TUMAKURU:SHAKTHIPEETA FOUNDATION
ದಿನಾಂಕ:22.01.2021 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲೆಯ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ಪ್ರಮುಖ ಅಂಶಗಳು.
- ಮಾರ್ಚ್ 31 ರ ಗಡುವು:- ದಿನಾಂಕ:31.03.2021 ರೊಳಗೆ ಪ್ರತಿಯೊಂದು ಇಲಾಖೆಯು ಈಗಾಗಲೇ ಪೂರ್ಣಗೊಳಿಸಿರುವ ಜಿಐಎಸ್ ಲೇಯರ್ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಅಗತ್ಯವಿರುವ ಇತರೆ ಜಿಐಎಸ್ ಲೇಯರ್ ಪೂರ್ಣಗೊಳಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಕಾಲಮಿತಿ ಗಡುವು ನೀಡಿದರು.
- ವೆಬ್‌ಸೈಟ್ :– ಅಭಿವೃದ್ಧಿ ಇ ಗ್ರಂಥಾಲಯ ಆರಂಭಿಸಲು, ತುಮಕೂರು ಸ್ಮಾರ್ಟ್ ಸಿಟಿಯ ಇ- ಗ್ರಂಥಾಲಯದಲ್ಲಿ ಅಥವಾ ಪ್ರತ್ಯೇಕವಾಗಿ ವೆಬ್‌ಸೈಟ್ ಆರಂಭಿಸುವ ಬಗ್ಗೆ ದಿನಾಂಕ:05.02.2021 ರೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಿಇಓ ರವರಿಗೆ ಸೂಚಿಸಿದರು. ಅಭಿವೃದ್ಧಿ ಇ- ಗ್ರಂಥಾಲಯದಲ್ಲಿ ಸ್ರ್ಯಾತಂತ್ರ್ಯ ಪೂರ್ವದಿಂದ ಇದೂವರೆಗೂ ಜಿಲ್ಲೆಯಲ್ಲಿ ಆಗಿರುವ ಪ್ರತಿಯೊಂದು ಯೋಜನೆಗಳ ಮಾಹಿತಿಯೂ ಒಂದೇ ಕಡೆ ಲಭ್ಯವಾಗುವಂತೆ ಕ್ರೋಡೀಕರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸೂಚಿಸಿದರು.
- ಅಭಿವೃದ್ಧಿ ಗ್ರಂಥಾಲಯ:- ಅಭಿವೃದ್ಧಿ ಡಿಜಿಟಲ್ ಮಾಹಿತಿ ಜೊತೆಗೆ ಅಭಿವೃದ್ಧಿಗೆ ಸಂಭಂಧಿಸಿದ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿಗಳು ಮತ್ತು ಅಗತ್ಯವಿರುವ ಮಾಹಿತಿಗಳನ್ನು ಸಂಗ್ರಹಿಸುವ ಗ್ರಂಥಾಲಯ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸೂಚಿಸಿದರು.
- ಅಭಿವೃದ್ಧಿ ವಾರ್ ರೂಂ:- ತುಮಕೂರು ಜಿಲ್ಲಾ ಪಂಚಾಯತ್ ಮೇಲ್ಚಾವಣೆಯಲ್ಲಿ ನಿರ್ಮಾಣ ಮಾಡಿರುವ ಕಟ್ಟಡದಲ್ಲಿ ಅಭಿವೃದ್ಧಿ ವಾರ್ ರೂಂ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳಲು ಮತ್ತು ತುಮಕೂರು ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಷನ್ ಗ್ರೂಪ್‌ಗಳು, ಸಂಘ ಸಂಸ್ಥೆಗಳು ಸಮಾಲೋಚನೆ ನಡೆಸಲು ಪೂರಕ ವಾತಾವರಣ ಸೃಷ್ಟಿಸಲು ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಸೂಚಿಸಿದರು. ಇಲಾಖಾವಾರು ವಿವಿಧ ಯೋಜನೆಗಳ ಬಗ್ಗೆ ಶ್ರಮಿಸುವ ಸಂಘಸಂಸ್ಥೆಗಳ, ಪರಿಣಿತರ ಪಟ್ಟಿ ಸಿದ್ಧಪಡಿಸಲು ಅಗತ್ಯ ಕ್ರಮಕೈಗೊಳ್ಳಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸೂಚಿಸಿದರು.
