27th July 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿಗೆ ಅನುದಾನ ಪಡೆದ ರಾಜ್ಯಾವಾಗಬೇಕು ಎಂಬ ಡಿಜಿಟಲ್ ಆಂದೋಲನ ಆರಂಭಿಸಿದೆ. ಈ ಆಂದೋಲನಕ್ಕೆ ಶಕ್ತಿಪೀಠ ಕ್ಯಾಂಪಸ್ ತಲೆ ಎತ್ತಲಿದೆ.

ಕಳೆದ 34 ವರ್ಷಗಳ ಸಾರ್ವಜನಿಕ ಜೀವನದ ನನ್ನ ಅನುಭವ, ಕಳೆದ ಕೆಲವಾರು ವರ್ಷಗಳಿಂದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಗೂಡಿ, ತುಮಕೂರು ನಗರ ಮತ್ತು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ ಅನುಭವ ಈ ಹೋರಾಟಕ್ಕೆ ಪ್ರೇರಣೆ ನೀಡಿದೆ. ಜೊತೆಗೆ ಹೆಸರು ಹೇಳಲು ಇಚ್ಚಿಸದ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳ ಬೆಂಬಲ ಪುಷ್ಠಿ ನೀಡಿದೆ.

ಬಾಯಿ ಇದ್ದವನು ಬರದಲ್ಲಿ ಬದುಕಿದ’ ‘ಹುಚ್ಚುಮುಂಡೆ ಮದುವೇಲೆ ಉಂಡವನೆ ಜಾಣ!’ ಈ ಎರಡು ಗಾದೆ ಮಾತುಗಳು ಕೇಂದ್ರ ಸರ್ಕಾರದ ಅನುದಾನ ತರಲು ಪೂರಕವಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಇರಲಿ, ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರ ಇರಲಿ, ಎಲ್ಲವಕ್ಕೂ ಮಲತಾಯಿ ಧೋರಣೆ ಸಾಧ್ಯವಿಲ್ಲ. ಕೆಲವು ಪ್ರತಿಷ್ಟಿತ ಯೋಜನೆಗಳಿಗೆ ಮಾತ್ರ ಇರಲಿದೆ ಎಂಬುದು ನನ್ನ ಅನಿಸಿಕೆ, ಅದೇನೇ ಇರಲಿ.

ನಮ್ಮ ಶಕ್ತಿಪೀಠ ಕ್ಯಾಂಪಸ್ ಯೋಜನೆಗಳ ಪರಿಚಯಗಳನ್ನು ರಾಜ್ಯ ಮಟ್ಟದ ದಿಶಾ ಸಮಿತಿಗೆ ಸಲ್ಲಿಸಿದಾಗ, ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಿದ ನಂತರ ಈ ಬಗ್ಗೆ ಅಧ್ಯಯನ ಆರಂಭಿಸಿದೆ.

2000 ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣರವರ ನೇತೃತ್ವದ ಸರ್ಕಾರದಲ್ಲಿ ಮೌಲ್ಯಮಾಪನ ಚಿಂತನೆಯ ಬೀಜ ಮೊಳೊಕೆಯೊಡಿದಿದೆ. ಇದು ಯಾರ ಕೂಸು ಎಂಬ ಮಾಹಿತಿ ದೊರಕಿಲ್ಲ.

2011 ರಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ನಮ್ಮ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾgಕ್ಕೆ ಜನ್ಮ ನೀಡಿದೆ.

ಮುಂದುವರೆದು 2014 ರಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಚಾಲನೆ ನೀಡಿದೆ.

ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿಗೆ ಅನುದಾನ ಪಡೆಯುವುದಕ್ಕೂ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೂ ಏನು ಸಂಭಂದ ಎನ್ನಬಹುದು. ಆದರೇ ಕೇಂದ್ರ ಸರ್ಕಾರದಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಪ್ರತಿಯೊಂದು ಯೋಜನೆಗಳ ಮೌಲ್ಯಮಾಪನ ವರ ದಿಗಳ ಅಗತ್ಯವಿದೆ. ವಿವಿಧ ಇಲಾಖೆಗಳ ತಜ್ಷರ ವರದಿಗಳ ಮೌಲ್ಯಮಾಪನ ಆಗಬೇಕಿದೆ. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಎಂದು ಬರೀ ಭಾಷಣದಲ್ಲಿ ಹೇಳಿದರೆ ಸಾಲದು.

