4th February 2025
Share

ರಾಜ್ಯ ಮಟ್ಟದ ದಿಶಾ ಸಮಿತಿಗೆ ಕೇಂದ್ರದಿಂದ ನಾಲ್ಕು ಜನ ಸಂಸದರನ್ನು ನೇಮಕ ಮಾಡಬೇಕಿದೆ. ಇದೂವರೆಗೂ ಸಂಸದರನ್ನು ನೇಮಕ ಮಾಡದೇ ಇರಲು ಕಾರಣವೇನು ಎಂದು ಕೇಂದ್ರ ಸರಕಾರದಲ್ಲಿ ದಿಶಾ ನೋಡಿಕೊಳ್ಳುತ್ತಿರುವ ಶ್ರೀ ಡಾ.ಎನ್.‌ ಶ್ರೀನಿವಾಸ್‌ ರಾವ್‌ ರವರನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ. ಜಿ.ಎಸ್.ಬಸವರಾಜ್‌ ರವರು ದೆಹಲಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಕೇಂದ್ರ ಸಕಾರದ ದಿಶಾ ಗೈಡ್‌ ಲೈನ್ಸ್‌ ಗೆ ಸಂಸದರು ನೀಡಿರುವ 9 ಸಲಹೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ಈ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ಸಲಹೆಗಳನ್ನು ಪರಿಗಣನೆಗೆ ತೆಗೆದು ಕೊಂಡಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಸಭೆಗಳು ಕಾಲ ಕಾಲಕ್ಕೆ ನಡೆಯಲೇ ಬೇಕಾಗುತ್ತದೆ ಎಂಬ ಮನವರಿಕೆಯನ್ನು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌ ಮಾಡಿದರು..