29th March 2024
Share

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 24 / 7 ಯೋಜನೆ ಮೌಲ್ಯಮಾಪನ

TUMAKURU:SHAKTHIPEETA FOUNDATION

ದಿನಾಂಕ:04.01.2022 ರಂದು ತುಮಕೂರು ಮಹಾನಗರ ಪಾಲಿಕೆಯ ಕುಡಿಯುವ ನೀರಿನ ವಿಭಾಗ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿರುವ ಬಗ್ಗೆ ಒಂದು ಅಪೂರ್ಣ ವರದಿ.

  1. ತುಮಕೂರು ಮಹಾನಗರ ಪಾಲಿಕೆ ದಾಖಲೆಗಳ ಪ್ರಕಾರ ತುಮಕೂರು ನಗರದಲ್ಲಿ 110304 ಸ್ವತ್ತುಗಳು ಇವೆಯಂತೆ. ನಿಖರವಾಗಿ ಎಷ್ಟು ಸ್ವತ್ತುಗಳು ಇವೆ ಎಂದು ಇನ್ನೂ ಪೂರ್ಣಗೊಳಿಸಿಲ್ಲ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಅಮೃತ್ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದರೂ, ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದರೂ, ಅಮೃತ್=2 ಯೋಜನೆ ಮುಂಜೂರಾಗಿದ್ದರೂ ಇನ್ನೂ ತುಮಕೂರು ನಗರದ ಒಟ್ಟು ಸ್ವತ್ತುಗಳನ್ನು ನಿಖರವಾಗಿ ಹೇಳಲು ಆಗತ್ತಿಲ್ಲ ಎಂದರೆ ಇದೊಂದು ದುರಂತ.
  2. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಾರ ತುಮಕೂರು ನಗರದಲ್ಲಿ 66383 ಸ್ವತ್ತುಗಳಿಗೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿದ್ದಾರೆಯೇ ಹೊರತು ಶೇ 100 ರಷ್ಟು ಸ್ವತ್ತುಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿಲ್ಲ. ಅದರಲ್ಲಿ ಈ ದಾಖಲೆಯು ಸ್ವತ್ತುವಾರು ಇಲ್ಲ, ಮನೆಗಳವಾರು ಇರುತ್ತದೆಯಂತೆ. ಅಂದರೆ ಒಂದೇ ಸ್ವತ್ತಿನಲ್ಲಿ 5-6 ಮನೆಗಳಿದ್ದಲ್ಲಿ, ಎಷ್ಟು ಸಂಪರ್ಕ ಮಾಡಲಾಗಿದೆಯೋ ಅದೆಲ್ಲಾ ಸೇರಿ 66383 ನಲ್ಲಿ ನೀರಿನ ಸಂಪರ್ಕ ನೀಡಲು ಯೋಜನೆಯಾಗಿದೆಯಂತೆ.ನಿಖರವಾದ ಜಿಐಎಸ್ ಲೇಯರ್ ನೀಡಿದರೆ ಮಾತ್ರ ಸಂಪೂರ್ಣ ವರದಿ ನೀಡಲು ಸಾಧ್ಯವಾಗುತ್ತದೆ.
  3. ತುಮಕೂರು ನಗರದಲ್ಲಿ 35 ವಾರ್ಡ್‍ಗಳಿವೆ, ಕುಡಿಯುವ ನೀರು ಸರಬರಾಜು ಮಂಡಳಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು 39 ಡಿಎಂಎ ಮಾಡಿದ್ದಾರಂತೆ.
  4. ತುಮಕೂರು ನಗರದಲ್ಲಿ 45 ಓವರ್ ಹೆಡ್ ಟ್ಯಾಂಕ್‍ಗಳು ಇವೆಯಂತೆ.ಈ ಟ್ಯಾಂಕ್ ವಾರು ಎಷ್ಟು ವ್ಯಾಪ್ತಿಗೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂಬ ಬಗ್ಗೆ ಜಿಯೋಫೆನ್ಸಿಂಗ್ ವ್ಯಾಪ್ತಿ ಅಗತ್ಯವಿದೆ. ಇದರಲ್ಲಿ ಗೇಟ್ ವಾಲ್ವ್ ವಾರು ಎಷ್ಟೆಷ್ಟು ಸ್ವತ್ತುಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ, ಎಷ್ಟು ಸ್ವತ್ತುಗಳಿಗೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿಲ್ಲ ಎಂಬ ಬಗ್ಗೆ ಜಿಐಎಸ್ ಲೇಯರ್ ವಾರು ಮಾಹಿತಿ ನೀಡಬೇಕಾಗುತ್ತದೆ.
  5. ತುಮಕೂರು ನಗರದಲ್ಲಿ 803 ಬೋರ್ ವೆಲ್ ಗಳಲ್ಲಿ 104 ಬೋರ್ ವೆಲ್‍ಗಳಲ್ಲಿ ನೀರು ಬರುವುದಿಲ್ಲವಂತೆ. ಉಳಿದ 699 ಬೋರ್ ವೆಲ್ ಗಳ ನೀರು ಯಾವ ವ್ಯಾಪ್ತಿಗೆ ಸರಬರಾಜು ಆಗುತ್ತಿದೆ ಎಂಬ ಬಗ್ಗೆ ಜಿಐಎಸ್ ಲೇಯರ್ ಸಹಿತ ಮಾಹಿತಿ ಅಗತ್ಯವಿದೆ.
  6. ಸಾಮಾಜಿಕ ನ್ಯಾಯದಡಿ ತುಮಕೂರು ನಗರದ ಪ್ರತಿ ಸ್ವತ್ತುದಾರರಿಗೂ ಶೇ 100 ರಷ್ಟು ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯವಿರುವ ಅನುದಾನದ ಬಗ್ಗೆ ಜಿಐಎಸ್ ಲೇಯರ್ ವಾರು, ನಗರದ ಯಾವ ಟ್ಯಾಂಕ್ ವಾರು ನೀರು ಸರಬರಾಜು ಮಾಡಬೇಕು ಎಂಬ ಬಗ್ಗೆ ಜಿಐಎಸ್ ಲೇಯರ್‍ವಾರು ಸಹಿತ ಮಾಹಿತಿ ಅಗತ್ಯವಿದೆ.
  7. ತುಮಕೂರು ನಗರದ ಕೆರೆ-ಕಟ್ಟೆಗಳ ಮತ್ತು ರಾಜಕಾಲುವೆಗಳ ಒತ್ತುವರಿ ಸಹಿತ ಜಿಐಎಸ್ ಲೇಯರ್ ಸಹಿತ ಮಾಹಿತಿ ಅಗತ್ಯವಿದೆ. ಇದರಿಂದ ಅಂತರ್ಜಲ ಅಭಿವೃದ್ಧಿ ಬಗ್ಗೆ ವಿಶ್ಲೇóಷಣೆ ಮಾಡಬಹುದಾಗಿದೆ.
  8. ತುಮಕೂರು ನಗರದ ಖಾಸಗಿ ಬೋರ್ ವೆಲ್ ಗಳ ಜಿಐಎಸ್ ಲೇಯರ್ ಸಹಿತ ಮಾಹಿತಿ ಅಗತ್ಯವಿದೆ.
  9. ತುಮಕೂರು ನಗರದ ಖಾಸಗಿ ಬೋರ್ ವೆಲ್ ಗಳಿಂದ ಕುಡಿಯುವ ನೀರು ಮಾರಾಟ ಮಾಡುವ ಬೋರ್‍ವೆಲ್‍ಗಳ ಜಿಐಎಸ್ ಲೇಯರ್ ಸಹಿತ ಮಾಹಿತಿ ಅಗತ್ಯವಿದೆ.

