12th October 2024
Share

TUMAKURU:SHAKTHIPEETA FOUNDATION

ಕರ್ನಾಟಕ ನೀರಾವರಿ ನಿಗಮ ನಿಯಮಿತದ ಇಇ ಶ್ರೀ ವೆಂಕಟೇಶ್ ಪ್ರಸಾದ್ ರವರು ಮತ್ತು ಎಇಇ ಶ್ರೀ ವೆಂಕಟೇಶ್ ಮೂರ್ತಿಯವರೊಂದಿಗೆ ದಿನಾಂಕ:22.04.2022 ರಂದು ಡಾಟಾ ವಾರ್ ನಡೆಯಿತು.

ನಂತರ ಮಾತನಾಡಿದ ಅವರಿಬ್ಬರೂ ನೀವೂ ಜಲಗ್ರಂಥ ಮಾಡುತ್ತಿರುವುದು ಶ್ಲಾಘನೀಯ, ನಿಮಗೆ ಬೇಕಿರುವ ಡಾಟಾ ಎಲ್ಲಿ ದೊರೆಯುತ್ತಿದೆ, ಹೇಗೆ ಪಡೆಯಬೇಕು ಎಂಬ ಬಗ್ಗೆ ಎರಡು ದಿವಸದಲ್ಲಿ ವಿಷಯವಾರು ಮಾಹಿತಿ ನೀಡುವ ಭರವಸೆ ನೀಡಿದ್ದಾರೆ.

ಹಾಗಾದರೆ ನಾನು ಪಟ್ಟಿ ಮಾಡಿರುವ ಮತ್ತು ಈಗಾಗಲೇ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನೀಡಿರುವ ಎಲ್ಲಾ ಅಂಶಗಳ ಸಾಪ್ಟ್ ಕಾಪಿ ಕಳುಹಿಸುತ್ತೇನೆ, ಎರಡು ದಿವಸದ ನಂತರ ನಾನು ಬರುತ್ತೇನೆ, ನಿಮಗೆ ಅರ್ಥವಾಗದ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡೋಣ, ಇನ್ನೂ ನಿಮಗೆ ತಿಳಿದಿರುವ ಮಾಹಿತಿಗಳಿದ್ದರೆ ಅವುಗಳ ಬಗ್ಗೆಯೂ ಮಾಹಿತಿ ನೀಡಿ ಎಂಬ ಮೌಖಿಕ ಒಪ್ಪಂದ ಮಾಡಿಕೊಂಡು ಖುಷಿಯಾಗಿ ಕಚೇರಿಯಿಂದ ನಿರ್ಗಮಿಸಿದೆ.

ಡಾಟಾ ವಾರ್ ಏಕೆ ನಡೆಯಿತು?

