25th April 2024
Share

TUMAKURU:SHAKTHIPEETA FOUNDATION

ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ದೇಶದ ಸಂಸದರಿಗೆ ಜನ್ಮ ನೀಡಿದ ತಾಯಿಹುಟ್ಟಿದ ಊರಿನ ಸೇವೆ ಮಾಡಿ ಎಂದು ಕರೆ ನೀಡಿದರು ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಹೇಳಿದರು.

 ಸಂಸದರ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನದಲ್ಲಿ  ಮೋದಿಯವರಿಗೆ ದೇಶದ ಹಲವಾರು ಸಂಸದರು ಅವಮಾನ’ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಶಕ್ತಿಪೀಠ ಫೌಂಡೇಷನ್ ನನ್ನ ಹುಟ್ಟೂರು ಕುಂದರನಹಳ್ಳಿ ಗ್ರಾಮದಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ನಾಯಕತ್ವದಲ್ಲಿ ಮೋದಿಯವರ ಕನಸಿನ ಸಂಸದರ ಆದರ್ಶ ಗ್ರಾಮದ ಪ್ರತಿಯೊಂದು ಯೋಜನೆಗಳ ಜಾರಿಗೆ ಶ್ರಮಿಸಲು ಕಟಿಬದ್ಧವಾಗಿದೆ. ಈ ಒಂದು ವರದಿ ದೇಶಕ್ಕೆ ಮಾದರಿ’ ಯಾಗಲಿದೆ.

ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಹಿಂಜಗ್ಗದೆ, ಕುಂದರನಹಳ್ಳಿ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯ, ಕುಟುಂಬದ, ಸರ್ವೇನಂಬರ್‍ವಾರು  ಸಮಸ್ಯೆಗಳಿಗೂ ಹಂಸಕ್ಷೀರ ನ್ಯಾಯದಂತೆ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಲಾಗಿದೆ. ಪ್ರತಿಯೊಂದು ಸಮಸ್ಯೆಗಳ ಬಗ್ಗೆಯೂ ದೇಶದ ಪ್ರಧಾನಿಯವರ ಕಚೇರಿಗೆ ಮಾಹಿತಿ ನೀಡಲಾಗುವುದು.

ತುಮಕೂರು ಜಿಲ್ಲಾ ಮಟ್ಟದ ಪ್ರತಿಯೊಂದು ಇಲಾಖಾ ಅಧಿಕಾರಿಗಳು ಸ್ಪಂದಿಸುವ ಆಶಾಭಾವನೆ ನನಗೆ ಇದೆ. ಈಗಾಗಲೇ ಹಲವಾರು ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಬೆಂಬಲ ವ್ಯಕ್ತ ಪಡಿಸಿದ್ದಾರೆ.

‘ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮತ್ತು ಶಕ್ತಿಪೀಠ ಫೌಂಡೇಷನ್’ ಅತ್ಯುತ್ತಮವಾದ ಮೌಲ್ಯ ಮಾಪನ ವರದಿ ಸಿದ್ಧಪಡಿಸುವ ಕೆಲಸಕ್ಕೆ ದಿನಾಂಕ:08.05.2022 ನೇ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಚಾಲನೆ ನೀಡಲಾಗುವುದು.

ಅಂದು ಕುಂದರನಹಳ್ಳಿ ಮಾದರಿ ಗ್ರಾಮ’ದ, ಕರ್ನಾಟಕ ರಾಜ್ಯ ಮಟ್ಟದ ಜಲಗ್ರಂಥÀ ಮತ್ತು ವಿಶ್ವದ 7 ದೇಶಗಳ 108 ಶಕ್ತಿಪೀಠಗಳ ಸಂಶೋಧನಾ ವರದಿ ಸಿದ್ಧಪಡಿಸುವ  ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗುವುದು.

ತಾವೂ ದಯವಿಟ್ಟು ಬನ್ನಿ.