ಕೆಲವು ಮಾಹಿತಿಗಳು

UIDSSMT                     -198.98

AMRUT                      -129.22

SMART CITY           – 67.55

         TOTAL RS      -395.75

TENDER -331.24

EXPENDITURE- 245.93

PENDING- 85.31

ಮರಳೂರು ಕೆರೆ- ರೂ 18 ಕೋಟಿ (ತುಮಕೂರು ಸ್ಮಾರ್ಟ್ ಸಿಟಿ ಯೋಜನೆ)

ಮೈದಾಳ ಕೆರೆ ಯೋಜನೆ ರೂ 40 ಕೋಟಿ

ದೇವರಾಯಪಟ್ನ ಕೆರೆ ಕೆ.ಐ.ಎ.ಡಿ.ಬಿ ಯೋಜನೆ

ಯೋಜನೆ ರೂಪಿಸಿರುವ ಸ್ವತ್ತುಗಳು- 66383

ನೀರಿನ ಸಂಪರ್ಕ ಸ್ವತ್ತುಗಳು- 62057

ನೀರಿನ ಸಂಪರ್ಕ ನೀಡಬೇಕಾಗಿರುವ ಸ್ವತ್ತುಗಳು- 4326

ತುಮಕೂರು ಮಹಾನಗರ ಪಾಲಿಕೆಯ ಸ್ವತ್ತುಗಳು 1,10,364 (ಇನ್ನೂ ಗುರುತಿಸಬೇಕಾದ್ದು ಇದೆ)

ಯೋಜನೆ ರೂಪಿಸಿರುವ ಸ್ವತ್ತುಗಳು- 66383 (60%)

ಯೋಜನೆ ರೂಪಿಸಿಲ್ಲದ ಸ್ವತ್ತು- 43981

ಬೋರ್ ವೆಲ್ – 699

ಡೆಡ್ ಬೋರ್ ವೆಲ್-104

ಒಟ್ಟು- 803  

ಖಾಸಗಿ ಬೋರ್ ವೆಲ್ ಮಾಹಿತಿ ನೀಡಿಲ್ಲ. 

ಓವರ್ ಹೆಡ್ ಟ್ಯಾಂಕ್-45 ರಿಪೇರಿ -4

ಕಾಂಗ್ರೆಸ್ ಸರ್ಕಾರದ ಯೋಜನೆ ಹೆಸರು.

Integrated Development of Small & Medium Towns (IDSMT) 

ಯುಪಿಎ ಪ್ರಧಾನಿಯವರಾದ ಶ್ರೀ ಮನೋಮೋಹನ್ ಸಿಂಗ್‍ರವರ ಕಾಲದಲ್ಲಿ ಬದಲಾಯಿಸಿದ ಹೆಸರು.

Urban Infrastructure Development Scheme for Small and Medium Towns (UIDSSMT),

ಎನ್.ಡಿ.ಎ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಕಾಲದಲ್ಲಿ ಬದಲಾಯಿಸಿದ ಹೆಸರು.

Atal Mission for Rejuvenation and Urban Transformation (AMRUT) 

ಈ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು ಪರಿಪೂರ್ಣವಾದ ವರದಿಯನ್ನು ಸಿದ್ಧಪಡಿಸಲಾಗುವುದು.