3rd December 2024
Share

TUMAKURU:SHAKTHIPEETA FOUNDATION

ಕುಂದರನಹಳ್ಳಿಯಿಂದ ಅದಲಗೆರೆಗೆ ಹೋಗುವ ರಸ್ತೆಗೆ ಭೂ ಸ್ವಾಧೀನ ಮಾಡಿದ್ದರೂ, ಭೂ ಸ್ವಾಧಿನ ಮಾಡಿದ ಸ್ಥಳ ಬಿಟ್ಟು ಬೇರೆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ.

ಬಹಳ ವರ್ಷಗಳಿಂದ ಆಗಿರುವ ತಪ್ಪನ್ನು ಸರಿಪಡಿಸುವುದು ಅಧಿಕಾರಿಗಳ ಕರ್ತವ್ಯ. ಯಾರೇ ಆಗಲಿ, ನನಗೆ ತೊಂದರೆ ನೀಡಿರುವವರಿದ್ದರೂ  ರೈತರಿಗೆ ತೊಂದರೆ ಆಗಬಾರದು, ಇದು ದ್ವೇಷದ ರಾಜಕಾರಣ ಮಾಡುವ ಸಮಯ ಅಲ್ಲ.

 ಸ್ಥಳ ಬದಲಾವಣೆ ಆಗಿರುವ ಜಮೀನಿನ ಮಾಲೀಕರಾದ ದಿ.ಹೆಡ್ ಮಾಸ್ಟರ್ ರಾಮಲಿಂಗಯ್ಯನವರು ಸಜ್ಜನರಾಗಿ, ಯಾರಿಗೂ ತೊಂದರೆ ನೀಡದೆ ಬಾಳಿ ಬದುಕಿದವರು. ಬಹುಷಃ ಅವರಿಗೆ ಈ ತಪ್ಪಿನ ಅರಿವು ಆಗಿಲ್ಲ.

ನ್ಯಾಯಯುತವಾಗಿ ರೈತರ ಅಭಿಪ್ರಾಯ ಪಡೆದು, ನಿಯಾಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಆಗ್ರಹ ಮಾಡಲಾಗಿದೆ.

ಇದೇ ರೀತಿ ಕುಂದರನಹಳ್ಳಿಯಲ್ಲಿ ದ್ವೇಷದ ರಾಜಕಾರಣದಿಂದ ಹಲವಾರು ರೈತರ ನೆಮ್ಮದಿ ಹಾಳಾಗಿದೆ. ಅನುಭವ ಇರುವ ಜಮೀನೇ ಬೇರೆ, ಅವರ ಹೆಸರಿಗೆ ಇರುವ ಜಮೀನೇ ಬೇರೆಯಾಗಿದೆ. ಇಂತಹ ಪ್ರಕರಣಗಳ ಬಗ್ಗೆಯೂ ಜಿಲ್ಲಾಡಳಿತ ವಿಶೇಷ ಗಮನ ಹರಿಸಬೇಕಿದೆ.

ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಕುಂದರನಹಳ್ಳಿಯಲ್ಲಿ ಕಂದಾಯ ಸಚಿವರು ಅಥವಾ ಜಿಲ್ಲಾಧಿಕಾರಿಗಳು ಗ್ರಾಮ ವಾÀಸ್ತವ್ಯ ಮಾಡುವ ಮೂಲಕ ಸಮಸ್ಯೆ ಇರುವ ಎಲ್ಲಾ ರೈತರ ನೆಮ್ಮದಿಗೆ ಇತಿಶ್ರೀ ಹಾಡಿಸಲು ಚಿಂತನೆ ನಡೆಸಲಾಗಿದೆ.

ಪ್ರತಿಯೊಬ್ಬ ರೈತರ ಮನೆಗೂ ಭೇಟಿ ನೀಡಿ ಅವರಿಗೆ ಇರುವ ಸಮಸ್ಯೆಗಳನ್ನು ಕಾನೂನು ರೀತಿ ಬಗೆಹರಿಸಲು ಶಕ್ತಿಪೀಠ ಫೌಂಡೇಷನ್ ಶ್ರಮಿಸಲಿದೆ. ಕಾನೂನಿಗೆ ವಿರುದ್ಧವಾಗಿ ನಿಂತವರಿಗೆ ತುಮಕೂರು ಎಸ್.ಪಿಯವರಿಂದ ಹಿತವಚನ ನೀಡಿಸಲು ಚಿಂತನೆ ನಡೆಸಲಾಗಿದೆ.

ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ, ಲೋಕಸಭಾ ಸದಸ್ಯರಾದ ಮಾನ್ಯ ಶ್ರೀ ಜಿ.ಎಸ್.ಬಸವರಾಜ್ ರವರ ನಾಯಕತ್ವದಲ್ಲಿ ಪ್ರತಿಯೊಬ್ಬ ರೈತರ ಸಮಸ್ಯೆ ಬಗೆಹರಿಸಿ ಸಂಸದರ ಆದರ್ಶ ಗ್ರಾಮದ ವೆಬ್‍ಸೈಟ್‍ನಲ್ಲಿ ಅಫ್ ಲೋಡ್ ಮಾಡಿಸಲಾಗುವುದು. ಇದೊಂದು ಬೆಸ್ಟ್ ಪ್ರಾಕ್ಟೀಸಸ್ ಯೋಜನೆ ಆಗಬೇಕು ಎನ್ನುವುದು ನನ್ನ ಪರಿಕಲ್ಪನೆ,

ಕಾದು ನೋಡೋಣ?