ಜಲಜೀವನ್ ಮಿಷನ್:ಕುಡಿಯುವ ನೀರಿನ ಅಲೋಕೇಷನ್ ಎಲ್ಲಿ?
TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿ ವ್ಯಾಪ್ತಿಯ 2606 ಗ್ರಾಮಗಳಲ್ಲಿ 531443 ಮನೆಗಳಿವೆಯಂತೆ. ಈ ಎಲ್ಲಾ ಮನೆ ಮನೆಗೆ ನಲ್ಲಿ ಹಾಕಿ, ಸುಮಾರು 2219386 ಜನರಿಗೆ ಕುಡಿಯುವ ನೀರಿಗಾಗಿ ಈಗಾಗಲೇ ವಿವಿದ ನದಿಮೂಲಗಳಿಂದ ಸುಮಾರು 652.23 ಎಂ.ಸಿ.ಎಂ.ಟಿ ಅಡಿ ನೀರು ಅಲೋಕೇಷನ್ ಆಗಿದೆಯಂತೆ. ಇನ್ನೂ 1507 ಎಂ.ಸಿ.ಎಂ.ಟಿ ಅಡಿ ನೀರು ಅಲೋಕೇಷನ್ ಆಗಬೇಕಂತೆ.
ಈ ನದಿ ನೀರು ಅಲೋಕೇಷನ್ ಆಗಿರುವ ಮಾಹಿತಿ ಬಗ್ಗೆ ಗ್ರಾಮೀಣ ಕುಡಿಯುವ ನೀರು ಎಕ್ಸಿಕ್ಯೂಟಿವ್ ಇಂಜನಿಯರ್ ಶ್ರೀ ಮುದ್ದಪ್ಪನವರು ಮತ್ತು ಶ್ರೀ ರಮೇಶ್ ರವರ ಜೊತೆ ದಿನಾಂಕ:29.01.2022 ರಂದು ಸಮಾಲೋಚನೆ ನಡೆಸಿದೆ.
ನನಗೆ ತಿಳಿದ ಪ್ರಕಾರ ಇನ್ನೂ ಯಾವುದೇ ನಿರ್ಧಿಷ್ಟ ನದಿ ನೀರಿನ ಅಲೋಕೇಷನ್ ಸರ್ಕಾರದಿಂದ ದೊರೆತ ಹಾಗೆ ಕಾಣಿಸಲಿಲ್ಲ. ಆದರೂ ಅವರಿಗೆ ಒಂದು ವಾರ ಕಾಲವಕಾಶ ನೀಡಿ, ನದಿ ನೀರಿನ ಅಲೋಕೇಷನ್ ಬಗ್ಗೆ ಹಾಲಿ ಇರುವ ಮತ್ತು ಮುಂದೆ ಆಗಬೇಕಾಗಿರುವ ಎಲ್ಲಾ ಹಂತದ ದಾಖಲೆಗಳನ್ನು ಸಿದ್ಧಪಡಿಸಿ ಕೊಳ್ಳಲು ಸಲಹೆ ನೀಡಿದ್ದೇನೆ.
ಕಳೆದ 2 ವರ್ಷದಿಂದ ಸತತವಾಗಿ ಈ ಬಗ್ಗೆ ದಿಶಾ ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ. ನನಗೆ ಅರ್ಥವಾಗುತ್ತಿಲ್ಲ ವಿವಿಧ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಮೊದಲು ನದಿ ನೀರಿನ ಅಲೋಕೇಷನ್ ಪಡೆಯದೇ ಇದ್ದರೆ ಹೇಗೆ ವಿಲೇಜ್ ಆಕ್ಷನ್ ಪ್ಲಾನ್ ರೂಪಿಸುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಉಳಿದಂತೆ ಡಾಟಾಬೇಸ್ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು. ಒದ್ದಾಡುತ್ತಿದ್ದಾರೆ ಒಳ್ಳೆಯ ಟ್ರಾಕ್ ಗೆ ಈಗ ಬಂದಿದ್ದಾರೆ ಎನಿಸಿತು.
ಗ್ರಾಮಪಂಚಾಯಿತಿ ನಕ್ಷೆಯನ್ನು ಎನ್.ಆರ್.ಡಿ.ಎಂಸ್ ನಿಂದ ಎಲ್ಲಾ 330 ಗ್ರಾಮಪಂಚಾಯಿತಿಗಳಿಗೂ ಈಗಾಗಲೇ ಕಳುಹಿಸಲಾಗಿದೆ.ದಿಶಾ ಸಮಿತಿಯಲ್ಲಿ ಕಳುಹಿಸಿರುವ ಬಗ್ಗೆ ದಾಖಲೆ ಪ್ರದರ್ಶನ ಮಾಡಿದ್ದಾರೆ. ಆದರೇ ಇದೂವರೆಗೂ ಗ್ರಾಮಪಂಚಾಯಿತಿವರು ಜೊತೆಗೂಡಿಲ್ಲ ಎಂಬ ಅಂಶ ನಿಜಕ್ಕೂ ಆಶ್ಚರ್ಯ ತಂದಿದೆ.
ಜಿಲ್ಲಾ ಪಂಚಾಯತ್ ಸಿಇಓ ರವರು ಇತ್ತ ಗಮನ ಹರಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಅರಗಜ್ಞಾನೇಂದ್ರರವರು ನದಿ ನೀರಿನ ಅಲೋಕೇಷನ್ ಬಗ್ಗೆ ಮಾಹಿತಿ ನೀಡುವರೇ ಕಾದು ನೋಡಬೇಕು.