23rd June 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿಗಾಗಿ, ಕೇಂದ್ರ ಸರ್ಕಾರದಿಂದ ಯಾವ ಯೋಜನೆಯಡಿ, ಯಾವ ಪ್ರದೇಶಕ್ಕೆ ಯೋಜನೆ ಮಂಜೂರು ಮಾಡಿಸಬಹುದು ಎಂಬ ಬಗ್ಗೆ ಜಲಗ್ರಂಥ ದಲ್ಲಿ ವಿಧಾನಸಭಾ ಕ್ಷೇತ್ರವಾರು ಮೌಲ್ಯಮಾಪನ ವರದಿ ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಈ ಬಗ್ಗೆ ಮಹತ್ತರವಾದ ಹೆಜ್ಜೆ ಇಟ್ಟಿದೆ ಎಂದರೆ ತಪ್ಪಾಗಲಾರದು.

ನೋಡಿ ದಿನಾಂಕ:04.05.2001 ರಂದು ಆಗಿನ ಜಲಸಂಪನ್ಮೂಲ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರ ದೂರದೃಷ್ಠಿಯಿಂದ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಡಿಯಲ್ಲಿ ಡಾಟಾ ಸೆಂಟರ್/ಜಿಯೋಮ್ಯಾಟಿಕ್ ಸೆಂಟರ್ ಸ್ಥಾಪಿಸಿದ್ದು ಇತಿಹಾಸ.

ಅಂದು ಈ ವಿಚಾರದಲ್ಲಿ ಶ್ರೀ ಜಿ.ಎಸ್.ಬಸವರಾಜ್‍ರವರು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಮತ್ತು  ನಾನು ಭಾಗಿಯಾಗಿದ್ದು ನನಗೂ ಹೆಮ್ಮೆ ಎನಿಸಿದೆ. ಈಗ ಕೇಂದ್ರ ಸರ್ಕಾರದಿಂದ ¸ÉÖÃmï ªÁlgï E£ï¥sÀgïªÉĵÀ£ï ¹¸ÀÖA (SWIC) ಸ್ಥಾಪಿಸಲು ಸಲಹೆ ನೀಡಿದೆ.

   ರಾಜ್ಯ ಸರ್ಕಾರ ACIWRM ಸಂಸ್ಥೆಯನ್ನು ನೋಡೆಲ್ ಸಂಸ್ಥೆಯಾಗಿ ಘೋಷಣೆ ಮಾಡಲು ಸಿದ್ಧತೆ ನಡೆಸಿದೆ. ಹಾಗಾದರೆ ಡಾಟಾ ಸೆಂಟರ್/ಜಿಯೋಮ್ಯಾಟಿಕ್ ಸೆಂಟರ್ ಗತಿ ಏನು ಎಂಬ ಅನುಮಾನ ಎಲ್ಲರಲ್ಲೂ ಮನೆ ಮಾಡಿದೆ.

ನಾನು ನೀಡಿರುವ 220 ಅಂಶಗಳು, ಶ್ರೀ ಜಿ.ಎಸ್.ಬಸವರಾಜ್‍ರವರು ನೀಡಿರುವ 51 ಅಂಶಗಳ ಮಾಹಿತಿ ಪಡೆಯಲು ದಿನಾಂಕ:19.04.2022 ರಂದು ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಇಇ ರವರನ್ನು ಭೇಟಿ ಮಾಡಿದಾಗ,   ಇನ್ನೂ ಒಂದೆರೆಡು ದಿವಸದಲ್ಲಿ ಸೂಕ್ತ ಮಾಹಿತಿ ನೀಡುವ ಭರವಸೆ ನೀಡಿದ್ದಾರೆ.

ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಇಂಜಿನಿಯರ್ ಹೊಸದಾಗಿ ಬಂದಿದ್ದಾರೆ, ಎಲ್ಲಾ ವಿಭಾಗಗಳ ಸಭೆಯನ್ನು ನಡೆಸುತ್ತಿದ್ದಾರೆ. ನಂತರ ಈ ಮಾಹಿತಿ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳುವ ಆಶಾಭಾವನೆ ನನ್ನದಾಗಿದೆ.

ನಿನ್ನೆ ಚರ್ಚೆ ಮಾಡುವಾಗ ಹೆಸರು ಹೇಳಲು ಬಯಸದೇ ಇರುವ ಇಂಜಿನಿಯರ್ ಒಬ್ಬರು ಸಾರ್, ನೀರಾವರಿ ಸ್ವತ್ತುಗಳ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ನ್ಯಾಯಾಲಯಗಳಲ್ಲಿ ಆದೇಶವಾಗಿರುವ ಪ್ರತಿಗಳನ್ನು ಸಂಗ್ರಹ ಮಾಡಿ, ಮೌಲ್ಯಮಾಪನ ಮಾಡುವುದು ಒಳ್ಳೆಯದಲ್ಲವೇ ಎಂಬ ಸಲಹೆ ನೀಡಿದ್ದಾರೆ.

ಹೀಗೆ ಹಲವಾರು ಮಂದಿ ಅವರಿಗೆ ತಿಳಿದಿರುವ ಹೊಸ, ಹೊಸ ಅಂಶಗಳನ್ನು ಹೇಳುತ್ತಿದ್ದಾರೆ. ನೀವೂ ಸಲಹೆ ನೀಡಬಹುದು.