19th April 2024
Share

TUMAKURU:SHAKTHIPEETA FOUNDATION

ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ ಹೆಸರೇ ಹೇಳುವಂತೆ ಇಲ್ಲಿ ನೀರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇರಬೇಕು. ಇಲ್ಲಿ ಏನಿದೆ ಏನಿಲ್ಲ ಎಂಬುದು ಅಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೂ ಸಂಪೂರ್ಣ ಮಾಹಿತಿ ಇಲ್ಲ ಎಂದರೆ ತಪ್ಪಾಗಲಾರದು.

ಇದೊಂದು ನಿಗೂಢವಾದ ರಹಸ್ಯವಾದ ಸಂಸ್ಥೆಯೇನೋ ಎಂಬ ಭಾವನೆ ಬರುತ್ತದೆ. ನಾನು ಈ ಸಂಸ್ಥೆಗೆ 5 ಭಾರಿ ಭೇಟಿ ನೀಡಿದ್ದೇನೆ. ಇಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನನಗೂ ತಿಳಿಯಲು ಆಗಿರಲಿಲ್ಲ.

ದಿನಾಂಕ:05.04.2022 ರಂದು ಭೇಟಿಯಾದಾಗ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದಾಗ ಅಲ್ಲಿನ ಕೆಲವು ನೌಕರರು ಯಾರಿಗೂ ಏನೂ ಹೇಳಲು ಅವಕಾಶವಿಲ್ಲ ಎಂಬಂತೆ ವರ್ತಿಸಿದರು.

ಇದು ಸರ್ಕಾರಿ ಕಚೇರಿಯೋ ಅಥವಾ ಖಾಸಗಿ ಕಂಪನಿಯೇ ಎಂಬ ಚರ್ಚೆಯೂ ನಡೆಯಿತು. ನಂತರ ಇವರು ಇಂದು ಸುಮ್ಮನೆ ಹೋಗುವ ಹಾಗೆ ಕಾಣುತ್ತಿಲ್ಲ ಎಂಬ ಬಾವನೆ ಅಲ್ಲಿದ್ದ ಕೆಲವರಿಗೆ ಬಂತು ನಂತರ ನಾನು ಕೇಳಿದ ಮಾಹಿತಿಗಳ ಬಗ್ಗೆ ಅಲ್ಪ ಸ್ವಲ್ಪ ವಿವರ ಹೇಳುವ ಸ್ಥಿತಿಗೆ ಬಂದರಾದರೂ ನನಗೆ ನಾಚಿಕೆಯಾಯಿತು.

ಕೇಂದ್ರ ಸರ್ಕಾರ ಬಹಳಷ್ಟು ಹಣ ಖರ್ಚು ಮಾಡಿ ಅಧ್ಯಯನ ಮಾಡಲು ನೆರವು ನೀಡಿದ್ದರೂ ಇವರು ಹೀಗೆ ಕಾಲಕಳೆಯುತ್ತಿದ್ದಾರೆ ಎಂಬ ಅನಿಸಿಕೆಯೂ ಆಯಿತು. ಡಾಟಾ ಯುದ್ದ ಘೋಷಣೆ’ ಯನ್ನು ಮಾಡಲಾಯಿತು. ‘ಮಂತ್ರಿಸಿದರೆ ಮಾವಿನ ಕಾಯಿ ಬೀಳುವುದಿಲ್ಲ’ ಎಂಬ ಗಾದೆ ನೆನಪು ಬಂತು.

ನಂತರ ಸಂಸ್ಥೆಯ ಚೀಪ್ ಇಂಜಿನಿಯರ್ ಹಾಗೂ ರಿಜಸ್ಟಾರ್ ಶ್ರೀ ಶಿವಕುಮಾರ್ ರವರನ್ನು ಮತ್ತು ಡೈರೆಕ್ಟರ್ ಟೆಕ್ನಿಕಲ್ ಶ್ರೀ ಡಾ.ಪಿ.ಸೋಮಶೇಖರ್ ರಾವ್ ಅವರನ್ನು ಪ್ರತ್ಯೇಕವಾಗಿ ಬೇಟಿಯಾಗಿ ಸಮಾಲೋಚನೆ ನಡೆಸಲಾಯಿತು. ಇವರಿಬ್ಬರೂ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ಮೂಡಿದೆ.

