22nd June 2024
Share

TUMAKURU:SHAKTHIPEETA FOUNDATION

ದೇಶದ ಪ್ರಧಾನಿಯವರಾದ ಶ್ರೀ ನರೇಣದ್ರ ಮೋದಿಯವರು ಪ್ರಧಾನಿಯವರಾದ ಆರಂಭದಿಂದದಲೂ ನವಭಾತರದ ಕನಸು ಕಾಣುತ್ತಿದ್ದಾರೆ. ಕಾನ್ಪುರದಲ್ಲಿ ಐಐಟಿ ಪದವೀಧರರಿಗೆ ಮೋದಿಯವರು ಕರೆ ನೀಡಿದ್ದಾರೆ. ಕರ್ನಾಟಕದ ಮಾಜಿ ಮುಖ್ಯ ಮಂತ್ರಿಯವರಾಗಿದ್ದ ಶ್ರೀ ಸಿದ್ಧರಾಮಯ್ಯನವರು ಮೋದಿಯವರ ಕರೆಗೆ ಸ್ಪಂಧಿಸಿ ಅಂದು ನವಕರ್ನಾಟಕದ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿದ್ದು ಒಂದು ಇತಿಹಾಸ.

ನಾನೂ ಸಹ ಈ ಡಾಕ್ಯುಮೆಂಟ್ ಸಿದ್ಧಪಡಿಸುವ ಅವಧಿಯಲ್ಲಿ ವಿಶಿಷ್ಟ ಪಾತ್ರ ವಹಿಸಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನೇತೃತ್ವದಲ್ಲಿ ಒಂದು ವಿಷನ್ ಡಾಕ್ಯುಮೆಂಟ್ ಬಿಡುಗಡೆ ಗೊಳಿಸಿದ್ದು ಒಂದು ಇತಿಹಾಸ.

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ನನ್ನ ಮನವಿ ಮೇರೆಗೆ ಪಕ್ಷದ ಹಂತದಲ್ಲಿ ತುಮಕೂರು ಲೋಕಸಭಾ ಸದಸ್ಯರಾಗಿರುವ ಶ್ರೀ ಜಿ.ಎಸ್.ಬಸವರಾಜ್ ರವರ ಸಂಚಾಲಕತ್ವದಲ್ಲಿ ಅಭಿವೃದ್ಧಿ ಮಾಹಿತಿ ಪ್ರಕೋಷ್ಠ ರಚಿಸಿದ್ದರು. ಇದರಲ್ಲಿ ಈಗಿನ ಮುಖ್ಯ ಮಂತ್ರಿಯವರಾಗಿರುವ ಶ್ರೀ ಬಸವರಾಜ್ ಬೊಮ್ಮಾಯಿರವರು ಸಹ ಸಂಚಾಲಕರಾಗಿದ್ದರು. ಕಾರಾಣಾಂತರದಿಂದ ಈ ಸಮಿತಿ ಚುರುಕಾಗಲಿಲ್ಲ.

ಮೋದಿಯವರು ಕೇಂದ್ರ ಸರ್ಕಾರದ ಅನುದಾನದ ಸಮರ್ಪಕ ಬಳಕೆಗಾಗಿ ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿ ಮತ್ತು ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ರಚಿಸಿದ್ದಾರೆ. ಆದರೇ ನಮ್ಮ ರಾಜ್ಯದ ಮುಖ್ಯ ಮಂತ್ರಿಯವರಾಗಿದ್ದ ಶ್ರೀ ಸಿದ್ಧರಾಮಯ್ಯನವರು ಮತ್ತು ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಮಟ್ಟದ ಸಮಿತಿಯನ್ನೆ ರಚಿಸಿಲಿಲ್ಲ.

ಆದರೇ ನಂತರ ಅಧಿಕಾರಕ್ಕೆ ಬಂದ ಬಿ.ಎಸ್.ವೈ ರವರು ರಾಜ್ಯ ಮಟ್ಟದ ದಿಶಾ ಸಮಿತಿ ರಚಿಸಿ, ಮೂರು ಭಾರಿ ಸಭೆ ಕರೆದರೂ ಕಾರಣಾಂತರಗಳಿಂz ಇದೂವರೆಗೂ ಒಂದು ಸಭೆಯು ನಡೆದಿಲ್ಲ. ಈಗ ಬೊಮ್ಮಾಯಿರವರು ಏನು ಮಾಡುತ್ತಾರೋ ಗೊತ್ತಿಲ್ಲ.

ಆದರೂ ನಮ್ಮ ರಾಜ್ಯ ಮಟ್ಟದ ದಿಶಾ ಸಮಿತಿ ಬಹಳ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿಯೇ ಮಾದರಿಯಾಗುವ ಕನಸು ಕಂಡಿದೆ. ರಾಜ್ಯದ ಆದಾಯದ ಜೊತೆಗೆ ನಮ್ಮ ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತಿ ಹೆಚ್ಚಿನ ಅನುದಾನ ಪಡೆಯಲೇ ಬೇಕು ಎಂಬ ಪಣ ತೊಟ್ಟಿದೆ. ವಿದೇಶಿ ಹೂಡಿಕೆಗಳ್ಲೂ ನಾವೂ ಮಂಚೂಣೆಗೆ ಬರಲೇ ಬೇಕು ಎಂಬ ಚಿಂತನೆ ಮಾಡುತ್ತಿದೆ.

