6th December 2024
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು 2022 ಕಾಲಮಿತಿ ಹಾಕಿಕೊಂಡು ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಅವರ ಸಚಿವ ಸಂಪುಟದ ಸಹದ್ಯೋಗಿಗಳು ಸಹ ಕಾಲಮಿತಿ ಯೊಂದಿಗೆ ಯೋಜನೆ ಪೂರ್ಣಗೊಳಿಸಲು ಯೋಜನೆ ರೂಪಿಸುತ್ತಿದ್ದಾರೆ. ನಿಜಕ್ಕೂ ಇದೊಂದು ಒಳ್ಳೆಯ ಬೆಳವಣಿಗೆ.

‘ನೋಡಿ 100 ದಿವಸದ ಆಂದೋಲನ ಮಾಡಿ ದೇಶದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ನಲ್ಲಿ ನೀರು ಸರಬರಾಜು ಮಾಡಿ ಎಂಬ ಖಡಕ್ ಸಂದೇಶವನ್ನು ಕೇಂದ್ರ ಸರ್ಕಾರ ಘೋಶಿಸಿದೆ’

ಈ ಆದೇಶ ಬರುವುದಕ್ಕೆ ಮುಂಚಿತವಾಗಿಯೇ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯ ದಿಶಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆಮಾಡಿದ್ದು ಕಾಕತಾಳೀಯ.

ಯೋಜನೆ ಘೋಷಣೆ ಮಾಡಿದ್ದು ಯಾವ ದಿನ, 100 ನೇ ದಿನದ ವೇಳೆಗೆ ಪ್ರತಿದಿನ ಎಷ್ಟು ಶಾಲೆಗಳಿಗೆ ಮತ್ತು ಎಷ್ಟು ಅಂಗನಾಡಿಗಳಿಗೆ ನಲ್ಲಿ ನೀರು ಸರಬರಾಜು ಮಾಡಲು ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಲು ಸಂಸದರು ಸೂಚಿಸಿದ್ದಾರೆ.

ಅಧಿಕಾರಿಗಳು ನಾವು ಕ್ರಮಕೈಗೊಂಡಿದ್ದೇವೆ ಎಂದು ಸಭೆಗಳಲ್ಲಿ ಹೇಳುತ್ತಾರೆಯೇ ಹೊರತು, ಇದೂವರೆಗೂ ತುಮಕೂರು ಜಿಲ್ಲೆಯ ಸರ್ಕಾರಿ ಶಾಲೆಗಳ ಮತ್ತು ಅಂಗನವಾಡಿಗಳ ನಲ್ಲಿ ನೀರು ಸರಬರಾಜು ಆಗದೇ ಇರುವ  ಪಟ್ಟಿಯನ್ನೇ ದಿಶಾ ಸಮಿತಿ ಸದಸ್ಯರಾಗಾಗಲಿ ಅಥವಾ ದಿಶಾ ಸಮಿತಿ ಅಧ್ಯಕ್ಷರಿಗಾಗಲಿ ನೀಡಿದ ಹಾಗೆ ಕಾಣಿಸಲಿಲ್ಲ. ತುಮಕೂರು ಜಿಐಎಸ್ ಪೋರ್ಟಲ್‌ನಲ್ಲೂ ಲೇಯರ್ ಮಾಡಿದ್ದು ನನಗೆ ಕಾಣಲಿಲ್ಲ.

ಸಂಭಂದಿಸಿದ ಅಧಿಕಾರಿ ಮಿತ್ರರೇ, ಈ ಎರಡು ಯೋಜನೆಗಳ ಜಿಐಎಸ್ ಲೇಯರ್ ಮಾಡಿ, ಪ್ರತಿ ದಿವಸ ಎಷ್ಟು ಶಾಲೆಗಳ ಮತ್ತು ಅಂಗನವಾಡಿಗಳ ನಲ್ಲಿ ನೀರಿನ ಸಂಪರ್ಕ ಪೂರ್ಣಗೊಂಡಿವೆ, ಇನ್ನೂ ಎಷ್ಟು ಬಾಕಿ ಇವೆ, ಏಕೆ ನಲ್ಲಿ ನೀರು ಸರಬರಾಜು ಸಾಧ್ಯವಾಗಿಲ್ಲ ಎಂಬ ಮಾಹಿತಿ ತುಮಕೂರು ಜಿಐಎಸ್ ಪೋರ್ಟಲ್‌ನಲ್ಲಿಯೂ ಕ್ಲಿಕ್ ಮಾಡಿದ ತಕ್ಷಣ ನಮ್ಮ ಕಾಣಿಗೆ ಕಾಣಬೇಕು.

‘ಅಧಿಕಾರಿಗಳು ಹರಿಕಥೆ ಹೇಳಿದರೇ ನಮ್ಮ ದೇಶದ ಪ್ರಧಾನಿಯವರಿಗೆ, ನಮ್ಮ ಜಿಲ್ಲೆಯ ಸಂಸದರಿಗೆ ಮಾಡಿದ ಅಪಮಾನ ಅಲ್ಲವೇ?’ 