ನಾನು ಸುಮಾರು 15 ದಿವಸಗಳ ಕಾಲ ಈ ಕಚೇರಿಗೆ ಬೇಟಿ ನೀಡಿ, ಪ್ರತಿಯೊಬ್ಬ ಪರಿಣಿತರು ಏನೇನು ಅಧ್ಯಯನ ಮಾಡಿದ್ದಾರೆ ಎಂಬ ಬಗ್ಗೆ ಕಡತಗಳೊಂದಿಗೆ ಮಾಹಿತಿ ಕಲೆಹಾಕಲು ನಿರ್ಧರಿದ್ದೇನೆ.

ಇವರಿಗೆ ಡಾಟಾ ಕಲೆಹಾಕಲು ಇರುವ ತೊಂದರೆಗಳು ಏನು ಎಂಬ ಮನವರಿಕೆ ಮಾಡಿಕೊಳ್ಳುವುದು ನನಗೆ ಕುತೂಹಲವೆನಿಸಿದೆ. ಜೊತೆಗೆ ಸಂಸ್ಥೆಯು ದೇಶದಲ್ಲಿಯೇ ಉತ್ತಮ ಸಂಸ್ಥೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡುವವರೆಗೂ ಇವರಿಗೆ ಅಗತ್ಯವಿರುವ ಎಲ್ಲಾ ಡಾಟಾ ಗಳನ್ನು ಸಂಬಂದ ಪಟ್ಟ ಇಲಾಖೆಗಳಿಂದ ಕೊಡಿಸುವವರಿಗೂ ನನಗೆ ನೆಮ್ಮದಿ ಇಲ್ಲ.

 ನಾನು ಶಕ್ತಿಪೀಠ ಕ್ಯಾಂಪಸ್‍ನಲ್ಲಿ ರಾಜ್ಯದ ಒಂದೊಂದು ಹನಿ ನೀರಿನ ಮಾಹಿತಿ ಇರಲಿದೆ ಎಂದು ಕೊಚ್ಚಿಕೊಂಡರೆ ಸಾಲದು, ಈ ಮಾಹಿತಿ ಮೊದಲು ರಾಜ್ಯ ಸರ್ಕಾರದಲ್ಲಿ ಒಂದು ಕಡೆ ಇರಬೇಕು. ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಬೇಕಾದರೆ, ಯಾವ ವಿಧಾನಸಭಾ ಕ್ಷೇತ್ರಕ್ಕೆ ಯಾವ ಯೋಜನೆಯ ಕೊರತೆಯಿದೆ ಎಂಬ ಅನಾಲೀಸಿಸ್ ಮಾಡಿದಾಗ ಮಾತ್ರ ಒಂದು ನಿರ್ದಿಷ್ಟ ರೂಪುರೇಷೆ ನಿರ್ಧರಿಸಬಹುದಾಗಿದೆ.

ಇದೊಂದು ಟೀಮ್ ವರ್ಕ್ ಆಗಬೇಕು, ಬಹಳ ತಾಳ್ಮೆಯಿರಬೇಕು, ಇಲ್ಲಿ ಕೆಲಸ ಮಾಡುವವರೆಗೆ ಪರಸ್ಪರ ನಂಬಿಕೆ ಇರಬೇಕು ಎಲ್ಲಾ ಪ್ರಯತ್ನ ಮಾಡೋಣ.

ಪ್ರಧಾನಿ ಶ್ರೀ ನರೇಂದ್ರಮೋದಿಯವರ ದಿಶಾ ಸಮಿತಿ ಮಾರ್ಗದರ್ಶಿ ಸೂತ್ರ ಇಲ್ಲಿ ಕೆಲಸ ಮಾಡುತ್ತದೋ? ಅಥವಾ ಮಾಜಿ ಪ್ರಧಾನಿ ಶ್ರೀ ಮನೋಮೋಹನ್ ಸಿಂಗ್ ರವರ ಮಾಹಿತಿ ಹಕ್ಕು ಅಧಿನಿಯಮ ಇಲ್ಲಿ ಕೆಲಸ ಮಾಡುತ್ತದೋ ಅಥವಾ ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರ ಕೆಲಸ ಮಾಡುತ್ತದೋ ಕಾದು ನೋಡೋಣ?