ಇದೇ ಸಮಯದಲ್ಲಿ ಮೋದಿಯವರು ಐಐಟಿ ಪಧವೀಧರರಿಗೆ ನವಭಾರತದ ಕನಸು ಬೀಜ ಬಿತ್ತಿದ್ದಾರೆ. ನಮ್ಮ ರಾಜ್ಯ ಸರ್ಕಾರ ಐಐಟಿ ಪಧವೀಗೆ ಸಮನಾಂತರವಾಗಿರುವ ಕಾಲೇಜ್ ಆದ ದೆಹಲಿಯ ನೇತಾಜಿ ಸುಭಾóóóಷ್ ಯೂನಿವರ್ಸಿಟಿಯ ವಿಧ್ಯಾರ್ಥಿಗೆ ಶಕ್ತಿಪೀಠ ಫೌಂಡೇಷನ್ ಮನವಿ ಮೇರೆಗೆ ಪ್ರಾಜೆಕ್ಟ್ ವರ್ಕ್ ಆಗಿ ಒಂದು ಮಹತ್ತರವಾದ ಹೊಣೆಗಾರಿಕೆ ನೀಡಿದೆ.

ನಮ್ಮ ದೇಶ ಮೋದಿಯವರ ನೇತೃತ್ವದಲ್ಲಿ 75 ನೇ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿದೆ. ನೂರನೇ ವರ್ಷದ ಸ್ವಾತಂತ್ರ್ಯದ ಅವಧಿಗೆ ಭಾರತ ವಿಶ್ವದಲ್ಲಿಯೇ ನಂಬರ್-1 ಆಗಬೇಕು ಎಂಬ ಕನಸು ಬಿತ್ತಿದ್ದಾರೆ. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಳೆದ 21 ವರ್ಷಗಳಿಂದ ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತಿಹೆಚ್ಚು ಅನುದಾನ ಪಡೆದ ರಾಜ್ಯವಾಗಬೇಕು ಎಂಬ ಕನಸು ಕಾಣುತ್ತಾ ಬಂದಿದೆ.

ಈಗ ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ, ಮುಂದಿನ 25 ವರ್ಷಗಳಲ್ಲಿ ನಮ್ಮ ಕರ್ನಾಟಕ ವಿಶ್ವದ ಗಮನ ಸೆಳೆಯ ಬೇಕು ಎಂಬ ಕನಸು ಕಾಣುತ್ತಿದೆ. ಪೂರಕವಾಗಿ ರಾಜ್ಯ ಮಟ್ಟದ ದಿಶಾ ಸಮಿತಿ ಒಂದು ಹೊಸ ಅಧ್ಯಾಯ ಬರೆಯಲು ಹೊರಟಿದೆ. ನಮ್ಮ ರಾಜ್ಯ ಸರ್ಕಾರ ಗುರಿ ತಲುಪಬೇಕಾದರೆ ಪಕ್ಷರಾಜಕಾರಣ ಬಿಡಬೇಕು. ಪ್ರತಿಷ್ಟೆಯಿಂದ ದೂರವಿರಬೇಕು, ಜಾತಿ ರಾಜಕಾರಣ ಮಾಡಬಾರದು.

ಸರ್ಕಾರ ಏನು ಮಾಡುತ್ತದೋ ಗೊತ್ತಿಲ್ಲ? ಶಕ್ತಿಪೀಠ ಫೌಂಡೇಷನ್ ಮಾತ್ರ 108 ಶಕ್ತಿದೇವತೆಗಳನ್ನು ಪೂಜಿಸುತ್ತಾ ಹೊಸ ಅಧ್ಯಾಯದ ಪುಟಗಳನ್ನು ಆರಂಭಿಸಿಲಿದೆ. ಕುಂದರನಹಳ್ಳಿಯಿಂದ ವಿಶ್ವ ಸಂಸ್ಥೆವರೆಗೆ  ಎಂಬ ಆಂದೋಲನವನ್ನು ಕುಂದರನಹಳ್ಳಿಯಿಂದಲೇ ಶೀಘ್ರವಾಗಿ ಆರಂಭಿಸಿಲಿದೆ.

