TUMAKURU:SHAKTHIPEETA FOUNDATION
ರಾಜ್ಯ ಸರ್ಕಾರದ ಯೋಜನಾ ಇಲಾಖೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಸ್ಥಾಪಿಸಿ, ಒಂದು ಕೋಟಿ ರೂ ಅಧಿಕ ವೆಚ್ಚದ ಯೋಜನೆಗಳ ಮೌಲ್ಯಮಾಪನ ಮಾಡಿಸುತ್ತಿದೆ.
ಆದರೇ ಇದೂವರೆಗೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಮೌಲ್ಯ ಮಾಪನ ಮಾಡಿದ ಹಾಗೆ ಕಾಣಿಸುತ್ತಿಲ್ಲ. ಮಾಡಿದ್ದರೆ ಮಾಡಿರಲೂ ಬಹುದು.
ಡಾ.ಬಿ.ಎಂ.ನಂಜುಪ್ಪನವರ ವರದಿಯೇ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಮೊದಲು ಮೆಟ್ಟಿಲು ಎಂದರೆ ತಪ್ಪಾಗಲಾರದು. ಆದರೇ ಅವರ ವರದಿಯನ್ನು ಹೇಗೆ ಅನುಷ್ಠಾನ ಮಾಡಲಾಗಿದೆ ಎಂಬುದೇ ಒಂದು ಮೌಲ್ಯಮಾಪನವಾಗಬೇಕು.
ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಯತೆಯ ಪಿಡುಗು ಎದ್ದು ಕಾಣುತ್ತಿದೆ. ಬಹುಷಃ ಚುನಾವಣಾ ರಾಜಕೀಯ ಇಲ್ಲದೆ ಇದ್ದಲ್ಲಿ ಜಾತಿ ಯಾವತ್ತೋ ಮಾಯವಾಗುತಿತ್ತು. ಗಂಡು ಮತ್ತು ಹೆಣ್ಣು ಎರಡೇ ಜಾತಿ ಇರುತಿತ್ತು. ಚುನಾವಣೆ ಅಭ್ಯರ್ಥಿಗಳು ಜಾತಿ, ಉಪಜಾತಿ ಎತ್ತಿ ದೇಶ ಹಾಳುಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ.
ಕಾಂಗ್ರೇಸ್ ನೇತೃತ್ವದ ಸರ್ಕಾರದ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಜಾತಿ ಸಮೀಕ್ಷೆ ಮಾಡಲು ಮುಂದಾಗಿದ್ದರೂ ಅದರ ಸ್ವರೂಪವೇ ಬದಲಾಯಿತು.
ಬಿಜೆಪಿಯವರು ಜಾತಿ ಎಂದರೆ ಹಿಂದೂ ಮತ್ತು ಅಲ್ಪಸಂಖ್ಯಾತರು/ಮುಸ್ಲಿಂ ಎನ್ನುವ ಸ್ಥಿತಿಗೆ ಬಂದಿದೆ. ಬಡಜಾತಿಗಳನ್ನು ಬಿಟ್ಟು ಲಿಂಗಾಯಿತ ನಿಗಮ ಮಾಡಿದ ಅಪಕೀರ್ತಿ ಇವರಿಗೆ ಅಂಟಿಕೊಂಡಿದೆ.
ಜೆಡಿಎಸ್ ಎಂದರೆ ಹೆಸರಿಗೆ ಜಾತ್ಯಾತೀತ ಜನತಾದಳ ಎಂದರೂ ವಕ್ಕಲಿಗರ ಪಕ್ಷ ಎಂಬ ಮಾತು ಇದೆ. ಕುಂಚಿಟಿಗರಿಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಕುಂಚಿಟಿಗರ ಈ ನೋವು ತುಮಕೂರಿನಲ್ಲಿ ಮಾಜಿ ಪ್ರಧಾನಿ ಶ್ರೀ ದೇವೇಗೌಡರವರು ಸೋಲಲು ಒಂದು ಕಾರಣ ಎನ್ನುತ್ತಾರೆ.
ನಾನು ವಿಜ್ಞಾನ ಗುಡ್ಡದ ಯೋಜನೆ ರೂಪಿಸಿದಾಗ ಎಲ್ಲಾ ಜಾತಿಯ ಅಧ್ಯಯನ ಕೇಂದ್ರ ಆರಂಭಿಸಲು ಸಲಹೆ ನೀಡಿದ್ದೆ. ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಲಿಂಗಾಯಿತ ನಿಗಮ ಮಾಡುವಾಗ, ನನಗೆ ಒಬ್ಬ ಇಂಟಲಿಜೆನ್ಸ್ ಅಧಿಕಾರಿಯವರು ಮಾತನಾಡಿ ಈ ಬಗ್ಗೆ ಅಭಿಪ್ರಾಯ ತೆಗೆದುಕೊಂಡಿದ್ದರು.
