TUMAKURU:SHAKTHI PEETA FOUNDATION
ನಾನು ದಿನಾಂಕ:04.06.2021 ರಂದು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಜವಗೊಂಡನಹಳ್ಳಿ ಹೋಬಳಿ ನಾಡಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದೆ. ಇಲ್ಲಿನ ಜನ ಸರ್ವರ್ ಪ್ರಾಬ್ಲಮ್ ಅಂತೆ ಎಂದು ಗೊಣಗುತ್ತಿದ್ದರು.
ನಾನು ನಾಡ ಕಚೇರಿಯ ಡೆಪ್ಯೂಟಿ ತಹಶೀಲ್ಧಾರ್ ಶ್ರೀ ಜಗನ್ನಾಥ್ ರವರೊಡನೆ ಸಮಾಲೋಚನೆ ನಡೆಸಿದೆ. ಡಾಟಾ ಅಫರೇಟರ್ ಶ್ರೀ ದೇವರಾಜು ಜೊತೆ ಚರ್ಚಿಸಿದೆ. ನಂತರ ಚಿತ್ರದುರ್ಗ ಜಿಲ್ಲೆ ಎನ್. ಐ.ಸಿ ಯ ಶ್ರೀ ಕಾಂತ್ ರವರ ಜೊತೆಯು ಚರ್ಚಿಸಿದೆ. ನಂತರ ಚಿತ್ರದುರ್ಗ ಜಿಲ್ಲೆಯ ಡಿಡಿಎಲ್ ಆರ್ ಶ್ರೀ ಕೃಷ್ಣಪ್ರಸಾದ್ ರವರೊಂದಿಗೂ ಚರ್ಚೆ ನಡೆಸಿದೆ. ಶೀಘ್ರವಾಗಿ ಭೂಮಿ ಸಾಪ್ಟ್ ವೇರ್ ರವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಹೊರಗಡೆ ಬಂದು ರೈತರೊಂದಿಗೆ ಸಮಾಲೋಚನೆ ನಡೆಸಿದೆ, ಕಳೆದ 5 ದಿನದಿಂದ ದಿನಾಲೂ ಬರುತ್ತಿದ್ದೇನೆ ಸಾರ್, ಇ-ಸ್ಕೆಚ್ ಮಾಡಿಸಲು ಹಣ ಪಾವತಿ ಮಾಡಿಕೊಳ್ಳಿ ಎಂದು ಕೇಳಿದರೆ, ಅದೆಂತದೋ ಸರ್ವರ್ ಪ್ರಾಬ್ಲಮ್ ಅಂತಾರೆ ಎಂದು ಶ್ರೀ ಅಶೋಕ್ ರವರು ಹೇಳಿದರು. ನಂತರ ಶ್ರೀ ತಿಮ್ಮನಾಯಕ್ ರವರೊಂದಿಗೆ ಮಾತನಾಡಿದೆ ಸಾರ್ ಆರ್.ಐ. ಹುಡುಕಿಕೊಂಡು ಬಂದೆ ಅವರು ಇಲ್ಲಿ ಯಾವಾಗ ಇರುತ್ತಾರೆ ಎಂದು ತಿಳಿಯುವುದಿಲ್ಲಾ ಎಂದು ಗೊಣಗಿದರು.
ಕುಮಾರಿ ಉಮಾ ರವರು ಸಾರ್ ನೀವೂ ಯಾರು ಎಂದರು. ನಾನು ದಿಶಾ ಸಮಿತಿ ಸದಸ್ಯ ಎಂದು ಪರಿಚಯ ಮಾಡಿಕೊಂಡೆ, ನಮ್ಮ ಕರ್ತವ್ಯದ ಬಗ್ಗೆಯೂ ಮಾತನಾಡಿದೆ. ಮೋದಿಯವರ ಡಿಜಿಟಲ್ ಇಂಡಿಯಾ ಹೇಗೆ ಕೆಲಸ ಮಾಡುತ್ತಿದೆ ಎಂದು ಮಾನಿಟರ್ ಮಾಡಲು ಸಾದ್ಯವಿಲ್ಲವೇ ಸಾರ್.
‘ಗ್ರಾಮ ಪಂಚಾಯಿತಿಗೆ ಹೋದರೂ ಸರ್ವರ್ ಪ್ರಾಬ್ಲಮ್ ಅಂತಾರೆ, ನಾಡ ಕಚೇರಿಗೂ ಹೋದರೂ ಸರ್ವರ್ ಪ್ರಾಬ್ಲಮ್ ಅಂತಾರೆ. ಹೋಗಲಿ ಸಾರ್, ಎಲ್ಲಿ ಎಷ್ಟು ಗಂಟೆ ಸರ್ವರ್ ಚೆನ್ನಾಗಿದೆ, ಎಷ್ಟು ಗಂಟೆ ಚೆನ್ನಾಗಿಲ್ಲ ಅಂತಾ ಒಂದೇ ಕಡೆ ಕುಳಿತು ಮಾನಿಟರ್ ಮಾಡಲು ಸಾದ್ಯವಿಲ್ಲವಾ ಸಾರ್’.
ಜಿಎಸ್ ಟಿ ಕಟ್ಟಲು ಮಧ್ಯರಾತ್ರಿ 12 ಗಂಟೆಗೆ ಕಡೇ ಸಮಯ ಎನ್ನುತ್ತಾರೆ. ಅವು ಮಾತ್ರ ಸರಿಯಾಗಿ ಇರುತ್ತವೆ. ನಮ್ಮ ಕೆಲಸಕ್ಕೆ ಸರ್ವರ್ ಪ್ರಾಬ್ಲಮ್ ಎಂದರೆ ಹೇಗೆ ಎಂದು ಹಿಗ್ಗಾಮುಗ್ಗಾ ಜಾಡಿಸಿದರು.
ನಾನು ಮೌನವಾಗಿ ಎಲ್ಲಾ ಕೇಳಿಸಿಕೊಂಡು ನಿಮ್ಮ ಸಲಹೆಯನ್ನು ಮಾನ್ಯ ಮುಖ್ಯ ಮಂತ್ರಿಯವರ ಗಮನಕ್ಕೆ ತರುತ್ತೇನೆ ಮೇಡಂ ಎಂದು ಹೇಳಿದೆ.
ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ಮೇಡಂ ರವರೇ ಮಾನ್ಯ ಮುಖ್ಯ ಮಂತ್ರಿಯವರ ಗಮನಕ್ಕೆ ತ0ದು ಈ ಸಮಸ್ಯೆಗೆ ಮುಕ್ತಿ ನೀಡಲು ಶ್ರಮಿಸುವಿರಾ?