ನಮ್ಮ ರಾಜ್ಯದ ಅಭಿವೃದ್ಧಿ ಕನಸುಗಾರರ ಸಲಹೆಗಳನ್ನು ಪಡೆಯಲಿದೆ. ಸರ್ವಪಕ್ಷಗಳ ಸಲಹೆ ಪಡೆಯಲಿದೆ, ಅಧಿಕಾರಿ ಮತ್ತು ನೌಕರರ ಭಾವನೆಗಳಿಗೆ ಸ್ಪಂಧಿಸಲಿದೆ. ಒಂದು ಮಹತ್ತರವಾದ ಅಭಿವೃದ್ಧಿ ಯೋಜನೆಗಳ ಕಣಜವನ್ನೇ ನಮ್ಮ ಮುಖ್ಯ ಮಂತ್ರಿಯವರಿಗೆ ಮತ್ತು ನಮ್ಮ ಪ್ರಧಾನ ಮಂತ್ರಿಯವರಿಗೆ ನೀಡುವ ಪಣ ತೊಟ್ಟಿದೆ.

ಶಕ್ತಿಪೀಠ ಕ್ಯಾಂಪಸ್ ಅನ್ನು ನನಗೆ ಜನ್ಮ ನೀಡಿದ ತಂದೆತಾಯಿಗೆ ಸಮರ್ಪಣೆ ಮಾಡಿದ್ದೇನೆ. ಈ ವರದಿಯನ್ನು ನನ್ನ ಹುಟ್ಟೂರು ಕುಂದರನಹಳ್ಳಿಗೆ ಸಮರ್ಪಣೆ ಮಾಡಲು ಚಿಂತನೆ ನಡೆಸಿದ್ದೇನೆ.

ನನ್ನ ಆತ್ಮೀಯ ಸ್ನೇಹಿತನೊಬ್ನ ಜೀವಮಾನವೆಲ್ಲಾ ಮಾಸ್ಟರ್ ಪ್ಲಾನ್, ಮಾಸ್ಟರ್ ಪ್ಲನಾನ್ ಅಂತ ಸತ್ತಿದ್ದು ಆಗಿದೆ ಸಾರ್,  ಎಂಪಿ. ಎಂಎಲ್‍ಎ ಇಬ್ಬರೂ ನಿಮಗೆ ಚೆನ್ನಾಗಿದ್ದಾರೆ ಈಗಲಾದರೂ ತುಮಕೂರಿನಲ್ಲಿ ಒಂದು ಮನೆ ಕಟ್ಟಿ ಸಾರ್, ಎಂದು ಸಲಹೆ ನೀಡಿದಾಗ ಆತನ ಕಪಾಳಕ್ಕೇ ಬಾರಿಸಿ ನಿನ್ನ ಸ್ನೇಹ ನನಗೆ ಬೇಡ ಎಂದು ಬಂದಿದ್ದೆ.

1988 ರಲ್ಲಿ ಕುಂದರನಹಳ್ಳಿ ಗಂಗಮಲ್ಲಮ್ಮ ದೇವಿಗೆ ಪೂಜಿಸಿ, 1991 ರಲ್ಲಿ ಅಫಿಕ್ಸ್ ಸಂಸ್ಥೆ ಆರಂಭಿಸಿ, ಕುಂದರನಹಳ್ಳಿ ಮಾದರಿ ಗ್ರಾಮ ಯೋಜನೆ ರೂಪಿಸಿ, ನಮ್ಮೂರಿನಲ್ಲಿ ಸುಮಾರು ರೂ 6400 ಕೋಟಿ ವೆಚ್ಚದ ಹೆಲಿಕ್ಯಾಪ್ಟರ್ ಘಟಕ ಸ್ಥಾಪನೆಗೆ ಕಾರಣವಾಯಿತು.

1997 ರಲ್ಲಿ ಅಪ್ನಾಸ್ ಸ್ಥಾಪಿಸಿ ರಾಜ್ಯದ ಸಮಗ್ರ ನೀರಾವರಿ ಆಂದೋಲನಕ್ಕೂ ಕಾರಣವಾಗಿದೆ.

2001 ರಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಸ್ಥಾಪಿಸಿ ತುಮಕೂರು ನಗರ ಮತ್ತು ಜಿಲ್ಲೆಯ ಆನೇಕ ಯೋಜನೆಗಳ ಜಾರಿಗೆ ಮುನ್ನುಡಿ ಬರೆಯಲಾಗಿದೆ.

2019 ರಲ್ಲಿ ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ, 2021 ರಲ್ಲಿ 108 ಶಕ್ತಿಪೀಠಗಳನ್ನು ಪೂಜಿಸಿ ಕರ್ನಾಟಕದ ಇತಿಹಾಸ ಬದಲಾಯಿಸುವಂತಹ ಆಂದೋಲನ ಆರಂಭಿಸಲು ಕರ್ನಾಟಕ ಸರ್ಕಾರದ ಜೊತೆಗೆ  ತಾವೂ ಕೈಜೋಡಿಸಲು ಮನವಿ.

ಶ್ರೀ ಜಿ.ಎಸ್. ಬಸವರಾಜ್ ರವರ 80 ನೇ ವರ್ಷದ ನೆನಪಿನ ಕಟ್ಟಡ ಒಂದು ಕ್ರಾಂತಿ ಮಾಡಬಹುದು ಎನಿಸುತ್ತಿದೆ ಕಾದು ನೋಡೋಣ.