TUMAKURU:SHAKTHIPEETA FOUNDATION
ದೆಹಲಿಯ ಶ್ರೀ ಮತಿ ಉಮಾರವರು ಕರೆ ಮಾಡಿ ಮಾತನಾಡಿದ್ದು, ಸಾರ್ ನಾನು ನಿಮ್ಮ ಇ ಪೇಪರ್ ಓದುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯವನ್ನು ಹೆಚ್ಚಿನ ಅನುದಾನ ಪಡೆದ ರಾಜ್ಯವಾಗಿಸ ಬೇಕು ಎಂಬ ಕನಸು ನಿಮ್ಮ ಶಕ್ತಿಪೀಠ ಫೌಂಡೇಷನ್ ಸಂಸ್ಥೆಯದ್ದಾಗಿದೆ.
ನೀವೇಕೆ ಲೋಕಸಭೆ ಮತ್ತು ರಾಜ್ಯ ಸಭೆ ಸದಸ್ಯರ ಕಚೇರಿ ಸಿಬ್ಬಂಧಿ ಮತ್ತು ಸಲಹಾಗಾರರ ವಿಷನ್ ಗ್ರೂಪ್ ರಚಿಸಬಾರದು. ದೇಹಲಿಯಲ್ಲಿ ಮತ್ತು ಆಯಾ ಜಿಲ್ಲೆಗಳಲ್ಲಿ ಸರ್ಕಾರ ಸಂಸದರ ಕಚೇರಿಗೆ ವೇತನ ಸಹಿತ ಸಿಬ್ಬಂಧಿ ನೀಡಿದ್ದಾರೆ.
ಜೊತೆಗೆ ಸಂಸದರುಗಳೇ ವೇತನ ನೀಡಿ ಸಲಹಾಗಾರರನ್ನು ನೇಮಿಸಿಕೊಂಡಿದ್ದಾರೆ.ಇವರೆಲ್ಲರೂ ಒಟ್ಟು ಗೂಡಿದರೆ ಒಂದು ಶಕ್ತಿ ಆಗಲಿದೆ. ನೀವೂ ಇಷ್ಟ ಪಟ್ಟರೇ ದೆಹಲಿಯಲ್ಲಿ ನಮ್ಮ ಮನೆಯ ಒಂದು ಕೊಠಡಿಯನ್ನು ನಿಮಗೆ ಉಚಿತವಾಗಿ ನೀಡಲಿದ್ದೇವೆ ಎಂಬ ಸಲಹೆಯನ್ನು ನೀಡಿದರು.
ನಾನು ಅವರ ಸಲಹೆಗಳಲ್ಲಿ ಮೊದಲ ಸಲಹೆಯನ್ನು ಸ್ವೀಕರಿಸಿ ಈ ಪ್ರಯತ್ನ ಮಾಡುತ್ತೇನೆ. ಇದೊಂದು ಒಳ್ಳೆಯ ಸಲಹೆಯಾಗಿದೆ. ಆದರೇ ನಿಮ್ಮ ಮನೆಯ ಕಚೇರಿ ಕೊಠಡಿ ಈಗ ಬೇಡಿ ಮೇಡಂ.
ಇದೂವರೆಗೂ ನಾನು ದೆಹಲಿಯ ಧ್ವಾರಕದಲ್ಲಿ ಒಂದು ಮನೆಯನ್ನು ಕಚೇರಿಯಾಗಿ ಬಾಡಿಗೆಯಾಗಿ ಪಡೆದಿದ್ದೆ. ನವಂಬರ್ 30 ನೇ ತಾರೀಖು ಮನೆ ಖಾಲಿ ಮಾಡಿದೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯ ಒಂದು ಕೊಠಡಿಯಲ್ಲಿ ವೇಸ್ಟ್ ಆಗಿದ್ದ ಒಂದು ಕಾರಿಡಾರ್ ಅನ್ನೇ ಬಳಸಿಕೊಳ್ಳಲು ಉದ್ದೇಶಿಸಿದ್ದೇನೆ. ಸಂಸದರ ಅನುಮತಿಯ ಮೇರೆಗೆ ಈಗಾಗಲೇ ಶಿಪ್ಟ್ ಮಾಡಿದ್ದೇನೆ. ನನಗೆ ದೆಹಲಿಯಲ್ಲಿ ಇರಲು ಸಮಸ್ಯೆ ಇಲ್ಲ ಮೇಡಂ.
ಸಂಸದರ ಆಪ್ತ ಸಿಬ್ಬಂಧಿ ಮತ್ತು ಸಲಹಾಗಾರರ ವಿಷನ್ ಗ್ರೂಪ್ ಗೆ ಇದೇ ಚಳಿಗಾಲದ ಅಧಿವೇಶನ ಮುಗಿಯುವುದೊರಳಗೆ ಚಾಲನೇ ನೀಡುತ್ತೇನೆ. ಈ ಬಗ್ಗೆ ನಾನು ಸಹ ಚಿಂತನೆಯಲ್ಲಿದ್ದೆ. ದೆಹಲಿಯಲ್ಲಿ ಶ್ರೀ ಕುಮಾರ್ ಎಂಬುವವರು ಪ್ರತಿಯೊಬ್ಬ ಸಂಸದರ ಮನೆಗೂ ನನ್ನನ್ನು ಕರೆದುಕೊಂಡು ಹೋಗುವ ಕೆಲಸವನ್ನು ಕಳೆದ 10 ವರ್ಷದಿಂದಲೂ ಮಾಡುತ್ತಿದ್ದಾರೆ.
ಆತನಿಗೆ ಎಲ್ಲಾ 40 ಜನ ಸಂಸದರ ಸಿಬ್ಬಂಧಿಯ ಫೋನ್ ನಂಬರ್ ಸಂಗ್ರಹಿಸಲು ಹೇಳಿದ್ದೇನೆ. ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರು, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರು, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಎಂ.ಮಲ್ಲಿಕಾರ್ಜುಜನ್ ಖರ್ಗೆಯವರೊಂದಿಗೂ ಸಮಾಲೋಚನೆ ನಡೆಸುವ ಚಿಂತನೆಯಿದೆ. ಈ ಬಗ್ಗೆ ರಾಜ್ಯದ 40 ಜನ ಸಂಸದರ ಜೊತೆಯಲ್ಲೂ ಚರ್ಚೆ ಮಾಡುತ್ತೇನೆ.
ಈ ಭಾರಿ ದೆಹಲಿಗೆ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯಲ್ಲಿ ನಾನೂ ಮತ್ತು ನಮ್ಮ ಸಂಸ್ಥೆಯ ಸಲಹೆಗಾರರಾದ ಶ್ರೀ ಟಿ.ಆರ್.ರಘೊತ್ತಮರಾವ್ ರವರು ಸಹ ತೆರಳುತ್ತೆವೆ. ಸಾದ್ಯವಾದರೆ ತಾವೂ ಸಹ ಸಂಸದರ ಮನೆಗೆ ಬನ್ನಿ ಕುಳಿತು ಮಾತಾನಾಡೋಣ ಎಂದು ತಿಳಿಸಿದ್ದೇನೆ.
ದೆಹಲಿಯ ಮಿತ್ರರೇ ತಾವೂ ಕೈಜೋಡಿಸುವಿರಾ?