TUMAKURU:SHAKTHIPEETA FOUNDATION
1.ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್
ನದಿ ಜೋಡಣೆಗೆ ಪೂರಕವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 2016 ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಾರಿಗೆ ತಂದು ಭಾರತ ದೇಶದ ಪ್ರತಿಯೊಂದು ಸರ್ವೆ ನಂಬರ್,ಗ್ರಾಮ,ಗ್ರಾಮಪಂಚಾಯಿತಿ,ತಾಲ್ಲೂಕು, ಜಿಲ್ಲಾ, ರಾಜ್ಯವಾರು ಜನತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರು, ಕೃಷಿಗೆ ನೀರು ಹೀಗೆ ವಾಟರ್ ಬಡ್ಜೆಟ್, ವಾಟರ್ ಆಡಿಟ್, ವಾಟರ್ ಸ್ಟ್ರಾಟಜಿ ಮಾಡಲು ದೇಶದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಸಹ ‘ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್’ ಮಾಡಿ ವರದಿ ಸಲ್ಲಿಸಿದ್ದಾರೆ.
ಈ ವರದಿ ಪ್ರಕಾರ ತುಮಕೂರು ಜಿಲ್ಲೆಗೆ 2020 ಇಸವಿ ವೇಳೆಗೆ ಜನತೆಗೆ
1. ಕುಡಿಯುವ ನೀರಿಗಾಗಿ 5.1 ಟಿ.ಎಂ.ಸಿ ಅಡಿ ನೀರು,
2. ಜಾನುವಾರುಗಳಿಗೆ 1.12 ಟಿ.ಎಂ.ಸಿ ಅಡಿ ನೀರು,
3. ಕೃಷಿಗೆ 84.03 ಟಿ.ಎಂ.ಸಿ ಅಡಿ ನೀರು,
4. ಕೈಗಾರಿಕೆಗಳಿಗೆ 1.56 ಟಿ.ಎಂ.ಸಿ ಅಡಿ ನೀರು
5. ಇತರೆ ಉದ್ದೇಶಕ್ಕೆ 0.51 ಟಿ.ಎಂ.ಸಿ ಅಡಿ ನೀರು ಸೇರಿದಂತೆ
6. ಒಟ್ಟು 92.32 ಟಿ.ಎಂ.ಸಿ ಅಡಿ ನೀರಿನ ಅಗತ್ಯವಿದೆ ಎಂದು ವರದಿ ಸಿದ್ಧಪಡಿಸಿದ್ದಾರೆ.
7. ಜಿಲ್ಲೆಗೆ ಕೇವಲ 16.83 ಟಿ.ಎಂ.ಸಿ ಅಡಿ ನೀರು ಕೊರೆತೆಯಾಗಲಿದೆ
ನನ್ನ ಪ್ರಕಾರ ಈ ವರದಿ ಸಮರ್ಪಕವಾಗಿಲ್ಲ. ಅಟಲ್ ಭೂ ಜಲ್ ಯೋಜನೆಯಡಿ 199 ಗ್ರಾಮ ಪಂಚಾಯಿತಿಗಳು ಮತ್ತು ಜಲಾಮೃತ ಯೋಜನೆಯಡಿ 131 ಗ್ರಾಮ ಪಂಚಾಯಿತಿಗಳು ಹಾಗೂ ನಗರ ಜಲಶಕ್ತಿ ಯೋಜನೆಯಡಿ 11 ನಗರ ಸ್ಥಳೀಯ ಸಂಸ್ಥೆಗಳು ಸರಿಯಾಗಿ ‘ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ’ ಮಾಡಿದರೇ ಮಾತ್ರ ನಿಖರ ಮಾಹಿತಿ ದೊರೆಯುತ್ತಿದೆ.
