12th April 2024
Share

TUMAKURU:SHAKTHIPEETA FOUNDATION

ಅಟಲ್ ಭೂಜಲ್ ಯೋಜನಾ ನಿರ್ದೇಶಕಿಯಾದ ಶ್ರೀಮತಿ ಸುಜಾತರವರನ್ನು ದಿನಾಂಕ:22.04.2022 ರಂದು ಭೇಟಿಯಾಗಿ ವಾಟರ್ ಬಡ್ಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿ ಬಗ್ಗೆ ಸಮಾಲೋಚನೆ ನಡೆಸುವಾಗ ಅವರು ಹೇಳಿದ್ದು  ನಿಮಗೇನು ಡಾಟಾ ಬೇಕು ? ಸಾರ್, ಪಕ್ಕಾ ರಾ ಡಾಟಾ ಸಹಿತ ನೀಡುತ್ತೇವೆ, ಎಂದಾಗ ನಾನೇ ಸುಸ್ತಾಗಿ ಹೋದೆ. ಕಡೇ ಪಕ್ಷ ಒಂದು ಯೊಜನೆಯ ಅಧಿಕಾರಿಯಾದರೂ ಈ ಮಾತು ಹೇಳಿದರಲ್ಲ ಎಂಬ ಖುಷಿಯಾಯಿತು.

ರಾಜ್ಯದ 14 ಜಿಲ್ಲೆಗಳ, 41 ತಾಲ್ಲೋಕುಗಳ, 1199 ಗ್ರಾಮ ಪಂಚಾಯಿತಿಗಳ 9675 ಗ್ರಾಮಗಳ ಡಾಟಾ ವನ್ನು ಒಂದೆಡೆ ಸಂಗ್ರಹ ಮಾಡುವ ಮೂಲಕ ಒಂದು ‘ಜಲಕ್ರಾಂತಿ ಅಧ್ಯಯನ’ ನಡೆಯುತ್ತಿದೆ. ಸಂಜೆ 5 ಗಂಟೆಗೆ ಮೂಲಭೂತ ಸೌಕರ್ಯ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ಬಿ.ಹೆಚ್.ಅನಿಲ್ ಕುಮಾರ್ ರವರ ಬೇಟಿ ನಿಗದಿಯಾಗಿದ್ದರಿಂದ ಡಾಟಾ ಪರಿಶೀಲನೆ ಮಾಡಲು ಆಗಲಿಲ್ಲ.

75 ನೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಅಂತರ್ಜಲ ಬೋರ್ಡ್ ಮತ್ತು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆಯವರು ತುಮಕೂರಿನಲ್ಲಿ ಸಭೆ ನಡೆಸಿದಾಗ ನಾನು ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಲು ಕೋರಿದಾಗ ಮಾಹಿತಿ ನೀಡಲು ಅಧಿಕಾರಿಗಳು ತಡವರಿಸಿದ್ದು ಇತಿಹಾಸ.

ಈ ಭೇಟಿಯ ಸಮಯದಲ್ಲಿ ಅಂದು ನಾನು ಎತ್ತಿದ ಬಹಳ ಪ್ರಶ್ನೆಗಳಿಗೆ ಸಮಾದಾನಕರವಾದ ಉತ್ತರ ನೀಡುವ ಮೂಲಕ ಸೌಹಾರ್ಧಯುತ ಸಮಾಲೋಚನೆ ನಡೆಸಲಾಯಿತು. ಅಟಲ್ ಭೂಜಲ್ ಮಾರ್ಗದರ್ಶಿ ಸೂತ್ರದ ಪ್ರಕಾರ ಏನೇನು ಮಾಡಿದ್ದಾರೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಸಾರ್ವಜನಿಕರಿಗೆ ಹಂಚಿಕೊಳ್ಳುವುದೇ ಯೋಜನೆಯ ಮೂಲ ಉದ್ದೇಶವೂ ಆಗಿದೆ.