ನನ್ನ ಪರಿಕಲ್ಪನೆ ಅವರಿಗೆ ಹುಚ್ಚು ಹಿಡಿಸಿತ್ತು. ನಿಜವಾಗಲೂ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನೀವು ಲಿಂಗಾಯಿತರಾಗಿ ಈ ರೀತಿ ಯೋಚನೆ ಮಾಡಿದ್ದೀರಿ. ನಿಜಕ್ಕೂ ನಿಮಗೆ ಅಭಿನಂದನೆ ಎಂದಿದ್ದರು.
ಅಷ್ಟೆ ಏಕೆ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಶ್ರೀ ಧ್ವಾರಕನಾಥ್ ರವರು ಇದೇ ಮಾತನ್ನು ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಹೇಳಿದ್ದರು. ಹಿಂದುಳಿದ ವರ್ಗದ ನಾಯಕರು ಈ ಬಗ್ಗೆ ಯೋಚಿಸಿಲ್ಲ, ತಾವೂ ಎಲ್ಲಾ ಜನಾಂಗದ ಕುಲಕಸುಬು ಮತ್ತು ಜಾತಿ ಅಧ್ಯಯನ ಮಾಡಲು ಯೋಚಿಸಿದ್ದೀರಿ, ಬಿಜೆಪಿ ಸಂಸದರಾಗಿ, ಲಿಂಗಾಯಿತರಾಗಿ ಈ ರೀತಿ ಯೋಚನೆ ನಿಜಕ್ಕೂ ಅಧ್ಭುತ ಎಂದಿದ್ದರು.
ಆದರೇ ವಿಜ್ಞಾನ ಗುಡ್ಡದ ಯೋಜನೆಗೆ ಗ್ರಹಣ ಬಡಿದ ಕಾರಣ ಯೋಜನೆ ನನೆಗುದಿಗೆ ಬಿತ್ತು. ಈಗ ಶಕ್ತಿಪೀಠ ಕ್ಯಾಂಪಸ್ ನಲ್ಲಿ 434 ಜಾತಿ ಅಧ್ಯಯನ ಕೇಂದ್ರದ ಪ್ರಸ್ತಾವನೆ ನೋಡಿದ ಉನ್ನತ ಅಧಿಕಾರಿಯೊಬ್ಬರು, 108 ಶಕ್ತಿಪೀಠಗಳ ದೇವತೆಯವರು ನಿಮಗೆ ಶಕ್ತಿ ಕೊಟ್ಟು ಇದು ಆದಲ್ಲಿ ನಿಜಕ್ಕೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರೆಯಲಿದೆ. ಆದರೇ 434 ರ ಜೊತೆಗೆ ಎಲ್ಲಾ ಜಾತಿಯ ಅಧ್ಯಯನ ನಡೆಯಲಿ,
ಒಂದೊಂದು ಜಾತಿಗೆ ಕೇವಲ ಒಂದೊಂದು ಕೊಠಡಿ ಮತ್ತು ಒಂದು ಕಂಪ್ಯೂಟರ್ ಸಾಕು, ವರ್ಕ್ ಪ್ರಂ ಜಾತಿ ಸಂಘಟನೆ ಇದ್ದೆ ಇರುತ್ತದೆ. ಡಾಟಾ ಬೇಸ್ ಮಾತ್ರ ಒಂದೇ ಕಡೆ ಇರಲಿ. ಅನಾಲೀಸಿಸ್ ಚರ್ಚೆ, ಸೆಮಿನಾರ್, ಗುಂಪು ಚರ್ಚೆಗೆ ಉಳಿದ ಸಾಮಾನ್ಯ ಸೌಲಭ್ಯ ಕೇಂದ್ರ ಎಲ್ಲರಿಗೂ ಒಂದೇ ಸಾಕಾಗುತ್ತದೆ. ಎಂಬ ಸಲಹೆ ನೀಡಿದ್ದಾರೆ.
ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಮೊದಲು ಮೆಟ್ಟಿಲು ಜಾತಿ ಎಂಬ ಮಾತುಕೇಳಿ ಬರುತ್ತದೆ, ನಿಮ್ಮ ಅಭಿಪ್ರಾಯ?