12th October 2024
Share

TUMAKURU:SHAKTHIPEETA FOUNDATION

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು PM:NEW INDIA 75-100 ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು CM:NAVA KARNATAKA 75-100 ಘೋಷಣೆ ಮಾಡಬೇಕಿದೆ. ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಂತೂ ಮೋದಿಯವರು ನ್ಯೂ ಇಂಡಿಯಾ 75 ಘೋಷಣೆ ಮಾಡಿದಾಗ ನವ ಕರ್ನಾಟಕ 75 ಎಂದು ಘೋಷಣೆ ಮಾಡಿದ್ದು ಇತಿಹಾಸ.

ನಮ್ಮ ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಬೇಕಾದಲ್ಲಿ, ಈ ಕೆಳಕಂಡ ಮೂರು ಅಂಶಗಳ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ. ಇದು  ಒಂದು ವರ್ಷಕ್ಕೆ ಆಗುವ ಕೆಲಸವಲ್ಲ, ನಾವು ಸಹ 75-100 ಅಂದರೆ ಸುಮಾರು ಮುಂದಿನ 25 ವರ್ಷಗಳ ಯೋಜನೆ ರೂಪಿಸುವುದು ಸೂಕ್ತವಾಗಿದೆ.

 LETTER TRACKING :  ನಮ್ಮ ರಾಜ್ಯದಲ್ಲಿ 225 ಜನ ವಿಧಾನಸಭಾ ಸದಸ್ಯರು, 75 ಜನ ವಿಧಾನ ಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯಸಭಾ ಸದಸ್ಯರು ಮತ್ತು ದೆಹಲಿ ಪ್ರತಿನಿಧಿ ಇದ್ದಾರೆ. ಇವರೆಲ್ಲಾ ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಬರೆದ ಪತ್ರ ಏನಾದವು ಎಂಬ ಬಗ್ಗೆ ಡಿಜಿಟಲ್ ದಾಖಲೆ ಇರುವುದು ಅಗತ್ಯ.

 FILE TRACKING:ಮೇಲ್ಕಂಡ 341 ಜನ ಬರೆದ ಪತ್ರಗಳ ಮೇಲೆ ವಿವಿಧ ಇಲಾಖೆಗಳಲ್ಲಿ ಕಡತಗಳು ಸೃಷ್ಟಿಯಾಗುತ್ತವೆ.ಈ ಕಡತಗಳು ಸಾಗುವ ವೇಗದ ಬಗ್ಗೆ ಡಿಜಿಟಲ್ ವಿಷ್ಲೇಷಣೆ ಅಗತ್ಯ.

 MONEY TRACKING:ಕೇಂದ್ರ ಸರ್ಕಾರ ಮಂಜೂರು ಮಾಡಿದ ಹಣದ ಮಾಹಿತಿ, ಕ್ಲಿಕ್ ಮಾಡಿದರೆ ಎಲ್ಲೆಲ್ಲಿ ಖರ್ಚು ಆಗಿದೆ. ಯಾವ ಬ್ಯಾಂಕಿನಲ್ಲಿ ಎಷ್ಟೆಷ್ಟು ಹಣ ಡಿಪಾಸಿಟ್ ಇದೆ ಎಂಬ ಬಗ್ಗೆ ಡಿಜಿಟಲ್ ವಿಷ್ಲೇಷಣೆ ಅಗತ್ಯ.

ಈ ಮೂರು ಅಜೆಂಡಾವನ್ನು ಮುಖ್ಯ ಮಂತ್ರಿ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ, ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ, ತಾಲ್ಲೋಕು ಮಟ್ಟದಲ್ಲಿ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಯುವ  ಕೆಡಿಪಿ ಸಭೆಯಲ್ಲಿ ಸೇರ್ಪಡೆ ಮಾಡಿ ಕಟ್ಟು ನಿಟ್ಟಾಗಿ ಚರ್ಚೆ ಮಾಡುವುದು ಸೂಕ್ತವಾಗಿದೆ.

ತಾವು ಸಲಹೆ ನೀಡಬಹುದಾಗಿದೆ.