19th May 2024
Share

TUMAKURU:SHAKTHI PEETA FOUNDATION

 ಶಕ್ತಿಪೀಠ ಕ್ಯಾಂಪಸ್ ನಲ್ಲಿ ದೇಶದ ನದಿ ಜೋಡಣೆ ಪ್ರಾತ್ಯಾಕ್ಷಿಕೆಯನ್ನು ಮಾಡುವ ಮೂಲಕ ‘ಜಲಜಾಗೃತಿ’ ಮೂಡಿಸಲು ಮತ್ತು ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಮೂಲಕ ರಾಜ್ಯದ ಎಲ್ಲಾ ಗ್ರಾಮಗಳ ಕೆರೆ-ಕಟ್ಟೆಗಳಿಗೆ ನದಿ ನೀರು ತುಂಬಿಸುವ ಮೂಲಕ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಲು ಶಕ್ತಿಪೀಠ ಫೌಂಡೇಷನ್ ಮುಂದಾಗಿದೆ ಇದೊಂದು ಅದ್ಭುತ ಯೋಚನೆ ಎಂದು ನಿವೃತ್ತ ಇಂಜಿನಿಯರ್ ಶ್ರೀ ಡಿ.ಎಸ್. ಹರೀಶ್ ತಿಳಿಸಿದರು. ಅವರು ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಡೆದ ಎರಡನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಕುಂದರನಹಳ್ಳಿ ರಮೇಶ್ ರವರದು ಒಂದು ವಿಶಿಷ್ಠ ಆಲೋಚನೆ. ಅವರು ಮಾತನಾಡಿ ಸುಮ್ಮನೆ ಕೂರುವವರಲ್ಲ, ಅಧಿಕಾರಿಗಳ ಜೊತೆ ಸೇರಿಕೊಂಡು ಯೋಜನೆಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಮಂಜೂರಾತಿ ಆಗುವವರೆಗೂ ಕಡತದ ಅನುಸರಣೆ ಮಾಡುವ ಮೂಲಕ ಯೋಜನೆ ಜಾರಿಗೆ ಶ್ರಮಿಸುವ ಹಠ ಅವರಲ್ಲಿದೆ.

ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗೆ ಫೈಲಟ್ ಯೋಜನೆಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ರೂಪಿಸುತ್ತಿದ್ದಾರೆ. ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ರಾಜ್ಯ ಮಟ್ಟದ ನೀರಾವರಿ ಯೋಜನೆಗಳ ಬಗ್ಗೆ ನಿರ್ಣಯ ಕೈಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಂತದಲ್ಲಿ ಒತ್ತು ನೀಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಚಿವ ರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಅವರು ಕೆರೆಗಳಿಗೆ ನದಿ ನೀರು ತುಂಬಿಸಲು ಶ್ರಮಿಸುತ್ತಿದ್ದಾರೆ . ಕೇಂದ್ರ ಸರ್ಕಾರದತ್ತ ಜಿಲ್ಲೆಯ ಜನತೆಯ ಚಿತ್ತ ಎನ್ನುವಂತಾಗಿದೆ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ನಂತರ ಹಲವಾರು ನೀರಾವರಿ ತಜ್ಞರ ಸಂಪರ್ಕದಲ್ಲಿದ್ದು ಎಲ್ಲರ ಸಲಹೆ ಪಡೆಯುವ ಮೂಲಕ ಕೇಂದ್ರ ಸರ್ಕಾರದ ಜಲಶಕ್ತಿ ಸದಸ್ಯರಾಗಿ ತಮ್ಮ ಕರ್ತವ್ಯಕ್ಕೆ ಒಂದು ಹೊಸ ರೂಪು ರೇಷೆಯೊಂದಿಗೆ ಕೊಡುಗೆ ಕೊಡುತ್ತಿರುವ ಬಸವರಾಜ್ ರವರ ಶ್ರಮ ಫಲ ನೀಡಲಿ ಎಂದು ಇಲ್ಲಿ ‘108 ಶಕ್ತಿದೇವತೆಗಳಿಗೆ ಬೇಡಿಕೊಳ್ಳುವ ಕ್ಷೇತ್ರ’ ಇದಾಗಿದೆ.

