TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಸ್ಥಳೀಯ ಯೋಜನಾ ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದಿದೆ. ಶಿರಾ ತಾಲ್ಲೋಕಿನ 14 ಗ್ರಾಮಗಳು ಮತ್ತು ತುಮಕೂರು ತಾಲ್ಲೋಕಿನ 109 ಗ್ರಾಮಗಳು ಒಟ್ಟು 123 ಗ್ರಾಮಗಳು ಈ ವ್ಯಾಪ್ತಿಗೆ ಬರಲಿವೆ.
ಸುಮಾರು 35677.77 ಎಕರೆ ಪ್ರದೇಶ ವ್ಯಾಪ್ತಿಯ 80915 ಜನ ಸಂಖ್ಯೆ ಈ ವ್ಯಾಪ್ತಿಗೆ ಒಳಪಡುತ್ತದೆ.
ಈಗಾಗಲೇ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಜಿಐಎಸ್ ಆಧಾರಿತ ಲೋಕಲ್ ಪ್ಲಾನಿಂಗ್ ಏರಿಯಾ ಅಂತಿಮಗೊಳಿಸರ ಬಹುದು.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಮತ್ತು ಹೊಸ ಪ್ರಾಧಿಕಾರವಾದ ಚನ್ನೈ- ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನಾ ಪ್ರದೇಶದ ವ್ಯಾಪ್ತಿಯೂ ಸೇರಿ ಭವಿಷ್ಯದ ‘ತುಮಕೂರು ತ್ರಿವಳಿ ನಗರಗಳ ಅಭಿವೃದ್ದಿಗೆ ಕನಸು ಕಾಣಬೇಕು.’
ನಾನು ನನ್ನದೇ ಒಂದು ಪರಿಕಲ್ಪನೆಯ ವ್ಯಾಪ್ತಿಯ ಬಗ್ಗೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸಲಹೆ ನೀಡಿದ್ದೇನೆ. ಚನ್ನೈ- ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನಾ ಪ್ರದೇಶದ ವ್ಯಾಪ್ತಿ ಮತ್ತು ಈ ವ್ಯಾಪ್ತಿ ಎರಡು ಕಂಪೇರ್ ಮಾಡಿ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲು ಸಲಹೆ ನೀಡಲಾಗಿದೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ನಗರ ಶಾಸಕರಾದ ಶ್ರೀ ಜ್ಯೋತಿಗಣೇಶ್ ರವರು ಹೊಸ ವ್ಯಾಪ್ತಿಯ ಶಾಸಕರುಗಳು ಈ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ.