23rd June 2024
Share
G.S.BASAVARAJ. NAKUL. T.R. RAGHOTHAMARAO & KUNDARANAHALLI RAMESH

TUMAKURU:SHAKTHIPEETA FOUNDATION

ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರ ಹೆಚ್ಚುವರಿ ಆಪ್ತಕಾರ್ಯದರ್ಶಿಯವರಾದ ಶ್ರೀ ನಕುಲ್ ಅವರನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಭೇಟಿ ಮಾಡಿ ರಾಜ್ಯದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ವಿವಿಧ ಇಲಾಖೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯೊಂದಿಗೆ ಬನ್ನಿ, ಮೇಡಂ ಸಹ ಕರ್ನಾಟಕ ರಾಜ್ಯ ಪ್ರತಿನಿಧಿಸುತ್ತಿದ್ದಾರೆ ಸಾಧ್ಯವಾದಷ್ಟು ಅನೂಕೂಲ ಮಾಡಬಹುದು ಎಂಬ ಸಲಹೆ ನೀಡಿದರು.

ನಂತರ ಮಾತನಾಡಿದ ಶ್ರೀ ನಕುಲ್ ರವರು ನಿಮ್ಮ ಪೆಟ್ ಯೋಜನೆಯಾದ ವಿಜ್ಞಾನಗುಡ್ಡ’ ಯೋಜನೆ ಎಲ್ಲಿಗೆ ಬಂತು ರಮೇಶ್ ಎನ್ನುವ ಮೂಲಕ ಅವರೇ ಸರ್ಕಾರಿ ಜಮೀನು ಗುರುತಿಸಿ ನಿಡಿದ್ದ ನೆನಪು ಮಾಡಿಕೊಂಡರು.

ನಕುಲ್ ರವರು ಅಧಿಕಾರಿಗಳೊಂದಿಗೆ ಉದ್ದೇಶಿತ ವಿಜ್ಞಾನ ಗುಡ್ಡ ಯೋಜನೆಗೆ ಸರ್ಕಾರಿ ಜಮೀನು ನೀಡಲು ಮೂರು ಗ್ರಾಮಗಳ ಗಡಿ ಪ್ರದೇಶವಾದ ಗುಡ್ಡದ ತುತ್ತ ತುದಿಗೆ ಹತ್ತಿದ್ದರು. ಗುಡ್ಡದ ಮೇಲೆ ಇದ್ದ ಸುಮಾರು 25 ಎಕರೆ ಸಮತಟ್ಟು ಪ್ರದೇಶ ಸೇರಿದಂತೆ 200 ಎಕರೆ ಸರ್ಕಾರಿ ಜಮೀನಿನನಲ್ಲಿ ಯೋಜನೆ ಆರಂಭಿಸಲು ಸಲಹೆ ನೀಡಿದ್ದರು.

ಗುಡ್ಡದ ಕೆಳಭಾಗದಲ್ಲಿ ಸುಮಾರು 30 ಎಕರೆ ಸರ್ಕಾರಿ ಜಮೀನನ್ನು ನ್ಯಾಷನಲ್ ಇನ್ ಟ್ಟ್ಯೂಟ್ ಆಫ್ ಡಿಸೈನ್ ಯೋಜನೆಗೆ ಗುರುತಿಸಿದ್ದರು. ಭೂಕಬಳಿಕೆ ಮತ್ತು ಕ್ರಷರ್ ಗಾಗಿ ಅನಧಿಕೃತವಾಗಿ ಸರ್ಕಾರಿ ಜಮೀನು ಕಬಳಿಸಿದ್ದ ಪಾಪಿಗಳು ಯೋಜನೆಗೆ ಅಡ್ಡ ಹಾಕಿದರು.

ನಾನು ಈ ಮಾಹಿತಿಯನ್ನು ನಕುಲ್ ರವರಿಗೆ ಹೇಳಿದಾಗ ಸಂಸದರಿಗೂ ಒಂದು ರೀತಿ ಅವಮಾನವಾದಂತೆ ಆಯಿತು. ಸಂಸದರು ಹೊರಗಡೆ ಬಂದ ನಂತರ ಈಗಲೂ ಆರಂಭ ಮಾಡು ಎಂಬ ಸಲಹೆ ನೀಡಿದ್ದಾರೆ. ಸಾಕ್ಷಿಯಾಗಿ ಶ್ರೀ ಟಿ.ಆರ್.ರಘೊತ್ತಮರಾವ್ ಜೊತೆಯಲ್ಲಿದ್ದರು.

ಆದರೆ ನಾನು ಶಕ್ತಿಪೀಠ ಕ್ಯಾಂಪಸ್ ನಲ್ಲಿ ನನ್ನ ಕನಸಿನ ಯೋಜನೆಗೆ  ಚಾಲನೆ ನೀಡಿದ್ದೇನೆ ಮತ್ತೆ ಯಾವ ಯೋಜನೆ ಜಾರಿ ಮಾಡಬಹುದು ಎಂಬ ಬಗ್ಗೆ ಯೋಚನೆ ಮಾಡುತ್ತೇನೆ.