2.ತುಮಕೂರು ಜಿಲ್ಲೆಗೆ ನದಿ ನೀರಿನ ಅಲೋಕೇಷನ್
1.ಹೇಮಾವತಿ ಯೋಜನೆಯಿಂದ ಅಚ್ಚುಕಟ್ಟಿಗೆ 19.073 ಟಿ.ಎಂ.ಸಿ ಅಡಿ ನೀರು, ಕುಡಿಯುವ ನೀರಿಗೆ 6.237 ಟಿ.ಎಂ.ಸಿ ಅಡಿ ನೀರು, ಒಟ್ಟು 25.31 ಟಿ.ಎಂ.ಸಿ ಅಡಿ ನೀರು,
2.ಭಧ್ರಾ ಮೇಲ್ದಂಡೆಯಿಂದ ಅಚ್ಚುಕಟ್ಟಿಗೆ 1.385 ಟಿ.ಎಂ.ಸಿ ಅಡಿ ನೀರು, ಕೆರೆಗಳಿಗೆ/ಕುಡಿಯುವ ನೀರಿಗೆ 3.025 ಟಿ.ಎಂ.ಸಿ ಅಡಿ ನೀರು, ಒಟ್ಟು 4.41 ಟಿ.ಎಂ.ಸಿ ಅಡಿ ನೀರು,
3.ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರಿಗೆ 2.43 ಟಿ.ಎಂ.ಸಿ ಅಡಿ ನೀರು, ಕೆರೆಗಳಿಗೆ 2.16 ಟಿ.ಎಂ.ಸಿ ಅಡಿ ನೀರು ಒಟ್ಟು 4.59 ಟಿ.ಎಂ.ಸಿ ಅಡಿ,
4.ತುಂಗಭದ್ರಾ ನದಿಯಿಂದ ಕುಡಿಯುವ ನೀರಿಗಾಗಿ 0.745 ಎಂಸಿಎಫ್‍ಟಿ (0.75 ಟಿ.ಎಂ.ಸಿ ಅಡಿ ನೀರು)
5.ಒಟ್ಟು 35.06 ಟಿ.ಎಂ.ಸಿ ಅಡಿ ನೀರು ಅಲೋಕೇಷನ್ ಆಗಿದೆ.
6.ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ದಿಗಾಗಿ 15.982 ಟಿ.ಎಂ.ಸಿ ಅಡಿ ನೀರು,
3.ಜಲಜೀವನ್ ಮೀಷನ್
ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳ ಗ್ರಾಮಗಳು, ಕಾಲೋನಿಗಳು,ತಾಂಡಾಗಳು ಬಡಾವಣೆಗಳು ಮತ್ತು ತೋಟದಲ್ಲಿ ನಿರ್ಮಾಣ ಮಾಡಿರುವ ಗುಂಪು ಮನೆಗಳು ಸೇರಿ 5500 ಜನವಸತಿ ಪ್ರದೇಶಕ್ಕೆ ಅಗತ್ಯವಿರುವ ನೀರು ಕೇವಲ 2 ಟಿ.ಎಂ.ಸಿ ಅಡಿ ನೀರು, ಒಟ್ಟು ಯೋಜನೆ ಅಂದಾಜು ರೂ 2000 ಕೋಟಿ
4. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು
ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮಗಳ ಕೆರೆಗಳಿಗೆ ಅಗತ್ಯವಿರುವ ನೀರನ್ನು ಲೆಕ್ಕಾ ಮಾಡುತ್ತಿದ್ದಾರೆ. ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮೈಕ್ರೋ ಇರ್ರಿಗೇಷನ್ ಮಾಡಿ, ಉಳಿಯುವ ನೀರನ್ನು ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೂ ಅಲೋಕೇಷನ್ ಮಾಡಲು ಅಧ್ಯಯನ ಆರಂಭವಾಗಿದೆ.
ಹಾಲಿ ನೀರಿನ ಅಲೋಕೇಷನ್ ಜೊತೆಗೆ ಸುಮಾರು ರೂ 10000 ಕೋಟಿ ವೆಚ್ಚದ ಸುಮಾರು 16 ಟಿ.ಎಂ.ಸಿ ಅಡಿ ನೀರಿನ ಕುಮಾರಧಾರ ನದಿ ಯೋಜನೆಯ ನೀರಿನಲ್ಲಿ ಅಗತ್ಯವಿರುವ ನೀರಿನ ಅಲೋಕೇಷನ್ ಪಡೆಯಬೇಕಿದೆ.
5. ಜಲಜೀವನ್ ಮಿಷನ್ ಕಾರಿಡಾರ್
ಕುಮಾರಧಾರ ಯೋಜನೆ ಮತ್ತು ಜಾಲಗುಣಿ ಡ್ಯಾಂ ಯೋಜನೆಯನ್ನು ‘ಜಲಜೀವನ್ ಮಿಷನ್ ಕಾರಿಡಾರ್’ ಆಗಿ ಕೇಂದ್ರ ಸರ್ಕಾರ ಮಂಜೂರು ಮಾಡಬೇಕು.