ಈ ಮೌಲ್ಯಮಾಪನ  ಸಿದ್ಧಪಡಿಸಲು ಪರಿಣಿತರ, ವಿಶ್ವವಿದ್ಯಾಲಯಗಳ, ಸಂಘ ಸಂಸ್ಥೆಗಳ, ಅಧ್ಯಯನ ಪೀಠಗಳ, ಸಂಶೋಧನಾ ಕೇಂದ್ರಗಳ, ವಿಷನ್ ಗ್ರೂಪ್, ವಿದ್ಯಾರ್ಥಿಗಳ ಇಂಟರ್ನ್‍ಷಿಫ್ ಹೀಗೆ ಎಲ್ಲರ ಸಹಬಾಗಿತ್ವದಲ್ಲಿ ನಡೆಯಲು ಅವಕಾಶ ಕಲ್ಪಿಸಿದೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ. ಸೂಕ್ತ ತರಬೇತಿ,ಸೆಮಿನಾರ್, ಪ್ರಚಾರ ಎಲ್ಲವಕ್ಕೂ ಅವಕಾಶವಿದೆ, ಇದರಲ್ಲಿ ಅಭಿವೃದ್ದಿಯಲ್ಲಿ ಸಾಮಾಜಿಕ ನ್ಯಾಯದ ಮೌಲ್ಯಮಾಪನ ವಿಷಯವನ್ನು ಸೇರ್ಪಡೆ ಮಾಡಬೇಕಷ್ಟೆ.’

ರಾಜ್ಯ ಮಟ್ಟದ ದಿಶಾ ಸಮಿತಿಯಿಂದ ಮಾಹಿತಿ ಸಂಗ್ರಹಣೆ,  ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಸಂಗ್ರಹಣೆ ಜೊತೆಗೆ, ವಿಭಿನ್ನವಾಗಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಹಬಾಗಿತ್ವದಲ್ಲಿ  ಯಾವುದೇ ಯೋಜನೆಯ ಮೌಲ್ಯಮಾಪನ ಮಾಡಿ ಸೂಕ್ತ ಶೀಪಾರಸ್ಸುಗಳನ್ನು ನೀಡಲು ಅವಕಾಶ ಕಲ್ಪಿಸಿದೆ.

ಈ ಹಿನ್ನಲೆಯಲ್ಲಿ ನನಗೆ ಅನಿಸಿದ್ದು ಕೇಂದ್ರ ಸರ್ಕಾರದ ನೀತಿ ಆಯೋಗ ಮತ್ತು ರಾಜ್ಯ ಸರ್ಕಾರದ ಯೋಜನಾ ಇಲಾಖೆ ವಿಭಾಗಗಳ ಮತ್ತು ಎಲ್ಲಾ ಇಲಾಖೆಗಳ  ಸಂಪೂರ್ಣ ಅರಿವು ಪಡೆದ ನಂತರ ನಮ್ಮ ಶಕ್ತಿಪೀಠ ಫೌಂಡೇಷನ್ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಕೇಂದ್ರ ಸರ್ಕಾರ ಅತಿ ಹೆಚ್ಚಿನ ಅನುದಾನಕ್ಕಾಗಿ ಆರಂಭಿಸಲು ಉದ್ದೇಶಿರುವ  ಸೆಂಟರ್ ಆಫ್ ಎಕ್ಸಲೆನ್ಸ್’ ಬಗ್ಗೆ ಅಂತಿಮ ರೂಪುರೇಷೆ ಸಿದ್ಧಪಡಿಸುವುದು ಸೂಕ್ತವಾಗಿದೆ.