12th October 2024
Share

ಶಕ್ತಿಪೀಠ ಪೇಪರ್ ಅವಲೋಕನ ?

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ಅನ್ನು ದಿನಾಂಕ:16.08.2019 ರಂದು ನೊಂದಾಯಿಸಲಾಗಿತ್ತು. ದಿನಾಂಕ:19 ಡಿಸೆಂಬರ್ 2019 ರಂದು ಹಾಗೆ ಸುಮ್ಮನೆ ಶಕ್ತಿಪೀಠ ಇ-ಪೇಪರ್ ಆರಂಭಿಸಿದೆ. ನನಗೆ ಪ್ರೇರಣೆ ನೀಡಿದ್ದು ನನ್ನ ಮಗ ಚಿ.ಕೆ.ಆರ್.ಸೋಹನ್. ನೋಡಪ್ಪ ನೀವು ದಿನಾಂಕ:01.08.1988 ರಿಂದ ಸಮಾಜ ಸೇವೆ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದೀರಿ.

ಅಂದು ಡಿಜಿಟಲ್ ಯುಗ ಆರಂಭವಾಗಿರಲಿಲ್ಲ. ಇಂದು ಡಿಜಿಟಲ್ ಯುಗ, ನೀವು ಎನು ಮಾಡುತ್ತಿರೋ ಅದನ್ನು ಡಿಜಿಟಲ್ ದಾಖಲೆ ಮಾಡಿ ಎಂಬ ಸಲಹೆ ನೀಡಿದ ನಂತರ, ಶಕ್ತಿಪೀಠ ವೆಬ್ ಸೈಟ್ ಮತ್ತು ಇ – ಪೇಪರ್ ಅನ್ನು ಆತನೇ ಡಿಸೈನ್ ಮಾಡಿ, ನನಗೆ ತರಬೇತಿ ನೀಡಿದ ನಂತರ ಅಂದಿನಿಂದ ಇಲ್ಲಿಯವರೆಗೂ ಸುಮಾರು 743 ದಿವಸ ಅಂದರೆ ಎರಡು ವರ್ಷ ಪೂರ್ಣವಾಗಿ, 3 ನೇ ವರ್ಷದ ಕೆಲವು ದಿವಸಗಳು ಕಳೆದಿವೆ.

ಇದೂವರೆಗೂ ಒಂದು ರೂಪಾಯಿ ಖಾಸಗಿಯಾಗಿಯಾಗಲಿ ಅಥವಾ ಸರ್ಕಾರದಿಂದಾಗಲಿ ಜಾಹಿರಾತು ಬಂದಿಲ್ಲ. ನಾನು ಆ ಕಡೆ ಯೋಚನೆಯನ್ನು ಮಾಡಲಿಲ್ಲ. ನನ್ನ ಪಾಡಿಗೆ ನಾನು ಅದಷ್ಟು ಬರೆದಿದ್ದೇನೆ. ದಿನದ ಎಲ್ಲ ಚಟುವಟಿಕೆಗಳನ್ನು ಬರೆಯಲು ಸಾಧ್ಯಾವಾಗಿಲ್ಲ. ನನ್ನ ಮನಸ್ಸಿಗೆ ಬಂದಿದ್ದನ್ನು ಮಾತ್ರ ಬರೆದಿದ್ದೇನೆ.

ಸಾದ್ಯಾವಾದಲ್ಲಿ ಓದುಗರ ಸಂಖ್ಯೆ ಹೆಚ್ಚಿಸಲು ಈ ವರ್ಷ ಒಂದು ಆಂದೋಲನ ರೂಪಿಸಬೇಕೆಂದಿದ್ದೇನೆ.

ತಾವೂ ಸಲಹೆ ನೀಡಬಹುದಾಗಿದೆ.