27th July 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಒಂದೊಂದು ಹನಿ ನೀರಿನ ಡಿÀಜಿಟಲ್ ಡಾಟಾ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಮತ್ತು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಹೆಚ್ಚು ಅನುದಾನ ಪಡೆಯಲು ಕೈಗೊಳ್ಳ ಬೇಕಾಗಿರುವ ಕಾರ್ಯತಂತ್ರಗಳ ವರದಿ ತಯಾರಿಸಲು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ. ಮುಖ್ಯ ಇಂಜಿನಿಯರ್ ಶ್ರೀ ಅರವಿಂದ್ ರವರೊಂದಿಗೆ ದಿನಾಂಕ:21.04.2022 ರಂದು ಸಮಾಲೋಚನೆ ನಡೆಸಲಾಯಿತು.

ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ನೋವೇಟೀವ್ ಇಂಜಿನಿಯರ್ಸ್ ತಂಡ ರೂಪಿಸುವ ಬಗ್ಗೆಯೂ ಚರ್ಚಿಸಲಾಯಿತು. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿಯ ಡಾಟಾ ಬೇಸ್ ಬಗ್ಗೆ ವಿಶೇಷ ಆಸಕ್ತಿ ವಹಿಸಲು, ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹುಟ್ಟಿರುವ ಅಥವಾ ಆ ಕ್ಷೇತ್ರದ ಬಗ್ಗೆ ವಿಶೇಷ ಒಲವು ಇರುವವರ ಪಟ್ಟಿ ಮಾಡಿ, ಅವರ ಕೆಲಸದ ಜೊತೆಗೆ ಒಂದೊಂದು ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಹೊಣೆಗಾರಿಕೆ ನೀಡಿ, ಸರ್ಕಾರದಿಂದ ಇನ್ ಸೆಂಟೀವ್ ನೀಡಿ, ಜೀವನ ಪೂರ್ತಿ ವಿಶೇಷ ಗಮನ ಹರಿಸಿದರೆ. ಇಡೀ ವಿಶ್ವಕ್ಕೆ ಮಾದರಿಯಾಗಲಿದೆ.

ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಮತ್ತು ಜಲಸಂಪನ್ಮೂಲ ಸಚಿವರ ಮಟ್ಟದಲ್ಲಿ ಚರ್ಚೆ ಮಾಡುವ ಅಗತ್ಯವಿದೆ ಎಂಬ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಇತ್ತೀಚೆಗೆ ದೇಶದ ಸಂಸದರಿಗೆ, ಹುಟ್ಟೂರಿನ ಮತ್ತು ತಾಯಿ ಸೇವೆ ಮಾಡಿ ಎಂದು ಕರೆ ನೀಡಿದರು, ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನನ್ನೊಂದಿಗೆ ಮಾತನಾಡುವಾಗ ತಿಳಿಸಿದ್ದರು.

ಹೊಸ, ಹೊಸ ಇನ್ನೋವೇಟೀವ್ ಐಡಿಯಾ ಇರುವ ಇಂಜಿನಿಯರ್ಸ್ ಸಿದ್ಧವಿದ್ದಾರೆ, ಅವರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸವನ್ನು ಮಾಡಬೇಕಷ್ಟೆ.

ಸಭೆಯಲ್ಲಿ ಸಂಬಂಧಿಸಿದ ಎಲ್ಲಾ ಇಂಜಿನಿಯರ್ಸ್ ಹಾಜರಿದ್ದರು.