22nd November 2024
Share

TUMAKURU:SHAKTHIPEETA FOUNDATION

ಲೋಕಸಭಾ ಅಧಿವೇಶನ ಇದ್ದಾಗ ಸಾಮಾನ್ಯವಾಗಿ ಮುಖ್ಯಮಂತ್ರಿಯವರು ರಾಜ್ಯದ ಸಂಸದರ ಸಭೆ ಕರೆÀಯುವುದು ವಾಡಿಕೆ. ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ದಿನಾಂಕ:07.02.2022 ರಂದು ದೆಹಲಿಯಲ್ಲಿ ಸಭೆ ನಡೆಸಿರುವುದು ಸ್ವಾಗಾತಾರ್ಹ.

ಸಭೆ ನಡವಳಿಕೆ ನೋಡಿದ ನಂತರ ಸಭೆಯ ಫಲಪ್ರದದ ಬಗ್ಗೆ ಅವಲೋಕನ ಮಾಡಬಹುದು. ಈಗಲೇ ಏನು ಹೇಳಿದರೂ ತಪ್ಪಾಗುತ್ತದೆ. ಆದರೂ ರಾಜ್ಯದ ಜಲಸಂಪನ್ಮೂಲ ಇಲಾಖೆ ದೆಹಲಿಯಲ್ಲಿ ಬೀಡುಬಿಟ್ಟಿದ್ದು ನನಗಂತೂ ಹರ್ಷ ತಂದಿದೆ.

ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು, ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು, ಜಲಸಂಪನ್ಮೂಲ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರು  ಸೇರಿದಂತೆ ಬಹುತೇಕ ಅಧಿಕಾರಿಗಳು, ಸಂಸದರ ಸಭೆ, ಮುಖ್ಯಮಂತ್ರಿಯವರ ಸಭೆ ಮತ್ತು ವಿವಿಧ ಕಚೇರಿಗಳಿಗೆ ಬೇಟಿ ನೀಡಿ ನನೆಗುದ್ದಿಗೆ ಬಿದ್ದಿರುವ ಕಡತಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ತಮ್ಮ ಬದ್ಧತೆ ಮೆರೆದಿದ್ದಾರೆ.

ನೀರಾವರಿ ತಜ್ಞರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ನೀರಾವರಿಯಲ್ಲಿ ದಾಖಲೆ ಬರೆಯಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ, ಎಂಬುದಕ್ಕೆ ಇದಕ್ಕಿಂತ ಬೇರೆ ಏನು ಹೇಳಬೇಕಿಲ್ಲ.