6.ಕೆರೆ-ಕಟೆಗಳಿಲ್ಲದ ಗ್ರಾಮಗಳಿಗೆ ಅಗತ್ಯವಿರುವ ನದಿ ನೀರು
ತುಮಕೂರು ಜಿಲ್ಲೆಯಲ್ಲಿ ಸುಮಾರು 700 ಗ್ರಾಮಗಳಲ್ಲಿ ಯಾವುದೇ ಕೆರೆ-ಕಟ್ಟೆಗಳು ಇಲ್ಲ ಎಂಬ ಒಂದು ಅಂದಾಜು ಇದೆ.ಅವುಗಳನ್ನು ಗುರುತಿಸಿ ಯಾವುದಾದರೊಂದು ಜಲಸಂಗ್ರಹಗಾರ ನಿರ್ಮಾಣ ಮಾಡಿ, ಅವುಗಳಿಗೆ ಅಗತ್ಯವಿರುವ ನದಿ ನೀರಿನ ಅಲೋಕೇಷನ್ ಅಧ್ಯಯನ ನಡೆಯುತ್ತಿದೆ.
7. ನೋಡೆಲ್ ಆಫೀಸರ್
ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಮತ್ತು ರಾಜ್ಯದ ನದಿ ಜೋಡಣೆ ಡಿಪಿಆರ್ ಮಾಡಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರನ್ನು ನೋಡೆಲ್ ಆಫೀಸರ್ ಆಗಿ ನೇಮಿಸಿದ್ದಾರೆ.
8. ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ.
ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಮಾದರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಣ್ಣ ನೀರಾವರಿ ಇಲಾಖೆ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ಶ್ರೀ ಮೃತ್ಯುಂಜಯ ಸ್ವಾಮಿರವರು ಸಲ್ಲಿಸಿದ್ದಾರೆ. ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲೆ ಒಂದು ಯೂನಿಟ್ ಎಂದು ಭಾವಿಸಿ ಪರಿಷ್ಟøತ ಪ್ರಸ್ತಾವನೆ ಸಲ್ಲಿಸಲು ಶ್ರೀ ಮೃತ್ಯುಂಜಯ ಸ್ವಾಮಿರವರಿಗೆ ಸಲಹೆ ನೀಡಿದ್ದಾರೆ.
ಮಂಜೂರಾತಿಗಾಗಿ ಇಬ್ಬರೂ ನಾಯಕರು ಶ್ರಮಿಸುತ್ತಿದ್ದಾರೆ.
9.ಮುಖ್ಯ ಮಂತ್ರಿಗಳಿಂದ ಪ್ರಧಾನ ಮಂತ್ರಿಯವರಿಗೆ ಪತ್ರ.
ಮಾನ್ಯ ಮುಖ್ಯ ಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ತುಮಕೂರು ಜಿಲ್ಲೆಯನ್ನು ಪೈಲಟ್ ಯೋಜನೆಯಾಗಿ ತೆಗೆದುಕೊಳ್ಳಲು ಪತ್ರ ಬರೆದಿದ್ದಾರೆ.
10.ಚುನಾಯಿತ ಜನಪ್ರತಿನಿಧಿಗಳ ಒಗ್ಗಟ್ಟು ಅಗತ್ಯ.
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕಿದೆ. ನದಿ ನೀರಿನ ರಿ ಅಲೋಕೇಷನ್ ಆಗಬೇಕಿದೆ.ಇದಕ್ಕೆ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ.
11. ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರು.
ತುಮಕೂರು ಜಿಲ್ಲೆಯ 11 ನಗರಗಳಿಗೆ ಕುಡಿಯುವ ನೀರಿಗಾಗಿ ಹಾಲಿ 2.88 ಟಿ.ಎಂ.ಸಿ ಅಡಿ ನೀರನ್ನು ಬಳಸಲಾಗುತ್ತಿದೆ, ಇನ್ನೂ 2.1 ಟಿ.ಎಂ.ಸಿ ಅಡಿ ನೀರಿನ ಅಗತ್ಯವಿದೆ.
12. ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು.
