12th September 2024
Share

TUMAKURU:SHAKTHIPEETA FOUNDATION  

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಯಜ್ಞಕುಂಡ ಸ್ಥಳದ ಬಗ್ಗೆ ವಿಶೇಷ ಆಧ್ಯತೆ ನೀಡಬೇಕಾಗಿದೆ ಎಂದು ಆಧ್ಯಾತ್ಮಿಕ ಸಂಶೋಧನಾ ಕೇಂದ್ರದ ಶ್ರೀ ರಾಮಮೂರ್ತಿ ಪ್ರತಿಪಾದಿಸಿದರು. ವರ್ಷದ 365 ದಿವಸವೂ ಯಾವ ಯಾವ ಯಜ್ಞಗಳನ್ನು ಮಾಡಬಹುದು ಮತ್ತು ಯಾರು ಯಾರು ಎಷ್ಟು ವೆಚ್ಚದಲ್ಲಿ ಮಾಡುತ್ತಾರೆ ಎಂಬ ಡಾಟಾ ಬೇಸ್ ನೀಡುವುದಾಗಿಯೂ ತಿಳಿಸಿದರು.

ಅವರು ಸಹ ಈಗಾಗಲೇ ಯಜ್ಞ/ಹೋಮ ಮಾಡುವ ಕಟ್ಟಡವನ್ನು ಅವರ ಆಧ್ಯಾತ್ಮಿಕ ಕೇಂದ್ರದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಕಟ್ಟಡದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಉತ್ತಮವಾದ ಕಟ್ಟಡ ನಿರ್ಮಾಣ ಮಾಡಲು ತಾಂತ್ರಿಕ ಸಲಹೆ ನೀಡಿದರು.

ಪ್ರಜಾಪತಿ ದಕ್ಷಬ್ರಹ್ಮನು ಮಾಡಿದ ಯಜ್ಞದ ಸ್ಥಳ ಉತ್ತರಖಾಂಡದ ಹರಿಧ್ವಾರ ಜಿಲ್ಲೆಯ ಕಂಕಲ್ ನಲ್ಲಿದೆ. ಶಕ್ತಿಪೀಠ ಕ್ಯಾಂಪಸ್ ನಲ್ಲಿ ಈ ಸ್ಥಳವನ್ನು ಸಾಂಕೇತಿಕವಾಗಿ ಗುರುತಿಸಲಾಗಿದೆ. ಭೂಮಿಯ ಮೇಲೆ ನಿರ್ಮಾಣ ಮಾಡಿರುವ ಭಾರತದ ನಕ್ಷೆಯೊಳಗೆ ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದು ಎಂಬ ನಿರ್ಧಾರದಿಂದ ದೇವಾಲಯ ನಿರ್ಮಾಣ ಮಾಡಲು ಗುರುತಿಸಿರುವ ಸ್ಥಳದ ಅಗ್ನೇಯ ಭಾಗದಲ್ಲಿ ಯಜ್ಞ ಶಾಲಾ ಕಟ್ಟಡ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ.

ಸುಮಾರು 25 ಅಡಿ ಅಗಲ ಮತ್ತು 25 ಅಡಿ ನಿವೇಶವನ್ನು ಗುರುತಿಸಲಾಗಿದೆ. ಹೋಮ ಮಾಡುವವರಿಗೆ ಮತ್ತು ಹೋಮ ಮಾಡಿಸುವವರಿಗೂ ಉಳಿದುಕೊಳ್ಳಲು ಪ್ರತ್ಯೇಕವಾದ ಕೊಠಡಿಗಳನ್ನು ಹತ್ತಿರದಲ್ಲಿಯೇ ನಿರ್ಮಾಣ ಮಾಡಲು ಯೋಚಿಸಲಾಗಿದೆ.  ಈ ಬಗ್ಗೆ ಸಲಹೆಗಳನ್ನು ನೀಡಲು ಆಸಕ್ತರಿಗೆ ಮನವಿ ಮಾಡಲಾಗಿದೆ.