TUMAKURU:SHAKTHIPEETA FOUNDATION
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೀರಾವರಿ ವಿಚಾರವೂ ಒಂದು ಪ್ರಮುಖ ಅಂಶವಾಗಲಿದೆ. ಬಹುತೇಕ ಎಲ್ಲಾ ಪಕ್ಷಗಳು ಈ ಬಗ್ಗೆ ಚಿಂತನೆ ನಡೆಸಿವೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಸೀಮೀತ ಗೊಳಿಸಿದ ಹಾಗೆ ಕಾಣುತ್ತಿದೆ.
ಜೆಡಿಎಸ್ ಜನತಾ ಜಲಾಧಾರೆ ಘೋಷಣೆಗೆ ಚಾಲನೆ ನೀಡಿದೆ. ಇಲ್ಲಿ ಯಾವ ನೀರಿನ ಯೋಜನೆಯನ್ನು, ಯಾವ ಭಾಗಕ್ಕೆ, ಹೇಗೆ ತರುತ್ತೇವೆ ಎಂಬ ನೀಲಿನಕ್ಷೆಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ ಮಾಹಿತಿ ಮಾಧ್ಯಮಗಳಲ್ಲಿ ಕಾಣಿಸಲಿಲ್ಲ.
ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರೇ ಸ್ವತಃ ನೀರಾವರಿ ತಜ್ಞರೇ ಆಗಿದ್ದರೂ ರಾಜ್ಯದ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಆಯವ್ಯಯದಲ್ಲಾಗಲಿ ಅಥವಾ ಪಕ್ಷದ ಕಾರ್ಯಕ್ರಮದಲ್ಲಾಗಲಿ ಪ್ರಕಟಣೆ ಮಾಡಿದ ಹಾಗೆ ಕಾಣಲಿಲ್ಲ.
ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಯಾವ ವಿಷಯ ಮುಂದಿಟ್ಟು ಕೊಳ್ಳಲಿದೆ ಎಂಬ ದಿಕ್ಸೂಚಿ ಇನ್ನೂ ಲಭ್ಯವಾಗಿಲ್ಲ.
ಇತರೆ ಬೇರೆ ಪಕ್ಷಗಳು ರಾಜ್ಯದ ಸಮಗ್ರ ನೀರಾವರಿ ವಿಚಾರದಲ್ಲಿ ತಲೆ ಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ.
ಶಕ್ತಿಪೀಠ ಫೌಂಡೇಷನ್ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ರಾಜ್ಯದ ಎಲ್ಲಾ ಪಕ್ಷಗಳೂ ಒಪ್ಪುವ ಒಂದು ನೀಲಿನಕ್ಷೆ ತಯಾರಿ ಆರಂಭಿಸಿದೆ.ಇದೊಂದು ವಿಶೇಷ ಯೋಜನೆಯಾಗಲಿದೆ.
ಎಲ್ಲಾ ಪಕ್ಷದವರ ಅಭಿಪ್ರಾಯದ ನಂತರ ‘ಪ್ರತಿ ವಿಧಾನಸಭಾ ಕ್ಷೇತ್ರದ ನೀರಾವರಿ ಬಗ್ಗೆ ಪ್ರತಿಯೊಂದು ಪಕ್ಷಗಳು ಬಾಯಿ ಬಿಡಬೇಕು, ಬಡಾಯಿ ಕೊಚ್ಚಿಕೊಳ್ಳುವುದು ಬೇಡ’ ಯಾವುದೇ ಪಕ್ಷದ ಶಾಸಕರಾಗಲಿ ಅವರ ಕ್ಷೇತ್ರದ ನೀರು ಮತ್ತು ಹಸಿರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಅವರ ಕಚೇರಿಯಲ್ಲಿ ಪ್ರದರ್ಶನ ಮಾಡಬೇಕು.
ಹಾಲಿ ಏನಿದೆ? ಮುಂದೆ ಏನು ಆಗಬೇಕು? ಕೇಂದ್ರದ ಪಾತ್ರ ಮತ್ತು ರಾಜ್ಯದ ಪಾತ್ರ ಏನು ಎಂಬ ಬಗ್ಗೆ ಒಂದೇ ನಕ್ಷೆಯಲ್ಲಿ ಮಾಹಿತಿ ಇರಲಿದೆ.
ರಾಜ್ಯದ ಡಾಟಾ ಅಧಿನಾಯಕಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಅಂಕಿಅಂಶಗಳ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್‍ರವರು, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರು ಮತ್ತು ಮುಖ್ಯ ಮಂತ್ರಿಯವರ ಆಪ್ತಕಾರ್ಯದರ್ಶಿ ಹಾಗೂ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ರವರ ಸಹಕಾರ ಇಲ್ಲಿ ಮಹತ್ತರವಾಗಿದೆ.
ಮೂವರೂ ಸಂಪೂರ್ಣ ಸಹಕಾರ ನೀಡುವ ಭರವಸೆ ನನಗೆ ಇದೆ.