ತುಮಕೂರು ಜಿಲ್ಲೆಯ ಎಲ್ಲಾ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯವಿರುವ ಸುಮಾರು ಸುಮಾರು 4 ಟಿ.ಎಂ.ಸಿ ಅಡಿ ನೀರು, ಹಾಲಿ ಪುನರ್ ಬಳಕೆ ನೀರು ಸೇರಿದಂತೆ ಕೇವಲ ಒಂದು ಟಿ.ಎಂ.ಸಿ ಅಡಿ ನೀರಿನ ಅಲೋಕೇಷನ್ ಇದೆ. (ತುಮಕೂರು ನಿಮ್ಜ್, ವಿವಿಧ ಕೈಗಾರಿಕಾ ಪ್ರದೇಶ, ಹೆಚ್.ಎ.ಎಲ್ ಉದ್ದೇಶಿತ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸೇರಿ)
13.ಮೈಕ್ರೋ ಇರ್ರಿಗೇಷನ್ ಗೆ ಅಗತ್ಯವಿರುವ ನೀರು
ತುಮಕೂರು ಜಿಲ್ಲೆಯ ಕೃಷಿ, ತೋಟಗಾರಿಕಾ, ರೇಷ್ಮೆ ಇತರೆ ಬೆಳೆಗಳಿಗೆ ಮೈಕ್ರೋ ಇರ್ರಿಗೇಷನ್ ಯೋಜನೆಯಡಿ ಮಳೆ ಕೈಕೊಟ್ಟಾಗ ಬೇಕಾಗುವ ನೀರಿನ ಪಕ್ಕಾ ಲೆಕ್ಕಾ ಮಾಡುತ್ತಿದ್ದಾರೆ.
ನೇತ್ರಾವತಿ ಮೆಗಾ ಪ್ರಾಜೆಕ್ಟ್ ಸುಮಾರು ರೂ 63000 ಕೋಟಿ ವೆಚ್ಚದಲ್ಲಿ 100 ಟಿ.ಎಂ.ಸಿ ಅಡಿ ನೀರಿನ ಯೋಜನೆ ಅಡಿಯಲ್ಲಿ ಅಗತ್ಯವಿರುವ ನೀರನ್ನು ಅಲೋಕೇಷನ್ ಪಡೆಯ ಬೇಕಿದೆ.
ಶರಾವತಿ ಮತ್ತು ಆಘಿನಾಶಿನಿ ಬೇಡ್ತಿಯ ಯೋಜನೆಗಳು ಪರಿಶೀಲನೆಯಲ್ಲಿವೆ.
14.ತುಮಕೂರು ಜಿಲ್ಲೆಯಲ್ಲಿ ನಿರ್ಮಿಸಬಹುದಾದ ಜಲಸಂಗ್ರಹಾಗಾರಗಳು.
1. ಬೈರಗೊಂಡ್ಲು ಜಲಸಂಗ್ರಹಾಗಾರ.
2. ದೇವರಾಯನ ದುರ್ಗದ ಬಳಿ ಜಲಸಂಗ್ರಹಾಗಾರ.
3. ಕೊನೆಹಳ್ಳಿ ಜಲಸಂಗ್ರಹಾಗಾರ.
4. ಈರಲಗೆರೆ ಜಲಸಂಗ್ರಹಾಗಾರ.
5. ಕಲ್ಲುಹರದಗೆರೆ ಜಲಸಂಗ್ರಹಾಗಾರ.
6. ತುಂಬಾಡಿ ಜಲಸಂಗ್ರಹಾಗಾರ.
7. ಗಂಟೇನಹಳ್ಳಿ ಜಲಸಂಗ್ರಹಾಗಾರ.
8. ಗೂಬೆಹಳ್ಳ ಜಲಸಂಗ್ರಹಾಗಾರ.
9. ಹಾಗಲವಾಡಿ ಜಲಸಂಗ್ರಹಾಗಾರ.
10. ಗೂಬಲಗುಂಟೆ ಜಲಸಂಗ್ರಹಾಗಾರ.
ಹೀಗೆ ಹಲವಾರು ಜಲಸಂಗ್ರಹಗಾರಗಳ ಅಧ್ಯಯನ ಆರಂಭವಾಗಿದೆ.