‘100 ದಿವಸದ ಆಂದೋಲನ ಪೂರ್ಣಗೊಂಡರೂ ಯೋಜನೆ ಪೂರ್ಣಗೊಳ್ಳದೇ ಇದ್ದರೆ, ಗ್ರಾಮಪಂಚಾಯಿತಿ ಅಧ್ಯಕ್ಷರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕೆಲಸವಾದರೂ ಏನು?’

ನಾಮಕವಾಸ್ಥೆ ತುಮಕೂರು ಜಿಐಎಸ್ ಪೋರ್ಟಲ್ ನಮಗೆ ಬೇಕಿಲ್ಲ, ಸಾಧನೆ ತೋರಿಸಿ ಮಾತನಾಡಿ ಎಂದು ನಮ್ಮ ವಿಜಯವಾಣಿ ಪತ್ರಿಕೆಯ ಮಿತ್ರರರಾದ ಶ್ರೀ ಕಾಳೇನಹಳ್ಳಿ ಜಗನ್ನಾಥ್‌ರವರು  ದಿಶಾ ಸಮಿತಿ ಸಭೆಯಲ್ಲಿ ಯೋಜನೆ ಬಗ್ಗೆ ನಾನು ಮಾತನಾಡಿದ ತಕ್ಷಣ ಡಿಜಿಟಲ್ ಎಚ್ಚರಿಕೆ ಕೊಟ್ಟರು.

 ನಂತರ ಪ್ರಜಾಪ್ರಗತಿಯ ಸಂಪಾದಕರಾದ ಶ್ರೀ ಎಸ್.ನಾಗಣ್ಣನವರು ಮತ್ತು ಅವರ ಪುತ್ರರಾದ ಶ್ರೀ ಮಧುರವರು ಜಿಐಎಸ್ ಪೋರ್ಟಲ್ ಸಾಧನೆ ಬಗ್ಗೆ ವಿಶೇಷ ವರದಿ ಮಾಡುತ್ತೇವೆ, ನಿಮ್ಮ ಪ್ರತಿಕ್ರಿಯೆ ಹೇಳಿ ಎಂದಾಗ ನಾನು ಅವರಿಗೆ ಹೇಳಿದ್ದು ಇಷ್ಟೆ, 100 ದಿವಸದ ಈ ಆಂದೋಲನದ ಬಗ್ಗೆ ತುಮಕೂರು ಜಿಐಎಸ್ ಪೋರ್ಟಲ್ ನಲ್ಲಿಯೇ ಉತ್ತರ ಕೊಡುತ್ತೇನೆ ಸಾರ್.

ನಾನು ಹಾಗೆಯೇ ಏನೇ ಹೇಳಿದರೂ ನನ್ನ ಮನಸ್ಸು ಒಪ್ಪುವುದಿಲ್ಲ ಎಂದು ಹೇಳಿದ್ದೇನೆ. ಅಧಿಕಾರಿಗಳೇ ನಿವೇನು ಹೇಳುತ್ತಿರಿ? ತುಮಕೂರು ಜಿಐಎಸ್ ಪೋರ್ಟಲ್ ಸಂಸ್ಥಾಪಕರೇ ನಿಮ್ಮ ಉತ್ತರ ಏನು? ಪೋರ್ಟಲ್ ನಲ್ಲಿ ಉತ್ತರಿಸಿ.

ನಮ್ಮ ವಿಧಾನಪರಿಷತ್ ಸದಸ್ಯರಾದ ಶ್ರೀ ತಿಪ್ಪೆಸ್ವಾಮಿರವರು ಹೇಳಿದ ಅಭಿವೃದ್ಧಿ ವಾರ್‌ರೂಂ’ ಕರ್ತವ್ಯ ಇದೇ ಸ್ವಾಮಿ. ಇದು ಮೋದಿಯವರು 2022 ರೊಳಗೆ ಪೂರ್ಣಗೊಳಿಸಲು ಘೋಶಿಸಿರುವ ಎಲ್ಲಾ ಯೋಜನೆಗಳ ಅಧಿಕಾರಿಗಳಿಗೂ ಎಚ್ಚರಿಕೆ ಘಂಟೆಯೇ, ತುಮಕೂರು ಜಿಐಎಸ್ ಪೋರ್ಟಲ್!’

ನಾನೂ ಏನೂ ಹೇಳಿಲ್ಲ, ಸಂಸದರು ಏನೂ ಹೇಳಿಲ್ಲ, ನಮ್ಮ ಪ್ರಧಾನಿಯವರು ಹೇಳಿದ ಕೆಲಸ ಮಾಡುತ್ತಿರೋ ಅಥವಾ ಕೆಲಸ ಮಾಡಲು ಏನು ತೊಂದರೆ ಎಂಬುದನ್ನು ಡಿಜಿಟಲ್ ರೂಪದಲ್ಲಿ ಹೇಳಿ ಅಧಿಕಾರಿ ಮಿತ್ರರೇ, ನಮ್ಮ ದಿಶಾ ಸಮಿತಿಯ ಹೊಣೆಗಾರಿಕೆ ಈ ಯೋಜನೆಗಳ ಪರಿಶೀಲನೆ ಅಷ್ಟೆ.