27th July 2024
Share

TUMAKURU:SHAKTHIPEETA FOUNDATION

 ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಪಿಪಿಪಿ ಯೋಜನೆಗಳಿಗೆ ಆಧ್ಯತೆ ನೀಡಿದ್ದಾರೆ. ಹಲವಾರು ಘೋಷಣೆ ಮತ್ತು ಯೋಜನೆಗಳನ್ನು ಆರಂಭಿಸಿದ್ದಾರೆ. ರಾಜ್ಯದಲ್ಲಿ ಮೂಲ ಸೌಕರ್ಯ ಇಲಾಖೆಯಲ್ಲಿ ಪಿಪಿಪಿ ಘಟಕ ಕಾರ್ಯನಿರ್ವಹಿಸುತ್ತದೆ. ಕೆ.ಎಸ್.ಐ.ಐ.ಡಿ.ಸಿ ನೋಡೆಲ್ ಎಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

  1. ನ್ಯಾಷನಲ್ ಇನ್ಪ್ರಾಸ್ಟ್ರಚ್ಚರ್ ಪೈಪ್‍ಲೈನ್ ಯೋಜನೆ.
  2. ಗತಿಶಕ್ತಿ ಯೋಜನೆ.
  3. ಪಿಪಿಪಿಯೋಜನೆ.
  4. ಲ್ಯಾಂಡ್ ಮಾನಿಟೈಸಷೇನ್ ಯೋಜನೆ.
  5. ರಾಜ್ಯ ಮಟ್ಟದಲ್ಲಿ ಸುಮಾರು 42 ಇಲಾಖೆಗಳಲ್ಲಿ ಪಿಪಿಪಿ ಘಟಕ ಆರಂಭಿಸಲಾಗಿದೆ.
  6. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಿಪಿಪಿ ಸಮಿತಿ ರಚಿಸಲಾಗಿದೆ.
  7. ಮೈಸೂರಿನ ಎಟಿಐ ಸಂಸ್ಥೆಯಲ್ಲಿ ಈ ಬಗ್ಗೆ ಇಲಾಖಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ.
  8. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ ಸಾಧಿಸಲು ದೆಹಲಿಯಲ್ಲಿ ಕಚೇರಿ ತೆರೆಯಬೇಕಿದೆ.
  9. ವಿವಿಧ ಗುಂಪಿನ ಟಿಎ ಗಳ ಜೊತೆಯೂ ಸಮನ್ವಯ ಸಾಧಿಸಭೆಕಾಗಿದೆ.

ಈ ಎಲ್ಲಾ ಯೋಜನೆಗಳ ಆಂದೋಲನಕ್ಕಾಗಿ  ಇವರೆಲ್ಲರ ಜೊತೆ ಸಮನ್ವಯ ಸಾಧಿಸಲು  ಒಂದು ವ್ಯವಸ್ಥಿತ ಯೋಜನೆಯೊಂದನ್ನು ಮೂಲ ಸೌಕರ್ಯ ಸಚಿವರಾದ ಶ್ರೀ ವಿ.ಸೋಮಣ್ಣವರು ಮತ್ತು ಅಪರಮುಖ್ಯ ಕಾರ್ಯದರ್ಶಿರವರಾದ ಶ್ರೀ ಬಿ.ಹೆಚ್.ಅನಿಲ್ ಕುಮಾರ್  ರವರು ರೂಪಿಸಬೇಕಿದೆ.

  ಕರ್ನಾಟಕ ರಾಜ್ಯ ಒಂದು ಕ್ರಾಂತಿಕಾರಿಕ ಹೆಜ್ಜೆ ಇಡಲೇ ಬೇಕಿದೆ. ಐಡಿಡಿಯ ಪಿಪಿಪಿ ನಿರ್ದೇಶಕರಾದ ಶ್ರೀ ನಾಗೇಶ್ ಬಾಬು ರವರು ಮತ್ತು ಕೆ.ಎಸ್.ಐ.ಐ.ಡಿ.ಸಿ ಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಶ್ರೀ ಈಶ್ವರ್ ರವರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದಾಗ ಅವರ ಸ್ಪೂರ್ತಿ ನಿಜಕ್ಕೂ ಮೆಚ್ಚುವಂತಿತ್ತು.

ಮೂಲಸೌಕರ್ಯ ಸಚಿವರ ಆಪ್ತ ಕಾರ್ಯದರ್ಶಿ ಶ್ರೀ ನರೇಂದ್ರರವರೊಂದಿಗೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಶ್ರೀ ವಿ.ಸೋಮಣ್ಣವರು ವರಸೆ ಆರಂಭಿಸಿದರೆ,  ಶ್ರೀ ನರೇಂದ್ರಮೋದಿಯವರು ಕರ್ನಾಟಕದ ವಿಚಾರ ಮಾತನಾಡುವ ಹಾಗೆ ಮಾಡುತ್ತಾರೆ.

ನಿರುದ್ಯೋಗಿಗಳಿಗೆ ಉದ್ಯೋಗ ಮತ್ತು ಸ್ಥಳೀಯ ಹೂಡಿಕೆಯ ಮಹಾಧ್ವಾರದ ಬಾಗಿಲು ತೆರೆಯ ಬೇಕಿದೆ.  ಪಿಪಿಪಿ ಯುಗಾರಂಭವಾಗಿದೆ. ಶಕ್ತಿಪೀಠ ಫೌಂಡೇಷನ್ ಈ ಎಲ್ಲಾ ಯೋಜನೆಗಳ ಮೌಲ್ಯ ಮಾಪನ ಆರಂಭಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.