15. ತುಮಕೂರು ಜಿಲ್ಲೆಯ ವಾಟರ್ ಬ್ಯಾಂಕ್ ಜಾಲಗುಣಿ ಡ್ಯಾಂ
ನಮ್ಮೆಲ್ಲರ ತಾಯಿ ಮಹರಾಣಿಯವರು ಚಿತ್ರದುರ್ಗದಲ್ಲಿ ನಿರ್ಮಿಸಿರುವ ‘ವಾಣಿ ವಿಲಾಸ ಡ್ಯಾಂ ಮಧ್ಯೆ ಕರ್ರ್ನಾಟಕದ ವಾಟರ್ ಬ್ಯಾಂಕ್ ಮಾದರಿ’ಯಲ್ಲಿ, ‘ತುಮಕೂರು ಜಿಲ್ಲೆಯ ವಾಟರ್ ಬ್ಯಾಂಕ್ ಜಾಲಗುಣಿ ಡ್ಯಾಂ’ ಗುಬ್ಬಿ ತಾಲ್ಲೂಕು ಮತ್ತು ತುಮಕೂರು ತಾಲ್ಲೋಕಿನ ಸುಮಾರು 10000 ಎಕರೆ ಪ್ರದೇಶದಲ್ಲಿ, ಸುಮಾರು 27 ಕೀಮೀ ಸುತ್ತಳತೆಯ ಸುಮಾರು 50 ಟಿ.ಎಂ.ಸಿ ಅಡಿ ನೀರಿನ ಸಾಮಥ್ರ್ಯ ಹೊಂದುವ ಅವಕಾಶವಿದೆ. ಅಧ್ಯಯನ ನಡಯುತ್ತಿದೆ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸನ್ನು ಜಿ.ಎಸ್.ಬಸವರಾಜ್ ರವರು ಕಳೆದ 30 ವರ್ಷದಿಂದ ಹೇಳುತ್ತಾ ಬಂದಿದ್ದಾರೆ.
ಈಗ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರು ತುಮಕೂರಿನ ಸ್ಪೆಕ್ಟ್ರಾ ಅಸೋಸಿಯೇಷನ್ ನ ಶ್ರೀ ಸತ್ಯಾನಂದ್ ರವರಿಂದ ಪರಿಕಲ್ಪನಾ ವರದಿ ಸಿದ್ಧಪಡಿಸುತ್ತಿದ್ದಾರೆ.
16. ಎನ್.ಪಿ.ಪಿ
1. ಭಧ್ರಾ ಮೇಲ್ದಂಡೆ ಯೋಜನೆ ಎನ್.ಪಿ.ಪಿ ಯೋಜನೆಗೆ ಶೀಘ್ರವಾಗಿ ಸೇರ್ಪಡೆಯಾಗಲಿದೆ.
2. ಎತ್ತಿನಹೊಳೆ ಯೋಜನೆ ಎನ್.ಪಿ.ಪಿ ಯೋಜನೆಗೆ ಶ್ರಮಿಸಲಾಗುತ್ತಿದೆ.
17.ಎನ್.ಐ.ಪಿ
ಕೇಂದ್ರ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ನ್ಯಾಷನಲ್ ಇನ್ಪಾಸ್ಟ್ರಚ್ಚರ್ ಪೈಪ್‍ಲೈನ್ ಯೋಜನೆಗೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯದ ಮೇರೆಗೆ ಕುಮಾರಧಾರ, ಎತ್ತಿನಹೊಳೆ, ನೇತ್ರಾವತಿ, ಆಘಿನಾಶಿನಿ ಯೋಜನೆಗಳು ಸೇರಿದಂತೆ ಸುಮಾರು ಮೂರು ಲಕ್ಷದ ಮೂವತ್ತು ಸಾವಿರ ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಸೇರ್ಪಡೆ ಮಾಡಲಾಗಿದೆ.