  1. ಕರ್ನಾಟಕ ಮುಕ್ತ ದತ್ತಾಂಶ ನೀತಿ 2021 ರಲ್ಲಿ ಪ್ರಕಟವಾಗಿದೆ.
  2. 2015 ರಲ್ಲಿಯೇ ಪ್ರತಿಯೊಂದು ಇಲಾಖೆಗಳು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಗೆ ಡಾಟಾ ಅಪ್ ಲೋಡ್ ಮಾಡಲು ಸಚಿವ ಸಂಪುಟದ ನಿರ್ಣಯ ಆಗಿದೆ. ಅವರು ಹಲವಾರು ಪತ್ರ ಭಾರಿ ಬರೆದರೂ ಮಾಹಿತಿ ನೀಡಿಲ್ಲ.
  3. 2001 ರಲ್ಲಿಯೇ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಡಾಟಾ ಸೆಂಟರ್/ಗಿಯೋಮೆಟಿಕ್ ಸೆಂಟರ್ ಆರಂಭಿಸಿ ಡಾಟಾ ಅಫ್ ಲೋಡ್ ಮಾಡಲು ಸಚಿವ ಸಂಪುಟದ ನಿರ್ಣಯ ಆಗಿದೆ. ಅವರು ಹಲವಾರು ಪತ್ರ ಭಾರಿ ಬರೆದರೂ ಮಾಹಿತಿ ನೀಡಿಲ್ಲ.
  4. ಕರ್ನಾಟಕ ಸರ್ಕಾರವು ೨೦೧೧-೧೨ರ ವಿತ್ತೀಯ ವರ್ಷದ ಆಯವ್ಯಯದಲ್ಲಿ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರದ (ಸ.ಜ.ಸಂ.ನಿ.ಉ.ಕೇಂ) ಸ್ಥಾಪನೆಗೆ ಬದ್ಧವಾಗಿತ್ತು. ಸ.ಜ.ಸಂ.ನಿ.ಉ.ಕೇಂ ಸ್ಥಾಪಿಸುವ ಮೂಲಕ ಭಾರತದಲ್ಲಿಯೇ ಮೊಟ್ಟ ಮೊದಲ ಮಾದರಿಯಾಗಿದೆ. ಈ ಆಲೋಚನೆಯ ಪ್ರಾರಂಭಕ್ಕೆ ಮೂಲ ಕಾರಣವು ಜಲ ಹಾಗೂ ಆಹಾರ ಭದ್ರತೆಯನ್ನು ಸಾಧಿಸುವ ದಿಶೆಯಲ್ಲಿ ಮುನ್ನಡೆಯಬೇಕೆಂಬ ಕರ್ನಾಟಕ ಸರ್ಕಾರದ ಗುರಿಯನ್ನು ಸುಗಮಗೊಳಿಸಲು ಅವಶ್ಯಕವಾದ ಪರಿಸರವನ್ನು ಸೃಷ್ಟಿಸುವುದಾಗಿದೆ. ಸಮಗ್ರ ಜಲಸಂಪನ್ಮೂಲ ನಿರ್ವಹಣೆಯ (ಸ.ಜ.ಸಂ.ನಿ) ಕಾರ್ಯನಕ್ಷೆಯು ನದಿ ಕೊಳ್ಳ ಮತ್ತು ಉಪ್ಪ ಕೊಳ್ಳ ಮಟ್ಟದಲ್ಲಿ ನೆಲ ಹಾಗೂ ಜಲ ಸಂಬಂಧಿತ ನಿರ್ವಹಣಾ ಆಯಾಮಗಳನ್ನು ಸಮಗ್ರವಾಗಿಸಲು ಅವಕಾಶಗಳನ್ನು ಒದಗಿಸುತ್ತದೆ.

