30th December 2024
Share

TUMAKURU:SHAKTHIPEETA FOUNDATION

ದಿನಾಂಕ:14.04.2022 ರಂದು ನಮ್ಮ ತಾಯಿ ದಿ.ಪಾರ್ವತಮ್ಮನವರು ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಅಂದು ನಾನು ಯಾರಿಗೂ ಹೇಳಲು ಸಾಧ್ಯಾವಾಗಲಿಲ್ಲ. ಅಂದೇ ಅಂತ್ಯಕ್ರಿಯೆ, ತಿಥಿ ಎಲ್ಲವನ್ನು ಪೂರ್ಣಗೊಳಿಸಲಾಗಿದೆ.

ದಿನಾಂಕ: 08.05.2022 ನೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕಿನ, ಕುಂದರನಹಳ್ಳಿ ಗ್ರಾಮದಲ್ಲಿ ನಮ್ಮ ತಾಯಿ ಸ್ಮರಣೆ ಯನ್ನು ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಆಗಮಿಸಲು ಈ ಮೂಲಕ ಕೋರಿದೆ.

-ಕುಂದರನಹಳ್ಳಿ ರಮೇಶ್ ಮತ್ತು ಅಪಾರ ಬಂಧು ಬಳಗ

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಪ್ರಥಮ ಕಟ್ಟಡದ ಶಂಕುಸ್ಥಾಪನೆಯನ್ನು ದಿನಾಂಕ:22.08.2022 ರಂದು ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಬಗ್ಗನಡು ಕಾವಲ್‍ನಲ್ಲಿ   ಹಮ್ಮಿಕೊಳ್ಳಲಾಗಿತ್ತು. ಅಂದು ನಮ್ಮ ತಾಯಿ ಆಗಮಿಸಿದ್ದರು. ಈ ಶಕ್ತಿ ಕ್ಯಾಂಪಸ್ ಅನ್ನು ನಮ್ಮ ತಂದೆತಾಯಿ ಗೆ ಸಮರ್ಪಣೆ ಮಾಡುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದೆ.

ಅಂದು ಅವರು ನನಗೆ ಕೇಳಿದ್ದರು, ಈ ಬಿಲ್ಡಿಂಗ್ ಯಾವಾಗ ಪೂರ್ಣಗೊಳಿಸುತ್ತಿಯಾ, ನಮ್ಮ ಅಕ್ಕತಂಗಿಯರೆಲ್ಲಾ ಬಂದು ಇಲ್ಲಿ ಕೆಲವು ಕಾಲ ಇರಬೇಕು ಅಂದು ಕೊಂಡಿದ್ದೇವೆ ಎಂದು ಕೇಳಿದ್ದರು. ದಿನಾಂಕ:04.05.2022 ರಂದು ಓಪನ್ ಮಾಡುತ್ತೇನೆ. ತಿಂಗಳಲ್ಲಿ ಕನಿಷ್ಟ ಪಕ್ಷ ಒಂದು ವಾರ ಎಲ್ಲರೂ ಇಲ್ಲಿ ಇದ್ದು ಹೋಗಬಹುದು. ಎಂದು ಅಂದೇ ನಾನು ಅವರಿಗೆ ಹೇಳಿದ್ದೆ,

ಆದರೆ ವಿವಿಧ ಕಾರಣಗಳಿಂದ ಕಟ್ಟಡವನ್ನು ಪೂರ್ಣಗೊಳಿಸಲು ಸಾಧ್ಯಾವಾಗಲಿಲ್ಲ. ಇದಕ್ಕಿಂತ ನೋವು ಇನ್ನೇನು ಬೇಕು’. ನಮ್ಮ ತಾಯಿ ಹೋದ ದಿನದಿಂದ ಕ್ಯಾಂಪಸ್ ಗೆ ಹೋಗಲು ಇನ್ನೂ ಮನಸ್ಸು ಬಂದಿಲ್ಲ.

ದಿನಾಂಕ:03.05.2022 ರಂದು ಬಸವನಹಬ್ಬದ ದಿವಸ ಹೋಗಿ ಧ್ಯಾನ ಮಾಡಿ, ದಿನಾಂಕ:08.05.2022 ರ ನಂತರ ಕಟ್ಟಡದ ಕಾಮಗಾರಿಯನ್ನು ಪುನಃ ಆರಂಭಿಸಲು ಚಿಂತನೆ ನಡೆಸಿದ್ದೇನೆ. ವಿಧಿ ಬರಹಕ್ಕೆ ಯಾರು ಹೊಣೆ?