22nd December 2024
Share

TUMAKURU:SHAKTHIPEETA FOUNDATION

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಿಪಿಪಿ ಸೆಲ್ ಬಗ್ಗೆ ಸಮಾಲೋಚನೆ ನಡೆಸಲು ಭೇಟಿ ನೀಡಿದ್ದೆ. ನನ್ನ ಸ್ನೇಹಿತ ಈ ಸರ್ಕಾರಿ ಆದೇಶ ಹಿಡಿದುಕೊಂಡು ಹುಡುಕಾಡಿದರು. ಕೊನೆಗೆ ಸಾರ್ವಜನಿಕ ಸಂಪರ್ಕಾಧಿಕಾರಿ ಕೊಠಡಿಯಲ್ಲಿ ಕೇಳಿದಾಗ, ಹೌದು 2012 ರಲ್ಲಿ ಆರಂಭವಾದ ಪಿಪಿಪಿ ಸೆಲ್ 2012 ರಲ್ಲಿಯೇ ನಾಪತ್ತೆಯಾಗಿದೆ ಎಂಬ ಉತ್ತರ ಬಂತು.

ಆದರೇ ನೀವೂ ಇನ್ನೂ ಈ ಆದೇಶ ಹಿಡಿದುಕೊಂಡು ಬಂದಿದ್ದೀರಿ, ನಮಗಿಂತ ನೀವೆ ಉತ್ತಮ ಎಂಬ ಜೋಕ್ ಮಾಡಿದರಂತೆ. ಹಾಗೇಯೇ ಹೊರಗಡೆ ಬಂದು ಘನತ್ಯಾಜ್ಯವಸ್ತು ವಿಲೆವಾರಿ ಘಟಕಗಳ ಬಗ್ಗೆ ಮಾತನಾಡುವಾಗ ಪಿಪಿಪಿ ಯೋಜನೆಯಡಿಯಲ್ಲಿ ಬೆಂಗಳೂರಿನ ಘನತ್ಯಾಜ್ಯ ವಸ್ತು ಘಟಕ ಮಾಡಲು ಆಸಕ್ತಿ ಇರುವ ಒಂದು ಕಂನಿಯ ಪ್ರತಿನಿಧಿ ಕಾಯುತ್ತಾ ಕುಳಿತಿದ್ದರು.

ನನಗೆ ಎಲ್ಲೋ ಒಂದು ಆಸಕ್ತಿಮೂಡಿತು. ಘನತ್ಯಾಜ್ಯ ವಸ್ತು ವಿಭಾಗದ ಮುಖ್ಯ ಇಂಜಿನಿಯರ್ ಭೇಟಿ ಮಾಡಲು ಹೋದಾಗ, ಎಸ್.ಇ ರವರೇ ಇಲ್ಲಿ ಇರುವುದು. ಸಿಇ ಇಲ್ಲ ಎಂಬ ವಿಷಯ ತಿಳಿಯಿತು. ಅವರು ರಜಾದಲ್ಲಿದ್ದಾರೆ, ಮದುವೆಗೆ ಹೋಗಿರಬಹುದು  ಎಂಬ ವಿಚಾರವೂ ತಿಳಿಯಿತು.

ಪಿಪಿಪಿ ಯೋಜನೆಯ ಪ್ರತಿನಿಧಿಗೆ ಸಂಬಂಧಿಸಿದ ಘನತ್ಯಾಜ್ಯ ವಸ್ತು ವಿಭಾಗದ ಇಇ ರವರು ಮತ್ತು ಎಇ ರವರನ್ನು ವಿಚಾರಿಸಿದಾಗ ಅವರು ಮೊಬೈಲ್ ಗೆ ಸಿಕ್ಕಿದರು. ಲೋಕಾಯುಕ್ತ ಕಚೇರಿಯಲ್ಲಿದ್ದರೂ ಸಹ ಉತ್ತಮವಾದ ಮಾಹಿತಿ ನೀಡಿದರು.

ನನಗೆ ಅನ್ನಿಸಿದ್ದು ಮೂಲಸೌಕರ್ಯ ಸಚಿವರ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆದರೆ ಸತ್ಯಾ ಸತ್ಯತೆ ಅರಿವು ಆಗಲಿದೆ.

ಬೆಂಗಳೂರಿನ ಘನತ್ಯಾಜ್ಯ ವಸ್ತು ಘಟಕಗಳ ಮೌಲ್ಯಮಾಪನ ಮಾಡುವ ಕೆಲಸ ಆರಂಭವಾಗಿದೆ. ಇನ್ನೂ ಎಷ್ಟು ಕೆರೆ ನೀರು ಕುಡಿಯಬೇಕೋ? ನೋಡೋಣ?

ಈ ಬಗ್ಗೆ ಯಾರಾದರೂ ಅಧ್ಯಯನ ಮಾಡಿದ್ದ ಮಾಹಿತಿ ಇದ್ದಲ್ಲಿ ನೀಡಲು ಮನವಿ.