22nd November 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ಗೆ ಶಕ್ತಿ ತುಂಬಲೇ ಬೇಕು ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಕರೆ ನೀಡಿದರು.

ಅವರು ದಿನಾಂಕ:08.05.2022 ನೇ ಭಾನುವಾರ ಗುಬ್ಬಿ ತಾಲ್ಲೋಕು ಕುಂದರನಹಳ್ಳಿ ಗ್ರಾಮದಲ್ಲಿ ನಡೆದ ಶಕ್ತಿಪೀಠ ಫೌಂಡೇಷನ್ ಯೋಜನೆಗಳ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕುಂದರನಹಳ್ಳಿ ಗ್ರಾಮವನ್ನು ಡಾಟಾ ಗ್ರಾಮವಾಗಿ ಘೋಷಣೆ ಮಾಡಲು ಸರ್ಕಾರದೊಂದಿಗೆ ಶ್ರಮಿಸಲು ಶಕ್ತಿಪೀಠ ಫೌಂಡೇಷನ್ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ನಾನು ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಘೋಷಣೆ ಮಾಡಿದರು.

ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯದ 31 ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರಗಳ ಮೌಲ್ಯಮಾಪನ ಮಾಡುವುಂಥ ಸಾಹಸದ ಕೆಲಸಕ್ಕೆ ಶಕ್ತಿಪೀಠ ಫೌಂಡೇಷನ್ ಮತ್ತು ವಿಧ್ಯಾರ್ಥಿ ಚಿ.ಕೆ.ಆರ್. ಸೋಹನ್ ಮುಂದಾಗಿರುವುದು ಮೆಚ್ಚುವಂತ ಕಾರ್ಯ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಮತ್ತು ನನ್ನ ಬಹುದಿನದ ಕನಸು ಇದಾಗಿತ್ತು.

ವಿಶ್ವದ 108 ಶಕ್ತಿಪೀಠಗಳ ಸಂಶೋಧನೆಗಾಗಿ 7 ದೇಶಗಳ ಪ್ರವಾಸ ಕಾರ್ಯಕ್ರಮವನ್ನು ಶಕ್ತಿಪೀಠ ಆರಂಭಿಸುತ್ತಿರುವುದು ವಿಶೇಷವಾಗಿದೆ. ಅಸ್ಸಾಂ ನ ಗೌಹಾತಿಯಲ್ಲಿನ ಶಕ್ತಿಪೀಠಕ್ಕೆ ನಾನು ಸಹ ಹೋಗಿದ್ದೆ, ಸತಿಯ ಯೋನಿ ಬಿದ್ಧ ಸ್ಥಳ ಎಂದು ಪ್ರಸಿದ್ಧಿಯಾಗಿದೆ. ಅಲ್ಲಿಂದಲೇ ಪ್ರವಾಸ ಆರಂಭಿಸಿ ಎಂದು ಸಲಹೆ ನೀಡಿದರು.

ಕುಂದರನಹಳ್ಳಿ ರಮೇಶ್ ರವರ ತಾಯಿ ಪಾರ್ವತಮ್ಮನವರು ಇಂದು ನಮ್ಮ ಜೊತೆ ಇಲ್ಲ, ಆದರೇ ಅವರ ಸ್ಮರಣೆಯ ದಿವಸ ಕುಂದರನಹಳ್ಳಿ ರಮೇಶ್ ರವರು ಮತ್ತು ಅವರ ಕುಟುಂಬ ಒಳ್ಳೆಯ ಸಮಾಜ ಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.

ರಮೇಶ್ ರವರು ಹಿಡಿದ ಕೆಲಸ ಆಗುವವರಿಗೂ ನನಗೂ ನಿದ್ದೆ ಮಾಡಲು ಬಿಡುವುದಿಲ್ಲ, ನಿರಂತರವಾಗಿ ಯೋಜನೆಯ ಅಂತಿಮ ಹಂತದವರೆಗೂ ಶ್ರಮಿಸುವ ಛಲವಿದೆ.

  1. ಊರಿಗೊಂದು ಕೆರೆ ಕೆರೆಗೆ ನದಿ ನೀರು.
  2. ಊರಿಗೊಂದು ಪವಿತ್ರವನ
  3. ಊರಿಗೊಂದು ಪುಸ್ತಕ

ಇವು ನನ್ನ ಕನಸಿನ ಯೋಜನೆಗಳು, ಪೈಲಟ್ ಆಗಿ ಈ ಮೂರು ಯೋಜನೆಗಳ ಜಾರಿಗೆ ಕುಂದರನಹಳ್ಳಿ ಗ್ರಾಮಸ್ಥರ ಸಹಕಾರ ಅಗತ್ಯವಿದೆ.  ನನಗೂ ಈ ಯೋಜನೆಗಳ ಜಾರಿ ಖುಷಿ ತಂದಿದೆ. ಆದಷ್ಟು ಬೇಗ ಅವರ ಕನಸು ನನಸಾಗಲಿ ಎಂದು ಆರೈಸಿದರು.

ಸಭೆಯಲ್ಲಿ ಶ್ರೀ ಬಿ.ಎನ್.ಶಿವಪ್ರಕಾಶ್, ಶ್ರೀ ಗುರುಸಿದ್ಧಪ್ಪ, ಶ್ರೀ ಮಹೇಂದ್ರ, ಶ್ರೀ ಮಲ್ಲಿಕಾರ್ಜುನಯ್ಯ, ಡಾ.ಸಿದ್ಧರಾಮಣ್ಣ, ಶ್ರೀ ಪಂಚಾಕ್ಷರಯ್ಯ, ಶ್ರೀ ನಿಜಗುಣಯ್ಯ ಇನ್ನೂ ಮುಂತಾದವರು ಮಾತನಾಡಿದರು. ಕುಮಾರಿ ಶಿವಪ್ರಿಯ ಪ್ರಾರ್ಥನೆ ಮಾಡಿ ಓಡುತ್ತಿದ್ದಾಳೆ.