ನಾನು ಸಹ ಶಿವಮೊಗ್ಗ ಜಿಲ್ಲೆಯವನಾಗಿದ್ದು ಶರಾವತಿ ನೀರನ್ನು ಕುಡಿಯುವ ನೀರಿಗಾಗಿ ಬಳಸಲು ಒಂದು ಯೋಜನೆ ರೂಪಿಸಿದ್ದೆ. ಬಸವರಾಜ್ ರವರು ದಿಶಾ ಸಮಿತಿಗೆ ನನ್ನನ್ನು ಕರೆಸಿ ಪಿಪಿಟಿ ಪ್ರದರ್ಶನ ಮಾಡಲು  ತಿಳಿಸಿದರು. ನಂತರ ಮಾನ್ಯ ಮುಖ್ಯಮಂತ್ರಿಯವರಿಂದ ಆದೇಶ ಮಾಡಿಸಿ ಡಿಪಿಆರ್ ಮಾಡಲು ಶ್ರಮಿಸುತ್ತಿದ್ದಾರೆ.

ರಾಜ್ಯದ ಆನೇಕ ನೀರಾವರಿ ಆಸಕ್ತರನ್ನು ಕರೆಸಿ ಸಮಾಲೋಚನೆ ನಡೆಸಿದರು. ರಾಜ್ಯ ಸರ್ಕಾರದಲ್ಲಿ ಇರುವ ಎಲ್ಲಾ ಪ್ರಸ್ತಾವನೆಗಳ ಕಡತಗಳನ್ನು ಕೂಡಿ ಹಾಕಿ, ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ, ನಂತರ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಯೋಜನಾ ಇಲಾಖೆಯ ಮೂಲಕ ನ್ಯಾಷನಲ್ ಇನ್ಪ್ರಾ ಸ್ಟ್ರಚ್ಚರ್ ಪೈಪ್ ಲೈನ್ ಯೋಜನೆಗೆ ಸೇರ್ಪಡೆ ಮಾಡಲು ಕಡತದ ಅನುಸರಣೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಮುಖ್ಯ ಮಂತ್ರಿಯವರಿಂದ ಪ್ರಧಾನ ಮಂತ್ರಿಯವರೆಗೂ ಪತ್ರ ಬರೆಸಿ ಯೋಜನೆ ಜಾರಿಗೆ ಸಹಕಾರ ನೀಡಲು ಮನವಿ ಮಾಡಲು ಶ್ರಮಿಸಿದ್ದಾರೆ. ಇಲ್ಲಿ ಪ್ರಾತ್ಯಾಕ್ಷಿಕೆ ಮಾಡಿರುವುದು ಕಾಟಚಾರಕ್ಕಲ್ಲ ಎಂಬ ಸಂದೇಶವನ್ನು’ ಈಗಾಗಲೇ ನೀಡಿದ್ದಾರೆ.

ದೇಶದ 37 ರಾಜ್ಯಗಳಿಗೂ ಒಂದೊಂದು ನಿವೇಶನ ಕಾಯ್ದಿರಿಸಿ ಅಧ್ಯಯನ ಗಾರರಿಗೆ ಒಂದು ಕಾಮನ್ ಫೆಸಿಲಿಟಿ ಕೇಂದ್ರ ರೂಪಿಸುವ ಅಲೋಚನೆಯೇ ಒಂದು ಇನ್ನೊವೇಷನ್ ಆಗಿದೆ. ಹಲವಾರು ಯೋಜನೆಗಳ ಪರಿಣಿತರಿಗೆ ಇದು ಒಂದು ತವರು ಮನೆಯಾಗಲಿದೆ.’ ಇಂದು ಶಂಕುಸ್ಥಾಪನೆ ಮಾಡಿದ ಕಟ್ಟಡ ಒಂದು ಅಭಿವೃದ್ಧಿ ದೇವಾಲಯದ ಕಟ್ಟಡ’ ಎಂದರೆ ತಪ್ಪಾಗಲಾರದು ಎಂದು ಪ್ರತಿಪಾದಿಸಿದರು.

ವಯಸ್ಸು ಆದ ಹಾಗೆ ಸ್ಪೂರ್ತಿ ಕಡಿಮೆಯಾಗುವುದು ವಾಡಿಕೆ, ರಮೇಶ್ ರವರು ನಾನು ನೋಡಿದ ದಿನದಿಂದಲೂ ಇಲ್ಲಿಯವರೆಗೂ ಜಾಸ್ತಿ ಆಗುತ್ತಿದೆಯೇ ಹೊರತು ಕಡಿಮೆ ಆಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಹೋಗುವುದೇ ಒಂದು ಕಲೆ .

ನಾನು ರೂಪಿಸಿದ ಶರಾವತಿ ಯೋಜನೆ ಜಾರಿಯಾದರೆ ನನಗೆ ಅದಕ್ಕಿಂತ ನೆಮ್ಮದಿ ಇನ್ನೊಂದಿಲ್ಲ ಎಂಬ ಆಶಾ ಭಾವನೆ ವ್ಯಕ್ತ ಪಡಿಸಿದರು.