3rd December 2024
Share

TUMAKURU:SHAKTHIPEETA FOUNDATION

ದಿನಾಂಕ:30.04.2022 ರಂದು ಬೆಳಿಗ್ಗೆ 10 ಗಂಟೆಗೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿರುವ ಆಲದ ಮರಗಳ ಪಾರ್ಕ್‍ನಲ್ಲಿ ನಡೆಸಿದ ಪತ್ರಿಕಾ ಘೋಷ್ಠಿ ಅಂಶಗಳು.

ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ

ಶಕ್ತಿಪೀಠ ಮತ್ತು ಗಂಗಾಮಾತೆಗೆ ಇರುವ ಸಂಬಂಧಗಳ ಬಗ್ಗೆ ಸಂಶೋಧನೆಗಾಗಿ ವಿಶ್ವದ 7 ದೇಶಗಳಲ್ಲಿರುವ 108 ಶಕ್ತಿಪೀಠಗಳು ಮತ್ತು ರಾಜ್ಯದ 31 ಜಿಲ್ಲೆಗಳಲ್ಲೂ ಪ್ರವಾಸ ಆಂದೋಲನ’ ಕಾರ್ಯಕ್ರಮವನ್ನು ದಿನಾಂಕ:08.05.2022 ರಂದು ಗುಬ್ಬಿ ತಾಲ್ಲೋಕು ಕುಂದರನಹಳ್ಳಿಯ ಶ್ರೀ ರಾಮೇಶ್ವರ, ಆಂಜನೇಯ ಮತ್ತು ಗಂUಮಲ್ಲಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುವುದು. ಆಸಕ್ತರು ಕಾರ್ಯಕ್ರಮಕ್ಕೆ ಆಗಮಿಸಲು ಮನವಿ ಮಾಡಲಾಗಿದೆ. 

  ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವಾಲಯ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಯೋಜನಾ ಇಲಾಖೆ ಮತ್ತು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯಗಳ ಸಹಕಾರದಿಂದ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ನೀರಿಗೆ ಸಂಭಂದಿಸಿದ ಮೌಲ್ಯಮಾಪನ ಮಾಡಲು ಆರಂಭಿಸಲಾಗುವುದು.

  224 ವಿಧಾನಸಭಾ ಸದಸ್ಯರಿಗೆ, 75 ಜನ ವಿಧಾನಪರಿಷತ್ ಸದಸ್ಯರಿಗೆ, 28 ಜನ ಲೋಕಸಭಾ ಸದಸ್ಯರಿಗೆ ಮತ್ತು 12 ಜನ ರಾಜ್ಯಸಭಾ ಸದಸ್ಯರಿಗೆ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಸ್ಟ್ರಾಟಜಿ ಮಾಡಿ ಕೊಡಲಾಗುವುದು.

 ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆ ಜಾರಿಗೊಳಿಸಲು ಮತ್ತು ರಾಜ್ಯದ 30000 ಗ್ರಾಮಗಳಲ್ಲಿರುವ ಜಲಸಂಗ್ರಹಾಗಾರಗಳು ಗಂಗಾಮಾತೆ ದೇವಾಲಯ ಎಂದು ಪೂಜಿಸಿ, ಒತ್ತುವರಿ ತೆರವು, ಸಮಗ್ರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲು ಸರ್ಕಾರಗಳನ್ನು ಆಗ್ರಹಿಸಲಾಗುವುದು.

  ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗಿನ ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಡಿಜಿಟಲ್ ಡಾಟಾ ಬೇಸ್ ಮಾಹಿತಿಯನ್ನು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮತ್ತು ಮಾಹಿತಿ ಕಣಜದಲ್ಲಿ ಅಫ್ ಲೋಡ್ ಮಾಡಲು ನೀರಿಗೆ ಸಂಭಂಧಿಸಿದ ಎಲ್ಲಾ ಇಲಾಖೆಗಳಿಗೂ ಭೇಟಿ ನೀಡಿ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸಲಾಗುವುದು.

ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ವಾಟರ್ ಮ್ಯೂಸಿಯಂ ಸ್ಥಾಪಿಸಲು ಯಾವ ಮಾಹಿತಿಗಳ ಅಗತ್ಯವಿದೆ ಎಂಬ ಬಗ್ಗೆ ವರದಿ ನೀಡಲಾಗುವುದು.

ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಮತ್ತು ರಾಜ್ಯಾಧ್ಯಾಂತ ಆಸಕ್ತ ಸಂಘಸಂಸ್ಥೆಗಳ, ಪರಿಣಿತರ  ಸಹಕಾರ ಪಡೆಯಲಾಗುವುದು.

                    -ಕುಂದರನಹಳ್ಳಿ ರಮೇಶ್, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರು.