26th July 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಟಲ್ ಭೂಜಲ್ ಯೋಜನೆಯಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ನೀರಿಗೆ ಸಂಬ೦ಧಿಸಿದ ನಕ್ಷೆಗಳನ್ನು ಪಂಚಾಯಿತಿಗಳಲ್ಲಿ ಪ್ರದರ್ಶನ ಮಾಡುವುದು, ಬೋಡ್ ಗಳಲ್ಲಿ ಡಿಸ್ ಪ್ಲೆ ಮಾಡಿದರೆ ರಾಜ್ಯಕ್ಕೆ ಸುಮಾರು ರೂ 40 ಕೋಟಿ ಇನ್ ಸೆಂಟೀವ್ ಅನುದಾನ’ ನೀಡುವುದಾಗಿ ಕೇಂದ್ರ ಸರ್ಕಾರದ ಎಂ.ಓ.ಯು ನಲ್ಲಿದೆಯಂತೆ.

ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಮೃತ್ಯುಂಜಯ ಸ್ವಾಮಿರವರೇ? ಇದು ನಿಜನಾ! ಈ ಅನುದಾನದಲ್ಲಿಯೇ ರಾಜ್ಯದ ಎಲ್ಲಾ ಗ್ರಾಮಗಳ ನೀರಿನ ನಕ್ಷೆ ಮಾಡಬಹುದಲ್ಲವೇ ?

ಜಲಗ್ರಂಥ ದಲ್ಲಿ ಪ್ರತಿಯೊಂದು ಪಕ್ಕಾ ಮಾಹಿತಿಯೂ ಜಿಐಎಸ್ ಆಧಾರಿತ ನಕ್ಷೆಯಲ್ಲಿ ಇರಲೇ ಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಹೆಸರು ಹೇಳಬಯಸದೇ ಇರುವ  ನೀರಾವರಿ ತಜ್ಞರೊಬ್ಬರೂ ಈ ಮಾಹಿತಿ ಹಂಚಿಕೊಂಡರು.

ಅಟಲ್ ಭೂಜಲ್ ಯೋಜನೆಯ ಡಾಟಾ ವನ್ನು ಸಹ ACIWRM ನಲ್ಲಿ ಕ್ರೋಡೀಕರಿಸ ಬೇಕು. ಇದು ನೀರಿಗೆ ಸಂಬಂಧಿಸಿದ ಡಾಟಾ ತವರು’ ಮನೆಯಾಗಿದೆ. ಈ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿದು ಸರಣೆ ಲೇಖನ ಬರೆಯಲಾಗುವುದು ಎಂದು ನಾನು ಅವರಿಗೆ   ತಿಳಿಸಿದ್ದೇನೆ.