- ತುಮಕೂರು ಜಿಐಎಸ್ ಪೋರ್ಟಲ್ ಸಮನ್ವಯತೆ:- ಎನ್.ಐ.ಸಿ. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ, ಎನ್.ಆರ್.ಡಿ.ಎಂಎ.ಎಸ್, ಕೆಎಂಡಿಎಸ್ ಮತ್ತು ಅಗತ್ಯವಿರುವ ಎಲ್ಲಾ ಸಂಸ್ಥೆಗಳ ಸಮನ್ವಯತೆ ಮತ್ತು ಸಹಯೋಗದಲ್ಲಿ ತುಮಕೂರು ಜಿಐಎಸ್ ಪೋರ್ಟಲ್ ಕಾರ್ಯ ನಿರ್ವಹಿಸಬೇಕು. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿರುವ ಡಿಜಿಟಲ್ ಮಾಹಿತಿಗಳನ್ನು ದಿನಾಂಕ:28.02.2021 ರ ಕಾಲಮಿತಿ ಗಡುವು ನೀಡಿ ಲಿಂಕ್ ಮಾಡಲು ಅಗತ್ಯ ಕ್ರಮಕೈಗೊಳ್ಳಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸೂಚಿಸಿದರು.
- ಪ್ರಧಾನಿಯವರು ಘೋಶಿಸಿರುವ ಕಾಲಮಿತಿ ಯೋಜನೆಗಳ ಜಿಐಎಸ್ ಲೇಯರ್:- ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು 2019 ರೊಳಗೆ, 2022 ರೊಳಗೆ, 2024 ರೊಳಗೆ, 100 ದಿವಸದಲ್ಲಿ ಹೀಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಿಗದಿಪಡಿಸಿರುವ ಎಲ್ಲಾ ಯೋಜನೆಗಳ ಜಿಐಎಸ್ ಲೇಯರ್ ಮಾಡಲು ಮತ್ತು ನಿಗದಿತ ಅವಧಿಯೊಳಗೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡೇಟಾ ಜಿಲ್ಲೆಯಾಗಿ ಘೋಶಿಸಲು, ಅಂಕಿ ಅಂಶಗಳ ಇಲಾಖೆ ಪ್ರಕಟಿಸುವ ಅಂಕಿ ಅಂಶಗಳ ಪ್ರತಿಯೊಂದು ಮಾಹಿತಿಗೂ ಜಿಐಎಸ್ ಲೇಯರ್ ಇರುವಂತೆ ಮಾಡಲು ಆಂದೋಲನದ ರೂಪದಲ್ಲಿ ಅಗತ್ಯ ಕ್ರಮಕೈಗೊಳ್ಳಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸೂಚಿಸಿದರು.
- ಅಭಿವೃದ್ಧಿ ಯೋಜನೆಗಳ ಇಂಡೆಕ್ಸ್: 2019-20 ಮತ್ತು 2020-21 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಪ್ರತಿಯೊಂದು ಇಲಾಖೆಯೂ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಮತ್ತು ಒಟ್ಟು ಮೊತ್ತದ ಇಂಡೆಕ್ಸ್ ಸಿದ್ಧಪಡಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸೂಚಿಸಿದರು.
- 2021-2022 ನೇ ಸಾಲಿನ ಯೋಜನೆಗಳು:- ಏಫ್ರಿಲ್ ಮೊದಲ ವಾರದಲ್ಲಿ ನಡೆಯುವ ದಿಶಾ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಂಡಿಸುವ 2021-2022 ನೇ ಸಾಲಿನ ಆಯವ್ಯಯದ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಪಟ್ಟಿ ಮಾಡಿ ವರ್ಷದ ಆರಂಭದಿಂದಲೇ, ಯೋಜನೆ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸೂಚಿಸಿದರು.
- ಪ್ರಧಾನಿವರಿಗೆ ವರದಿ:- ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ವರದಿ ಸಲ್ಲಿಸಲು ದಿನಾಂಕ:31.03.201 ರೊಳಗೆ, ಇದೂವರೆಗೂ ನಡೆದಿರುವ 6 ದಿಶಾ ಸಮಿತಿ ಸಭೆಗಳು ಮತ್ತು ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ನಡೆಯುವ 7 ನೇ ಸಭೆಯ ನಡವಳಿಕೆಗಳು ಸೇರಿದಂತೆ, ದಿಶಾ ಸಮಿತಿಯ ದೂರದೃಷ್ಟಿ ವರದಿಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಿದ್ಧಪಡಿಸಿಕೊಳ್ಳಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸೂಚಿಸಿದರು.