21st November 2024
Share

ರಮೇಶ್ ರವರೇ ನಿಮ್ಮ ಪೇಪರ್ ಯಾರಿಗೋಸ್ಕರ ?

TUMAKURU:SHAKTHIPEETA FOUNDATION

ಹೆಸರು ಹೇಳಲು ಇಚ್ಚಿಸಿದ ಹಿರಿಯ ಐ.ಎ.ಎಸ್ ಅಧಿಕಾರಿಯೊಬ್ಬರೂ ನನಗೆ ಕೇಳಿದ ಪ್ರಶ್ನೆ ರಮೇಶ್ ರವರೇ ನಿಮ್ಮ ಪೇಪರ್ ಯಾರಿಗೋಸ್ಕರ ಇದು. ನಾನು ಅವರಿಗೆ ಹೇಳಿದ ಉತ್ತರ 434 ಜನರಿಗೆ ಮಾತ್ರ ನಾನು ಬರೆಯುತ್ತಿರುವುದು. ಅವರನ್ನು ಅಭಿವೃದ್ಧಿ ಜಾಗೃತಿ ಆಂದೋಲನದ ಮೂಲಕ ‘ಬಡಿದೆಬ್ಬಿಸುವುದಾಗಿದೆ. ಒಬ್ಬ ಸಾಮಾನ್ಯ ರೈತ ಬರೆಯುತ್ತಿರುವ ಪೇಪರ್ ಓದಿ ಹೊಟ್ಟೆ ಉರಿದುಕೊಳ್ಳುವರೆ ಜಾಸ್ತಿಯಾಗಿದ್ದಾರೆ.

ನಮ್ಮ ಶಕ್ತಿಪೀಠ ಫೌಂಡೇಷನ್ ಗುರಿ, ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯ ಹೆಚ್ಚಿನ ಅನುದಾನ ಪಡೆದ ರಾಜ್ಯಾವಾಗಬೇಕು ಮತ್ತು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರೆಯ ಬೇಕು.ಇದಕ್ಕೋಸ್ಕರ ವಿಶ್ವದ 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆಗಳನ್ನು ಒಂದೇ ಕಡೆ ಸ್ಥಾಪಿಸಿ ಪೂಜಿಸುವ ಮೂಲಕ ಪ್ರಯತ್ನ ಮಾಡುತ್ತಿರುವುದು ಎಂದು ಹೇಳಿದಾಗ ಅವರು ಮತ್ತೆ ಹೇಳಿದ್ದು ‘ಇದೊಂದು ಹುಚ್ಚು

ಏನಿದು 434 ?

ನಮ್ಮ ಕರ್ನಾಟಕ ರಾಜ್ಯದಲ್ಲಿನ

  1. 225 ಜನ ವಿಧಾನಸಭಾ ಸದಸ್ಯರು,
  2. 75 ಜನ ವಿಧಾನ ಪರಿಷತ್ ಸದಸ್ಯರು,
  3. 28 ಜನ ಲೋಕಸಭಾ ಸದಸ್ಯರು,
  4. 12 ಜನ ರಾಜ್ಯಸಭಾ ಸದಸ್ಯರು
  5. ದೆಹಲಿ ಪ್ರತಿನಿಧಿ-1
  6. 31 ಜಿಲ್ಲೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು.
  7. 31 ಜಿಲ್ಲೆಯ ಜಿಲ್ಲಾಧಿಕಾರಿಗಳು.
  8. 31 ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಓ ಗಳು.
  9. ಒಟ್ಟು ಸೇರಿ ಆಗುವ ಸಂಖ್ಯೆಯೇ- 434

 ಇವರ ಶ್ರಮ ಮಾತ್ರ ನಮ್ಮ ಪರಿಕಲ್ಪನೆಯ ಕನಸು ನನಸು ಮಾಡಬಹುದಾಗಿದೆ, ಇವರ ಜೊತೆಗೆ ವಿವಿಧ ಇಲಾಖೆಗಳ ಮತ್ತು ಲೈನ್ ಡಿಪಾರ್ಟ್‍ಮೆಂಟ್ ಗಳ ಮುಖ್ಯಸ್ಥರ ಸಹಕಾರದ ಅಗತ್ಯವೂ ಇದೆ. ಅವರೆಲ್ಲರಿಗೆ ಅವರರವರ ವಿಷಯ ಬಂದಾದ ಕಳುಹಿಸುತ್ತಿದ್ದೇನೆ.

‘ಬಹಳಷ್ಟು ಬದಲಾವಣೆ ಗಾಳಿ ಆರಂಭಿಸಿದೆ.’ ಜೊತೆಗೆ ಆಸಕ್ತರು ಓದಬಹುದಾಗಿದೆ. ನೋಡಿ ಟೇಬಲ್ ಗಮನಿಸಿ, ನಾನು ಆರಂಭ ಮಾಡಿದ ನಂತರ ಎಷ್ಟು ಜನ ಓದಿದ್ದಾರೆ. ಇವರೆಲ್ಲರಿಗೂ ಹುಚ್ಚು ಅಂತೀರಾ ಎಂದಾಗ, ಅವರು ಹೇಳಿದ್ದು ನಾನೇ ಬೆಳಿಗ್ಗೆ ಎದ್ದ ನಂತರ ಮೊದಲು ನಿಮ್ಮ ಪೇಪರ್ ಓದಿ ನಂತರ ಬೇರೆ ಕೆಲಸ ಎಂಬ, ಅವರ ಮಾತು ನನಗೆ ‘ಖುಷಿ ಎನಿಸಿತು.