಹೆಲ್ತ್ ಕಾರ್ಡ್’ ವಿತರಣೆ ಮಾಡುವುದು.
  16. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ತುಮಕೂರು ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಗ್ರಾಮ-1’ ಸ್ಥಾಪನೆ ಮಾಡುವ ಮೂಲಕ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಆಂದೋಲನ ಮಾಡುವುದು.
  17. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ತುಮಕೂರು ಜಿಲ್ಲೆಯ ಪ್ರತಿ ಗ್ರಾಮದ ವಾಟರ್ ಆಡಿಟ್, ವಾಟರ್ ಬಜೆಟ್ ಮತ್ತು ವಾಟರ್ ಸ್ಟ್ರಾಟಜಿಗಾಗಿ ಜಲಗ್ರಾಮ ಕ್ಯಾಲೆಂಡರ್’.
  18. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳ ಕರಾಬು ಹಳ್ಳಗಳ ಮತ್ತು ರಾಜಕಾಲುವೆಗಳ ಒತ್ತುವರಿ ತೆರವು ಮತ್ತು ಸಮಗ್ರ ಅಭಿವೃದ್ಧಿ’ ಮಾಡುವುದು.
  19. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡಲು ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳ ಕರಾಬು ದಾರಿಗಳ ಒತ್ತುವರಿ ತೆರವು ಮತ್ತು ಅಗತ್ಯವಿರುವ ಕಡೆ ಜಮೀನುಗಳಿಗೆ ದಾರಿ’ ಯನ್ನು ನಕ್ಷೆಯಲ್ಲಿ ನಮೂದಿಸುವುದು. 
  20. ತುಮಕೂರು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಘನತ್ಯಾಜ್ಯ ವಸ್ತುಘಟಕ’ ಸ್ಥಾಪನೆ ಮಾಡುವುದು.
  21. ಡಿಜಿಟಲ್ ಯೋಜನೆಯಡಿ ತುಮಕೂರು ಜಿಲ್ಲೆಯ ಪ್ರತಿಗ್ರಾಮಗಳಿಗೂ ಭಾರತ್ ನೆಟ್’ ಮೂಲಕ ’ವೈಫೈ’ ವ್ಯವಸ್ಥೆ ಮಾಡುವುದು.
  22. 2022 ರೊಳಗೆ ಮನೆ ಬಾಗಿಲಿಗೆ ಸ್ವಾಮಿತ್ವ ಯೋಜನೆಯಡಿ ಪ್ರಾಪರ್ಟಿ ಕಾರ್ಡ್’ ವಿತರಣೆ ಮಾಡುವುದು.
  23. 2022 ರೊಳಗೆ ಪ್ರತಿ ಗ್ರಾಮದಲ್ಲೂ ಶೇ 100 ರಷ್ಟು ’ಶೌಚಾಲಯ’ ಖಾತರಿ ಪಡಿಸಿಕೊಳ್ಳುವುದು.
  24. 2022 ರೊಳಗೆ ತುಮಕೂರು ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ಮರ-ಗಿಡ ಬೆಳೆಸಲು ಹಸಿರು ಆಂದೋಲನ’ ಕೈಗೊಳ್ಳುವುದು.
  25. 2022 ರೊಳಗೆ ತುಮಕೂರು ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿಗೊಂದು ಕೃಷಿ ಪತ್ತಿನ ಸಹಕಾರ ಸಂಘ’ ಸ್ಥಾಪನೆ ಮಾಡುವುದು.

 ಈ ಮೇಲ್ಕಂಡ ಎಲ್ಲಾ 25  ಯೋಜನೆಗಳ ಜಿ.ಐ.ಎಸ್ ಲೇಯರ್ ಮಾಡುವುದು ಅಗತ್ಯ.