22nd December 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಪಿಪಿಪಿ ಯೋಜನೆಗೆ ಮಹತ್ವ ನೀಡಿದೆ. ಈಗಿನ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಸರ್ಕಾರ ಈ ವಿಷಯದ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಿದೆ. ಆದರೂ ಈ ಯೋಜನೆ ಜಾರಿಯಾಗಿದ್ದು 2012 ರಲ್ಲಿ ಶ್ರೀ ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಎಂಬುದು ಕಟುಸತ್ಯ.

ಮೋದಿಯವರು ನಿಜಕ್ಕೂ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಅವರ ಪಕ್ಷದ ಸರ್ಕಾರಗಳು ಈ ಬಗ್ಗೆ ಗಂಬೀರ ಚಿಂತನೆ ನಡೆಸಿಲ್ಲ ಎನ್ನುವುದು ಒಂದು ಧೌರ್ಬಾಗ್ಯ.

ಕೇಂದ್ರ ಸರ್ಕಾರದ ಆದೇಶ ಮತ್ತು ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಣಯಗಳಂತೆ  ರಾಜ್ಯದ ಪ್ರತಿಯೊಂದು ಇಲಾಖೆ ಮತ್ತು ಅವುಗಳ ಅಡಿಯಲ್ಲಿ ಬರುವ ನಿಗಮ, ಮಂಡಳಿಗಳು, ಕಾರ್ಪೋರೇಷನ್ ಎಲ್ಲಾ ಕಡೆ ಒಂದೊಂದು ಪಿಪಿಪಿ ಸೆಲ್ ಆರಂಬಿಸಬೇಕು.

ಇದೂವರೆಗೂ ಕೇವಲ 32 ಇಲಾಖೆ ಮತ್ತು ನಿಗಮಗಳು ಮಾತ್ರ ಪಿಪಿಪಿ ಸೆಲ್ ರಚನೆ ಮಾಡಿವೆ. ಉಳಿದ ಇಲಾಖೆಗಳು ನಿದ್ದೆ ಹೊಡೆಯುತ್ತಿವೆ. 2012 ರಿಂದ ಇಲಾಖೆಯ ಸಚಿವರುಗಳು ಮತ್ತು ಪ್ರಧಾನಕಾರ್ಯದರ್ಶಿಯವರು ಏನು ಮಾಡುತ್ತಿದ್ದರು ಎಂಬುದು ಒಂದು ಯಕ್ಷ ಪ್ರಶ್ನೆಯಾಗಿದೆ.

ಪ್ರಗತಿ ಪರಿಶೀಲನೆ ಮಾಡುವಾಗ ಈ ಬಗ್ಗೆ ಚರ್ಚೆ ನಡೆಸಿದ್ದಾರೇಯೇ? ನಡೆಸಿದ್ದರೆ ಪಿಪಿಪಿ ಸೆಲ್ ರಚನೆ ಮಾಡದೇ ಇರುವ ಇಲಾಖೆಯ ಮೇಲೆ ಏನು ಕ್ರಮಕೈಗೊಂಡಿದ್ದಾರೆ ಎಂಬ ಕುತೂಹಲ ನನಗಿದೆ. ಪೂರ್ಣವಾದ ಮಾಹಿತಿ ಪಡೆದ ನಂತರವೇ ನಿಖರವಾದ ಮಾಹಿತಿ ಹೇಳಬಹುದು.

ಹಾಗೇಯೇ ರಾಜ್ಯದ 31 ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪಿಪಿಪಿ ಸಮಿತಿ ರಚನೆಯಾಗಬೇಕು. ಇವುಗಳಲ್ಲಿ ಎಷ್ಟು ಜಿಲ್ಲೆಯಲ್ಲಿ ರಚನೆಯಾಗಿವೆ ಎಂಬ ಮಾಹಿತಿ ಸಂಗ್ರಹ ಮಾಡುವ ಕೆಲಸ ಈಗ ಆರಂಭವಾಗಿದೆ.

ರಾಜ್ಯದಲ್ಲಿ ನೋಡೆಲ್ ಇಲಾಖೆಯಾಗಿ ಮೂಲಭೂತ ಸೌಕರ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಈಗ ಈ ಇಲಾಖೆಯ ಸಚಿವರು ಶ್ರೀ ವಿ.ಸೋಮಣ್ಣನವರು. ಅಪರ ಮುಖ್ಯ ಕಾರ್ಯದರ್ಶಿಯವರು ಶ್ರೀ ಬಿ.ಹೆಚ್.ಅನಿಲ್ ಕುಮಾರ್ ರವರು.

ದೆಹಲಿಯಲ್ಲಿ ಉನ್ನತ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ಒಬ್ಬ ಹಿರಿಯ ಅಧಿಕಾರಿ ಹೇಳಿದ ಮಾತು, ಸರಿ ನಿಮಗೂ ಮೂಲಸೌಕರ್ಯ ಸಚಿವರಾದ ಶ್ರೀ ವಿ.ಸೋಮಣ್ಣವರಿಗೂ ಬಹಳ ವರ್ಷಗಳಿಂದ ಆತ್ಮೀಯತೆ ಇದೆ. ಈಗ ಅವರೇ ಸಚಿವರಾಗಿದ್ದಾರೆ, ಮೊದಲೇ ಅವರು ಲವಂಗ ಮೆಣಸಿನಕಾಯಿ ಹಾಗೆ ಚುರುಕು, ಅವರ ಗಮನಕ್ಕೆ ತನ್ನಿ ಎಂದಾಗ ಇಬ್ಬರೂ ನಕ್ಕು ನಕ್ಕು ಸುಸ್ತಾದೆವು.

ಶಕ್ತಿಪೀಠ ಫೌಂಡೇಷನ್  ಪಿಪಿಪಿ ಯೋಜನೆಗಳ ಮೌಲ್ಯಮಾಪನ/ಅಧ್ಯಯನ ಆರಂಭಿಸಿದೆ. ಈ ಹಿನ್ನಲೆಯಲ್ಲಿ ಪಿಪಿಪಿ ಯೋಜನೆಗಳ ಮೂಲಕ್ಕೆ ಕೈಹಾಕಲಾಗಿದೆ. ನೋಡೋಣ ಹೇಗಿದೆ ಚಮತ್ಕಾರ.

ದಿಶಾ ಸಮಿತಿಯಲ್ಲಿ ಈ ವಿಚಾರಗಳ ಚರ್ಚೆ ನಡೆಯಬೇಕು. ಮುಖ್ಯಮಂತ್ರಿಯವರು ದಿಶಾ ಸಮಿತಿ ಸಭೆಯನ್ನೇ ಮಾಡಿಲ್ಲ ಎಂದಾದರೆ ಚರ್ಚೆ ಇನ್ನೆಲ್ಲಿ ನಡೆಯುತ್ತದೆ. ಮೋದಿಯವರ ಕಡತದಲ್ಲಿ ಮಾತ್ರ ದಿಶಾ ಸಮಿತಿ ಅಷ್ಟೆ.