27th July 2024
Share
G.S.BASAVARAJ, T.R.RAGOTHAMARAO & KUNDARNAHALLI RAMESH

TUMAKURU:SHAKTHIPEETA FOUNDATION    

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ದಿನಾಂಕ:15.12.2021 ರಂದು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಬಿಜೆಪಿ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರುಗಳ ಮೀಟಿಂಗ್ ಕರೆದಿದ್ದರಂತೆ.

ಆ ಸಭೆಯ ವಿಶೇಷವೇನೆಂದರೆ ಪ್ರತಿಯೊಬ್ಬ ಲೋಕಸಭಾ ಸದಸ್ಯರು ತಮ್ಮ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷದ ಅಭಿವೃದ್ಧಿ ಬಗ್ಗೆ ಕೈಗೊಂಡಿರುವ  ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ಪಡೆದರಂತೆ.

ಅಷ್ಟೆ ಅಲ್ಲ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು, ಅಗತ್ಯವಿದ್ದಲ್ಲಿ ರೂಪಿಸಬಹುದಾದ ಹೊಸ ಯೋಜನೆಗಳ ರೂಪುರೇಷೆ ನೀಡಲು ಚರ್ಚಿಸಿದಂತೆ. ಇದೊಂದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಮೋದಿಜಿಯವರು ಡಿಕ್ಟೇಟರ್ ಯಾರ ಮಾತು ಕೇಳುವುದಿಲ್ಲ ಎನ್ನುವವರಿಗೆ ಒಂದು ಮೌನ ಉತ್ತರ ನೀಡಿರಬಹುದು.

ಸಭೆಯ ನಂತರ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದೆಹಲಿಯಲ್ಲಿ ಮನೆಗೆ ಬಂದ ತಕ್ಷಣ ಅಲ್ಲಿಯೇ ಇದ್ದ ಶ್ರೀ ಟಿ.ಆರ್.ರಘೋತ್ತಮರಾವ್ ಮತ್ತು ನನ್ನೊಡನೆ ಚರ್ಚೆ ಮಾಡಿ, ಇದೂವರೆಗೂ ಕೈಗೊಂಡಿರುವ ಯೋಜನೆಗಳು ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಒಂದು ವರದಿಯನ್ನು ಸಿದ್ಧಪಡಿಸಿ ಶ್ರೀ ನರೇಂದ್ರಮೋದಿಯವರಿಗೆ ಸಲ್ಲಿಸುವ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.

ಯಾರು ಏನೇ ಹೇಳಲಿ, ಬಸವರಾಜ್ ರವರು ಅಭಿವೃದ್ಧಿ ಯೋಜನೆಗಳ ಕನಸುದಾರ ಎಂದು ಅವರ ಆಜನ್ಮ ವಿರೋಧಿಗಳು ಒಪ್ಪುತ್ತಾರೆ. ಯಾವುದೇ ಕೆಲಸ ಹಿಡಿದರೆ ಯಾವ ಕಾರಣಕ್ಕೂ ಬಿಡುವುದಿಲ್ಲ. ಅವರು ಕೈಹಾಕಿದ ಯೋಜನೆಗಳಲ್ಲಿ ಇದೂವರೆಗೂ ನನೆಗುದಿಗೆ ಬಿದ್ದಿರುವುದು ‘ವಿಜ್ಞಾನ ಗುಡ್ಡ’ ಯೋಜನೆ ಒಂದೇ ಎಂಬುದು ನನ್ನ ಭಾವನೆ.

ಇನ್ನೂ ಅವರು ಹೇಳುತ್ತಿರುವ ಬಹುತೇಕ ಯೋಜನೆಗಳು ವಿವಿಧ ಹಂತದಲ್ಲಿವೆ. ಕನಸುದಾರರ ಪರಿಕಲ್ಪನೆಗಳು ಜಾರಿಗೆ ಬರಬೇಕಾದರೆ ಬಹಳಷ್ಟು ಸಮಯ ಬೇಕಾಗುತ್ತದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೀಸಲಾಗದೆ, ಕರ್ನಾಟಕದ ಸಮಗ್ರ ಅಭಿವೃದ್ಧಿ ಕನಸುಗಾರರು ಬಸವರಾಜ್ ರವರು.

ಈಗ ಪ್ರಧಾನಿ ಮೋದಿಯವರಿಗೆ ನೀಡುವ ವರದಿ ಬಸವರಾಜ್ ರವರ ಜೀವನದ ಅಭಿವೃದ್ಧಿ ಯೋಜನೆಗಳ ಒಂದು ಗ್ರಂಥವಾಗಲಿದೆ. ಈ ಗ್ರಂಥದ ಬರವಣಿಗೆ ಬಹಳ ಕಷ್ಟಕರವಾದ ಕೆಲಸ. 1984 ರಿಂದ ಇದೂವರೆಗೂ ಮತ್ತು ಮುಂದಿನ ಎರಡು ವರ್ಷದ ಇತಿಹಾಸ ದಾಖಲೆ ಮಾಡಬೇಕಿದೆ.

ಮೋದಿಯವರು ದಿಶಾ ಸಮಿತಿ ರಚಿಸಿದ ನಂತರ ಯೋಜನೆಗಳ ದಾಖಲೆಯಾಗಿದೆ. ದಿಶಾ ಸಮಿತಿಯಲ್ಲಿ ಚರ್ಚೆಯಾಗಿ ಜಾರಿ ಮಾಡದೇ ಇರುವ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ತಲೆನೋವಾಗಬಹುದು. ಅದು ಅಂತಹ ಸೋಮಾರಿ ಅಧಿಕಾರಿಗಳಿಗೆ ಚಾಟಿಯಾಗಲಿದೆ.

ಉಳಿದ ಅವಧಿಯ ಯೋಜನೆಗಳ ಮಾಹಿತಿ ಪಡೆಯುವುದು ಕಷ್ಟದ ಕೆಲಸ, ಆದರೂ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭವಾಗಿದೆ. ಇದು ಒಂದು ಆಂದೋಲನದ ರೀತಿ ನಡೆಯಲಿದೆ. ಏಕೆಂದರೆ ಭವಿಷ್ಯದ ಕರ್ನಾಟಕದ ಸಮಗ್ರ ಅಭಿವೃದ್ಧಿಗೂ ಒಂದು ರೂಪುರೇಷೆ ಸಿದ್ಧವಾಗುತ್ತಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೂ ಪತ್ರ ವ್ಯವಹಾರ ಆರಂಭವಾಗಿದೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಬಸವರಾಜ್ ರವರ ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸಿನ ಯೋಜನೆಗಳ ಜಾರಿಗಾಗಿ ಶ್ರಮಿಸುವ ಹೊಣೆಗಾರಿಕೆ ಹೊತ್ತಿದೆ.

 ಅಷ್ಟೆ ಅಲ್ಲ ಇನ್ನೂ ಮುಂದೆ ಕರ್ನಾಟಕ ರಾಜ್ಯದ ಯಾವುದೇ ಮೂಲೆಯ ಅಭಿವೃದ್ದಿ ಯೋಜನೆಗಳ ಮಾಹಿತಿಯ ಕಣಜವಾಗಲಿದೆ ಶಕ್ತಿಪೀಠ ಕ್ಯಾಂಪಸ್.

ತಾವೂ ಕೈಜೋಡಿಸಬಹುದು.