  ಜಲ ಸಂಪನ್ಮೂಲ ಇಲಾಖೆ (ಜ.ಸಂ.ಇ) ಸ.ಜ.ಸಂ.ನಿ.ಉ.ಕೇಂ ಒಂದು ವಿಚಾರ ವೇದಿಕೆಯಂತೆ ಕಾರ್ಯನಿರ್ವಹಿಸುವುದು ಮತ್ತು ಯೋಜನಾ ವಿಶ್ಲೇಷಣೆ, ಸಂಶೋಧನೆ, ಯೋಜನೆ, ಸಾಮರ್ಥ್ಯ ವೃದ್ಧಿ ಮತ್ತು ಇಲಾಖೆಯ ೨೦೩೦ರ ಭವಿಷ್ಯದ ಗುರಿಗಾಗಿ ಜ್ಞಾನ ಬೆಳವಣಿಗೆಯಲ್ಲಿ ತೊಡಗಿರುತ್ತದೆ. ಸ.ಜ.ಸಂ.ನಿ.ಉ.ಕೇಂ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು, ಜಲ ಸಂಪನ್ಮೂಲ ಇಲಾಖೆಯ (ಜ.ಸಂ.ಇ) ಸಂಸ್ಥೆಗಳು ಅಂದರೆ, ನಿಗಮಗಳು, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಅಚ್ಚುಕಟ್ಟು ಪ್ರಾಧಿಕಾರ, ಕರ್ನಾಟಕ ಅಭಿಯಂತರರ ಸಂಶೋಧನಾ ಸಂಸ್ಥೆ ಮತ್ತು ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ, ಭಾರತ ಸರ್ಕಾರದ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಸಂರಕ್ಷಣಾ ಸಚಿವಾಲಯ ಮತ್ತು ಅದರ ಅಂಗ ಸಂಸ್ಥೆಗಳಾದ ಕೇಂದ್ರ ಜಲ ಆಯೋಗ, ಕೇಂದ್ರ ಅಂತರ್ಜಲ ಮಂಡಳಿ, ರಾಷ್ಟ್ರೀಯ ಜಲ ಪ್ರಚಾರಕ ಇತ್ಯಾದಿ ನಾಗರಿಕ ಸಮಾಜ, ಖಾಸಗಿ ವಲಯ, ರೈತರು ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳು (ನೀ.ಬ.ಸ.ಸ) ಮತ್ತು ಇತರ ಸಂಸ್ಥೆಗಳೊಂದಿಗೆ ರಾಜ್ಯದ ಜಲ ಸಂಪನ್ಮೂಲ ನಿರ್ವಹಣೆಗಾಗಿ ಜ.ಸಂ.ಇ ಗೆ ಸಮಗ್ರ ಸಲಹೆಯನ್ನು ಒದಗಿಸುವ ಕಾರ್ಯನಿರ್ವಹಿಸುತ್ತದೆ.

  ಇವರಿಗೆ ಮಾಹಿತಿ ನೀಡಲೇ ಬೇಕಿದೆ. ಅವರು ಹಲವಾರು ಪತ್ರ ಭಾರಿ ಬರೆದರೂ ಮಾಹಿತಿ ನೀಡಿಲ್ಲ.

  • ದಿನಾಂಕ:14.01.2022 ರಂದು ಕೆಲವು ಮಾಹಿತಿ ಕೋರಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
  • ದಿನಾಂಕ:02.02.2022 ರಂದು ಕೆಎನ್.ಎನ್.ಎಲ್ ರವರಿಗೆ ಸರ್ಕಾರದಿಂದ ಮಾಹಿತಿ ನೀಡಲು ಪತ್ರ ಬರೆಯಲಾಗಿದೆ.
  • ದಿನಾಂಕ:14.02.2022 ರಂದು ಕೆಎನ್.ಎನ್.ಎಲ್ ರವರಿಗೆ ಜಲಸಂಪನ್ಮೂಲ ಇಲಾಖೆಯಿಂದ ಮಾಹಿತಿ ನೀಡಲು ಪತ್ರ ಬರೆಯಲಾಗಿದೆ.
  • ನಾನು ಸಹ ಕಚೇರಿಗೆ ಭೇಟಿ ನೀಡಿ ನಿಗಮದ ವ್ಯಸ್ಥಾಪಕ ನಿರ್ದೇಶಕರ ಜೊತೆ ಸಮಾಲೋಚನೆ ಮಾಡಿ ಮಾಹಿತಿ ನೀಡಲು ಮನವಿ ಮಾಡಿದ್ದೆ.
  • ದಿನಾಂಕ:01.04.2022 ರಂದು ಕೆ.ಎನ್.ಎನ್.ಎಲ್ ನಿಂದ ಜಲಸಂಪನ್ಮೂಲ ಇಲಾಖೆಗೆ ಅಪೂರ್ಣ ಮಾಹಿತಿ, ಸಹಿ ಇಲ್ಲದ ಮಾಹಿತಿ ನೀಡಿದ್ದರ ಹಿನ್ನಲೆಯಲ್ಲಿ  ಡಾಟಾ ವಾರ್ ನಡೆದು ಅಂತಿಮವಾಗಿ ಸೌಹಾರ್ಧಯುತವಾಗಿ ಮೌಖಿಕ ಒಪ್ಪಂದವಾಗಿದೆ.