11th December 2024
Share

TUMAKURU:SHAKTHIPEETA FOUNDATION

ಇಂಜಿನಿಯರ್ ಕಾಲೇಜು ವಿದ್ಯಾರ್ಥಿಗಳು ಕಟ್ & ಪೇಸ್ಟ್ ಪ್ರಾಜೆಕ್ಟ್ ರಿಪೋರ್ಟ್ ಮಾಡುವುದು ಶೇ 90 ರಷ್ಟಂತೆ. ಇದು ಒಂದು ದೇಶದ ದುರಂತ. ಆದರೇ ಬೆಂಗಳೂರಿನ GLOBAL ACADEMY OF TECHNOLOGY  ಕಾಲೇಜಿನ ವಿಧ್ಯಾರ್ಥಿಗಳಾದ ಚಿ.ಸಂದೇಶ್ ಕೆ ಮೂರ್ತಿ,ಕು.ಸ್ವಾತಿ ಎನ್. ಕು.ತೇಜಸ್ವಿನಿ.ಆರ್ ಮತ್ತು ಚಿ.ವಿನೋದ್ ಕೆ.ಎ ಎಂಬ ವಿದ್ಯಾರ್ಥಿಗಳು ಎಂಥಾ ಪ್ರಾಜೆಕ್ಟ್ / ಕಲ್ಪನಾ ವರದಿ ಮಾಡಿದ್ದಾರೆ ನೋಡಿ.

ಇದೇ ಪ್ರಾಜೆಕ್ಟ್ ನ ಇಷ್ಟು ಮಾಡಿಸಲು ನಮ್ಮ ಸರ್ಕಾರಗಳು ಕೋಟಿ ಕೋಟಿ ಖರ್ಚು ಮಾಡುತ್ತವೆ. ಅದು ಏನೇ ಇರಲಿ ಅಘಿನಾಶಿನಿ ನದಿಯಿಂದ ವಾಣಿವಿಲಾಸ ಡ್ಯಾಂ ಗೆ ಸುಮಾರು ರೂ 14288 ಕೋಟಿ ವೆಚ್ಚದಲ್ಲಿ ಸುಮಾರು 46.36 ಟಿ.ಎಂ.ಸಿ ಅಡಿ ನೀರು ತರುವ ಯೋಜನಾ ವರದಿ ಮಾಡಿದ್ದಾರೆ.

ಇದೊಂದು ‘ರಾಜ್ಯದ ನದಿ ಜೋಡಣೆ ‘ಎನ್ನ ಬಹುದು. ಈ ವಿದ್ಯಾರ್ಥಿಗಳಿಗೆ ಮತ್ತು ಅವರಿಗೆ ಜನ್ಮ ಕೊಟ್ಟ ತಂದೆ ತಾಯಿಗಳಿಗೆ ಹಾಗೂ ಈ ಯೋಜನೆ ಮಾಡಲು ಪ್ರೇರಣೆ ಮತ್ತು ಗೈಡ್ ಮಾಡಿದ ಮಹಾನುಭಾವರಿಗೆ, ಕಾಲೇಜಿಗೆ  ಸರ್ಕಾರಗಳು ಗೌರವ ಸಲ್ಲಿಸಲೇ ಬೇಕು. ನಮ್ಮ ಶಕ್ತಿಪೀಠ ಫೌಂಡೇಷನ್ ಗೌರವ ಸಲ್ಲಿಸಲಿದೆ.

ಕೇಂದ್ರ ಸರಕಾರದ NWDA ಗೆ ಈಗಾಗಲೇ ಸಲ್ಲಿಸಿದ್ದಾರಂತೆ.

ರಾಜ್ಯ ಸರ್ಕಾರದ ನದಿ ಜೋಡಣೆ ನೋಡೆಲ್ ಆಫೀಸರ್ ಗೂ ಸಲ್ಲಿಸಿದ್ದಾರೆ, ಕೇಂದ್ರ ಜಲಶಕ್ತಿ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೂ ಸಲ್ಲಿಸಲಿದ್ದಾರೆ. ಬಸವರಾಜ್ ರವರ ಕೈಗೆ ಸಿಕ್ಕರೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ನೀಡಿ ಯೋಜನೆಯ ಬೆನ್ನು ಹತ್ತುತ್ತಾರೆ. ಈ ವಿಧ್ಯಾರ್ಥಿಗಳ ಪ್ರೌಢಿಮೆಯನ್ನು ಹಾಡಿ ಹೊಗಳುವ ಕೆಲಸ ಮಾಡುತ್ತಾರೆ. ಪ್ರಧಾನಿ, ಮುಖ್ಯ ಮಂತ್ರಿ ಮತ್ತು ಸರ್ಕಾರಗಳ ಹಂತದ ಎಲ್ಲರಿಗೂ ವರದಿ ಸಲ್ಲಿಸುವ ಮೂಲಕ ಜಾಗೃತಿ ಮೂಡಿಸಲೇ ಬೇಕು. ಇದೊಂದು ಬೇರೆ ಕಾಲೇಜುಗಳಿಗೆ ಮಾರ್ಗದರ್ಶನವಾಗಲಿ.

ನೀವೇನಂತಿರಾ?