18. ಭಧ್ರಾ ಮೇಲ್ದಂಡೆ ಮತ್ತು ನೇತ್ರಾವತಿ ಯೋಜನೆ ಬರಬೇಕಾದಲ್ಲಿ ಕುಂದರನಹಳ್ಳಿ ರಮೇಶ್ ಮಗನ ಮೀಸೆ ಬೆಳ್ಳಗಾಗ ಬೇಕು- ಮಾಜಿ ಸಚಿವ ಶ್ರೀ ಟಿ.ಬಿ.ಜಯಚಂದ್ರ
ತುಮಕೂರು ಜಿಲ್ಲಾ ಪಂಚಾಯತ್ ನಲ್ಲಿ 1997-98 ರಲ್ಲಿ ಒಂದು ಸೆಮಿನಾರ್ ಏರ್ಪಡಿಸಲಾಗಿತ್ತು, ಶ್ರೀ ಜಿ.ಎಸ್.ಬಸವರಾಜ್ ರವರು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ, ಕುಂದರನಹಳ್ಳಿ ರಮೇಶ್ ಮತ್ತು ಶ್ರೀ ಸತೀಶ್ ಕೆ.ಮಲ್ಲಣ್ಣ ನೇತೃತ್ವ ವಹಿಸಿದ್ದರು. ಅಂದಿನ ಸಭೆಯಲ್ಲಿ ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರು ಭಧ್ರಾ ಮೇಲ್ದಂಡೆ ಮತ್ತು ನೇತ್ರಾವತಿ ಯೋಜನೆ ಬರಬೇಕಾದಲ್ಲಿ ಕುಂದರನಹಳ್ಳಿ ರಮೇಶ್ ಮಗನ ಮೀಸೆ ಬೆಳ್ಳಗಾಗ ಬೇಕು ಎಂದಿದ್ದರು. ಆಗಿನ ಪ್ರಜಾವಾಣಿ ವರದಿಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ಈ ರೀತಿ ಹೇಳಬಾರದಿತ್ತು ಎಂದಿದ್ದರು.
19. ಚಿಕ್ಕನಾಯಕನಹಳ್ಳಿಗೆ ಗುರುತ್ವಕಾರ್ಷಣೆಯಲ್ಲಿ ಹೇಮಾವತಿ ನೀರು ಬರುತ್ತದೆ ಎಂದಾಗ ಪರಮಶಿವಯ್ಯನವರೇ ಕನ್ಸ್‍ಲ್ಟೆಂಟ್ ಗೆ ದುಡ್ಡು ಕೊಡಿಸಲು ಹೇಳ ಬೇಕು ಅಷ್ಟೆ- ಈಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ.
ಚಿಕ್ಕನಾಯಕನಹಳ್ಳಿ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಲು ನೀರಾವರಿ ತಜ್ಞರಾದ ಜಿ.ಎಸ್.ಪರಮಶಿವಯ್ಯನವರಿಗೆ ಶ್ರೀ ಜೆ.ಸಿ ಮಾಧುಸ್ವಾಮಿಯವರು ಕಾಲವಾಕಾಶ ನೀಡಿದ್ದರು. ಈ.ಎಸ್.ಪರಮಶಿವಯ್ಯನವರು, ಯೋಜನೆ ರೂಪಿಸಿದ್ದ ಬೆಂಗಳೂರಿನ ಪ್ರೀತಿ ಕ್ಯಾಡ್ ನ ಶ್ರೀ ವೇದಾನಂದ್ ಮೂರ್ತಿರವರು ಮತ್ತು ನಾನು ಹೋಗಿದ್ದವೆವು.
ಶ್ರೀ ಜೆ.ಸಿ ಮಾಧುಸ್ವಾಮಿಯವರಿಗೆ ಯೋಜನೆ ಬಗ್ಗೆ ವಿವರ ನೀಡುತ್ತಿರುವಾಗಲೇ ಪರಮಶಿವಯ್ಯನವರೇ ಕನ್ಸ್‍ಲ್ಟೆಂಟ್ ಗೆ ದುಡ್ಡು ಕೊಡಿಸಲು ಹೇಳ ಬೇಕು ಅಷ್ಟೆ ಎಂದಿದ್ದರು.
20. ನಮ್ಮ ಹುಡುಗರು ಭದ್ರಾ ಮೇಲ್ದಂಡೆ ಮತ್ತು ನೇತ್ರಾವತಿ ಯೋಜನೆಗೆ ಹೋರಾಟ ಆರಂಭಿಸಿದ್ದಾರೆ- ದಿ.ವೈ.ಕೆ.ರಾಮಯ್ಯ
ಅಪ್ನಾಸ್ ನೇತೃತ್ವದಲ್ಲಿ ಜನವರಿ 1997 ರಲ್ಲಿ ಆರಂಭಿಸಿದ ಭದ್ರಾ ಮೇಲ್ದಂಡೆ ಮತ್ತು ನೇತ್ರಾವತಿ ಯೋಜನೆ ಹೋರಾಟ ನೋಡಿ ಮಾಜಿ ಸಚಿವ ದಿ.ವೈ.ಕೆ.ರಾಮಯ್ಯನವರು ನನ್ನನ್ನು ಮತ್ತು ಶ್ರೀ ಸತೀಶ್ ಕೆ.ಮಲ್ಲಣ್ಣರವರನ್ನು ಕುರಿತು ನಮ್ಮ ಹುಡುಗರು ಭದ್ರಾ ಮೇಲ್ದಂಡೆ ಮತ್ತು ನೇತ್ರಾವತಿ ಯೋಜನೆಗೆ ಹೋರಾಟ ಆರಂಭಿಸಿದ್ದಾರೆ ಎಂದಿದ್ದರು.
21. ಭದ್ರಾ ಮೇಲ್ದಂಡೆ ಮತ್ತು ನೇತ್ರಾವತಿ ಯೋಜನೆ ಜಾರಿಗಾಗಿ ಅರೆಸ್ಟ್
ಮಾಜಿ ಮುಖ್ಯ ಮಂತ್ರಿ ದಿ. ಜೆ.ಹೆಚ್.ಪಾಟೀಲ್ ರವರು ಮುಖ್ಯ ಮಂತ್ರಿಯವರಾಗಿದ್ದಾಗ ವಿಧಾನ ಸಭೆ ಅಧಿವೇಶನ ನಡೆಯುವಾಗ ಉಗ್ರಪ್ಪನವರ ಕಾರ್ಯತಂತ್ರದಿಂದ ಗೇಟ್ ಒಳಗೆ ನೀರಾವರಿ ತಜ್ಞ ದಿ.ಜಿ.ಎಸ್.ಪರಮಶಿವಯ್ಯನವರುÀ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಕೊಂದಂಡರಾಮಯ್ಯನವರು, ಮಾಜಿ ಸಚಿವ ದಿ. ಲಕ್ಷ್ಮಿ ನರಸಿಂಹಯ್ಯನವರು, ಮಾಜಿ ಲೋಕಸಭಾ ಸದಸ್ಯರಾದ ಶ್ರೀ ವಿ.ಎಸ್.ಉಗ್ರಪ್ಪನವರು ಮತ್ತು ನಾನು ಸೇರಿದಂತೆ ಸುಮಾರು 75 ಜನರು ಗೇಟ್ ಒಳಗೆ ನುಗ್ಗಿದಾಗ £ಮ್ಮನ್ನು ಅರೆಸ್ಟ್ ಮಾಡಿದ್ದರು.
22.ದಿನಾಂಕ:07.01.1997 ರಿಂದಲೂ ನಿರಂತರವಾಗಿ ಹೋರಾಟ.
ದಿನಾಂಕ:07.01.1997 ರಂದು ನೀರಾವರಿ ತಜ್ಞ ದಿ.ಜಿ.ಎಸ್.ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ‘ಅಪ್ನಾಸ್’ ಸಂಸ್ಥೆ ಆರಂಭಿಸಿ ಅಂದಿನಿಂದ ಇಲ್ಲಿಯವರಿಗೂ 24 ವರ್ಷದಿಂದ ನಿರಂತರವಾಗಿ ಶ್ರೀ ಜಿ.ಎಸ್.ಬಸವರಾಜ್ ಜೊತೆಗೂಡಿ ಹೋರಾಟ ಮಾಡುತ್ತಲೇ ಇದ್ದೇನೆ.
ಇನ್ನೂ ತಲೆ ಕೆಟ್ಟಿಲ್ಲ ದಿನದಿಂದ ದಿನಕ್ಕೆ ಪ್ರತಿಫಲ ಕಾಣುತ್ತಿದ್ದೇವೆ. ನಮಗೆ ನೂರಾರು ಜನರ ಸಹಕಾರ ಸದಾ ಇದೆ. ಅವರೆಲ್ಲರಿಗೂ ಚಿರ ಋಣೆಯಾಗಿಲೇ ಬೇಕು ಅಲ್ಲವೇ?
-ಕುಂದರನಹಳ್ಳಿ ರಮೇಶ್.
ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ, ಕರ್ನಾಟಕ.
ಭಾರತ ರತ್ನ, ನೀರಾವರಿ ತಜ್ಞ ದಿ.ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನದ ಅಂಗವಾಗಿ ವಿಶೇಷ ವರದಿ