
TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಸ್ಥಳೀಯ ಯೋಜನಾ ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದಿದೆ. ಶಿರಾ ತಾಲ್ಲೋಕಿನ 14 ಗ್ರಾಮಗಳು ಮತ್ತು ತುಮಕೂರು ತಾಲ್ಲೋಕಿನ 109 ಗ್ರಾಮಗಳು ಒಟ್ಟು 123 ಗ್ರಾಮಗಳು ಈ ವ್ಯಾಪ್ತಿಗೆ ಬರಲಿವೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ, ಮತ್ತು ಹೊಸ ಪ್ರಾಧಿಕಾರವಾದ ಚನ್ನೈ- ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನಾ ಪ್ರದೇ±ದ ವ್ಯಾಪ್ತಿಯೂ ಸೇರಿ ಭವಿಷ್ಯದ ‘ತುಮಕೂರು ತ್ರಿವಳಿ ನಗರಗಳ ಅಭಿವೃದ್ದಿಗೆ’ ಪೂರಕವಾದ ಯೋಜನೆ ರೂಪಿಸಲು ಕನಸುಗಾರರು ಕನಸು ಕಾಣಬೇಕಾಗಿದೆ.
2017 ರಲ್ಲಿ ನಾನು ಬರೆದ ಪುಸ್ತಕದಲ್ಲಿ ಮುಂದೊಂದು ದಿವಸ ತುಮಕೂರು ತ್ರಿವಳಿ ನಗರವಾಗಲಿದೆ, ಎಂದು ಬರೆದಾಗ ಕೆಲವರು ನಕ್ಕಿದ್ದರು. ಇಂದು ತ್ರಿವಳಿನಗರದ ರೂಪುರೇಷೆ ಸಿದ್ಧಪಡಿಸಲು ಚಾಲನೆ ನೀಡಲಾಗಿದೆ.
ತುಮಕೂರು ಜಿಲ್ಲಾಧಿಕಾರಿಗಳು ಈ ಬಗ್ಗೆ ಮೂರು ಪ್ರದೇಶಗಳ ಲೋಕಲ್ ಪ್ಲಾನಿಂಗ್ ಏರಿಯಾ ನಕ್ಷೆ ಇಟ್ಟುಕೊಂಡು ಭವಿಷ್ಯದ ಕನಸು ಕಾಣುವರೇ ನೋಡಬೇಕು.