TUMAKURU:SHAKTHI PEETA FOUNDATION
ಜಲಸಂಪನ್ಮೂಲ ಇಲಾಖೆಯಡಿಯಲ್ಲಿ ಇದೊಂದು NATIONAL HYDROLOGY PROJECT ವಿಭಾಗ ಇದೆ. 2016 ರಲ್ಲಿ ಸುಮಾರು ರೂ 110 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ, ರಾಜ್ಯದ ಒಂದೊಂದು ಹನಿ ನೀರಿನ ಡಿಜಿಟಲ್ ಡಾಟಾ ಇರಬೇಕಾದ ACIWRM ಸಂಸ್ಥೆಯವರಿಗೆ ಈ ವರೆಗೂ ಮಾಹಿತಿ ಇಲ್ಲವಾ?
ಡಿಜಿಟಲ್ ಡಾಟಾ ಬೇಸ್ ಎಂದು ಒದ್ದಾಡುತ್ತಾರೆ, ಇವರು ಹಾಲಿ ಯಾವ ಡಾಟಾ ಬೇಸ್ ಮಾಡಿದ್ದಾರೆ, ಇದೂವರೆಗೂ ಯಾವ ಡಾಟಾ ಬೇಸ್ ಮಾಡಬೇಕಿತ್ತು. ಮುಂದೆ ಯಾವ ಡಾಟಾ ಬೇಸ್ ಮಾಡಬೇಕು ಎಂಬ ಕನಿಷ್ಟ ಮಾಹಿತಿ ಪಡೆಯಬೇಕಲ್ಲವೇ.
ನಾನು NATIONAL HYDROLOGY PROJECT ವಿಭಾಗದ ಎಸ್.ಇ.ರವರಾದ ಶ್ರೀ ಕುಮಾರ್ ರವರನ್ನು ಭೇಟಿಯಾಗಿ ಚರ್ಚೆ ಮಾಡಿದೆ, ನನಗೂ ಅವರಿಗೂ ಹೊಸ ಪರಿಚಯವಾದರೂ ಅವರು ಒಳ್ಳೆಯ ಮಾಹಿತಿ ನೀಡಿದರು, ಕೆಲವು ದಾಖಲೆಗಳನ್ನು ನೋಡಬೇಕಾಗಿದ್ದರೂ, ನಾನು ಅವರಿಗೆ ಇದೂವರೆಗೂ ಯಾವುದೇ ಪತ್ರ ಬರೆದಿರಲಿಲ್ಲ. ಅದ್ದರಿಂದ ಲಿಖಿತ ಮಾಹಿತಿ ಪಡೆಯಲಾಗಲಿಲ್ಲ.
WRDO ಇಲಾಖೆಯವರೇ ಪಡೆದು ನೀಡಬೇಕಾಗಿದೆ, ಈ ಹಿನ್ನಲೆಯಲ್ಲಿ ನಾನು ಮತ್ತೊಮ್ಮೆ ಬರುವುದಾಗಿ ಹೇಳಿ ಬಂದೆ. ನಂತರ ACIWRM ಇವರಿಗೆ ಕೇಳಿದೆ, ನಮಗೆ ಪಕ್ಕಾ ಮಾಹಿತಿ ಇಲ್ಲ ಎಂದಾಗ ಮೊದಲು ಮಾಹಿತಿ ತರಿಸಿಕೊಳ್ಳಿ ಎಂಬ ಸಲಹೆ ನೀಡಲಾಯಿತು.
ಕೇಂದ್ರ ಸರ್ಕಾರದ ಅನುದಾನವನ್ನು ನಿಗದಿತ ಸಮಯಕ್ಕೆ ಬಳಸಿಕೊಳ್ಳುವ ಸಾಮರ್ಥ್ಯ ನಮ್ಮ ಸರ್ಕಾರಕ್ಕೆ ಇಲ್ಲವೇ ಎಂಬ ಅನುಮಾನ ನನಗೆ ಬಂದಿದೆ. ನಿಜಕ್ಕೂ ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ಬಹಳ ಚೆನ್ನಾಗಿವೆ, ಇದರಲ್ಲಿ ಯಾರಿಗೂ ಉತ್ತಮ ಫಲ ಸಿಗುವುದು ಕಡಿಮೆ.
ಮಣ್ಣು ಕೆರೆಯುವ ಯೋಜನೆಗಳನ್ನು ನೋಡಿ ನಿಗದಿತ ಕಾಲಕ್ಕೆ ಮೊದಲೇ ಪೂರ್ಣ ಗೊಳಿಸುತ್ತಾರೆ. ಟೆಂಡರ್ ಕರೆಯುವ ಮೊದಲೇ ಕಾಮಗಾರಿ ಆರಂಭಿಸಿದ ಉದಾಹರಣೆ ನಮ್ಮ ಕಣ್ಣು ಮುಂದಿದೆ. ವಿಷನ್ ಯಾರಿಗೆ ಬೇಕು ಹೇಳಿ.ನಮ್ಮಂಥ ಹುಚ್ಚರು ಎಷ್ಟು ಜನ ಇದ್ದಾರೆ.
ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರ ಈ ಬಗ್ಗೆ ಮೌಲ್ಯಮಾಪನ ಮಾಡಬೇಕಲ್ಲವೇ?
ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು ಈ ಬಗ್ಗೆ ಗಮನ ಹರಿಸುವರೇ ಕಾದು ನೋಡಬೇಕು?