TUMAKURU:SHAKTHIPEETA FOUNDATION
ಮಾಜಿ ಪ್ರಧಾನಿಯವರಾದ ಶ್ರೀ ಡಾ.ಮನೋಮೋಹನ್ ಸಿಂಗ್ ರವರು ಮತ್ತು ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ದೇಶದ ಪ್ರತಿಯೊಂದು ಗ್ರಾಮದ, ಪ್ರತಿಯೊಂದು ಸರ್ವೇನಂಬರ್ ನಲ್ಲಿ ಯಾವ ಕಾಮಗಾರಿ ನಡೆಯುತ್ತದೆ ಅದನ್ನು ಡಿಜಿಟಲ್ ಪೋರ್ಟಲ್ ನಲ್ಲಿ ಅಫ್ ಲೋಡ್ ಮಾಡಿ, ಪಾರದರ್ಶಕತೆ ಮತ್ತು ಎಲ್ಲರಿಗೂ ಯೋಜನೆ ಮನವರಿಕೆ ಮಾಡಲು ಮುಕ್ತ ಡಾಟಾ ಪಾಲಿಸಿ ಮಾಡಿದ ‘ಮಹಾನ್ ಪುಣ್ಯಾತ್ಮರು.’
ಕೇಂದ್ರ ಸರ್ಕಾರದಿಂದ ಜಲಶಕ್ತಿ ಸಚಿವಾಲಯದ ಯೋಜನೆಗಳಿಗೆ ಅತಿ ಹೆಚ್ಚು ಅನುದಾನ ಪಡೆಯಲು ಸ್ಟ್ರಾಟಜಿ ಮಾಡಲು ಶಕ್ತಿಪೀಠ ಫೌಂಡೇಷನ್ ಮುಂದಾಗಿದೆ. ‘ಪಕ್ಕಾ ಡಾಟಾ ಇಲ್ಲದೆ ಇದ್ದಲ್ಲಿ ಕಟ್ ಅಂಡ್ ಪೇಸ್ಟ್ ಬೋಗಸ್ ಡಾಟಾ ದಿಂದ ಸ್ಟ್ರಾಟಜಿ ಮಾಡಲು ಸಾಧ್ಯಾವೇ?’
ದೇಶದಲ್ಲಿ ‘ಮುಸ್ಲಿಂ ಉಗ್ರಗಾಮಿ – ಹಿಂದೂ ಉಗ್ರಗಾಮಿ’ ಎಂದು ಪರ-ವಿರೋಧ ಚರ್ಚೆಗಳನ್ನು ಪ್ರತಿ ದಿವಸ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.
‘ಅಭಿವೃದ್ಧಿ ಉಗ್ರಗಾಮಿ’ ಗಳ ಬಗ್ಗೆ ಚರ್ಚೆಯೇ ಇಲ್ಲ. ಕೋಟಿ-ಕೋಟಿ ರೂಗಳನ್ನು ಡಿಜಿಟಲ್ ಡಾಟಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖರ್ಚು ಮಾಡುತ್ತಿವೆ. ಡಾಟಾ ಸಂಗ್ರಹಣೆ ಮಾಡುವ ಸಂಸ್ಥೆಗಳು ನೂರಾರು ಪತ್ರ ಬರೆಯುತ್ತಾರೆ, ಮೇಲ್ ಮಾಡುತ್ತಾರೆ, ಫೋನ್ ಮಾಡುತ್ತಾರೆ, ಕಛೇರಿಗಳಿಗೂ ಅಲೆಯುತ್ತಾರೆ. ಆದರೂ ಡಾಟಾ ಇಲ್ಲ ಎಂದರೆ ಹೇಗೆ, ‘ಸರ್ಕಾರದಿಂದ ಸರ್ಕಾರಕ್ಕೆ ಡಾಟಾ ಕೊಡದೆ ಇರುವ ಅಧಿಕಾರಿಗಳನ್ನು ಅಭಿವೃದ್ಧಿ ಉಗ್ರಗಾಮಿಗಳು ಎಂದು ಕರೆದರೆ ತಪ್ಪಾ?’ ಈ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ.
