TUMAKURU:SHAKTHIPEETA FOUNDATION
‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’
ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 80 ದಿವಸ.
ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-28 ದಿನಾಂಕ: 29.01.2021
ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ’ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡಲು ಅಗತ್ಯಕ್ರಮಕೈಗೊಳ್ಳಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ದಿನಾಂಕ:09.11.2020 ರಂದು ಆದೇಶ ನೀಡಿದ್ದರು.
ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಕಡತಕ್ಕೆ ಅನುಮೋದನೆ ನೀಡುವ ಮೂಲಕ ಗಣರಾಜ್ಯೋತ್ಸವ (26.01.2021) ಸಂದರ್ಭದಲ್ಲಿ ರಾಜ್ಯದ ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಜಲ ಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರು ಮತ್ತು ಅವರ ತಂಡದ ಅಂಗಳದಲ್ಲಿ ಚೆಂಡು ಬಿದ್ದಿತ್ತು.
‘ದಿನಾಂಕ:29.01.2021 ರಂದು ಶ್ರೀ ರಾಕೇಶ್ ಸಿಂಗ್ ರವರನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಬೇಟಿಯಾಗಿ ಸಮಾಲೋಚನೆ ಮಾಡಿದಾಗ ರಮೇಶ್‌ಜಿ ನಿಮ್ಮ ವಾಟ್ಸ್‌ಅಫ್ ನೋಡಿದೆ. ಇಂದಿನಿಂದಲೇ ಚಾಲನೆ ನೀಡುತ್ತೇನೆ ಎಂದು ತಿಳಿಸಿದ್ದಾರೆ’