ಪೈಲಟ್ ಯೋಜನೆಯಾಗಿ ಕೇಂದ್ರದ ಜಲಶಕ್ತಿ ಸಚಿವಾಲಯದ ಯೋಜನೆಗಳಿಗೆ, ಅನುಗುಣವಾಗಿ ಸಂಬಂದಿಸಿದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಇದೊಂದು ಎಚ್ಚರಿಕೆಯ ಗಂಟೆ.
ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನ KGIS ಪೋರ್ಟಲ್ ಗೆ, ಡಾಟಾ ತುಂಬಿ ಇಲ್ಲವೇ ಜೈಲಿಗೆ ಹೋಗಲು ಸಿದ್ಧರಾಗಿ. ಈ ಚಳುವಳಿಯನ್ನು ದಿನಾಂಕ:08.05.2022 ನೇ ಭಾನುವಾರ ಕುಂದರನಹಳ್ಳಿಯಿಂದ ಆರಂಭಿಸಲಾಗುವುದು.
ಚಳುವಳಿ ರೂಪುರೇಷೆಗಳು ಸಿದ್ಧವಾಗುತ್ತಿವೆ, ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದಲ್ಲಿ ಸಾಕಷ್ಟು ಪತ್ರ ವ್ಯವಹಾರಗಳು ನಡೆದಿವೆ, ಸಾಕಷ್ಟು ಕಛೇರಿಗಳಿಗೆ ಖುದ್ಧಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಿದ್ದೇನೆ. ‘ನ್ಯಾಯಾಲಯಕ್ಕೆ ಹೋಗಲು ದಾಖಲೆಗಳಂತೂ ಪಕ್ಕಾ ಆಗಿವೆ.’
‘ದಿಶಾ ಸಮಿತಿ ನಿರ್ಣಯದ ಮೇರೆಗೆ, ದಾಖಲೆ ಪಕ್ಕಾ ಮಾಡಿರುವುದು ಒಂದು ವಿಶೇಷವಾಗಿದೆ. ಇದು ನನ್ನ ದೂರದೃಷ್ಠಿ ಪರಿಕಲ್ಪನೆಯಾಗಿದೆ.’
‘ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ, ಅಮೃತ ಮಹೋತ್ಸವ ಆಚರಣೆ ದೇಶಾಧ್ಯಾಂತ ನಡೆಯುತ್ತಿದೆ. ಪ್ರಧಾನಿಯವರೇ ನಿಮ್ಮ ಮಾತಿಗೆ, ಸರ್ಕಾರಿ ಆದೇಶಗಳಿಗೆ ಬೆಲೆ ಕೊಡದ ಅಧಿಕಾರಿಗಳಿಗೆ ಶಿಕ್ಷೆ ಏನು? ಇವರ ಆಸ್ತಿಗಳಿಗೂ ಬುಲ್ಡೋಜರ್ ರೆಡಿನಾ? ಘೋಷಣೆ ಮೊಳಗಬೇಕಿದೆ.’
‘ಪುರಾಣಗಳಲ್ಲಿ ರಾಕ್ಷಸರನ್ನು ಚಾಮುಂಡಿ ಸಂಹಾರ ಮಾಡಿದ ಹಾಗೆ, ಡಾಟಾ ಕೊಡದ ಅಧಿಕಾರಿಗಳ ವಿಕೃತ ಮನಸ್ಸುನ್ನು ಮಾತ್ರ 108 ಶಕ್ತಿ ದೇವತೆಗಳು ಬದಲಾಯಿಸುವರೇ ಕಾದು ನೋಡಬೇಕು?’
ತಾವೂ ಬನ್ನಿ, ಆಸಕ್ತರು ಕೈಜೋಡಿಸಿ.