22nd November 2024
Share

TUMAKURU:SHAKTHI PEETA FOUNDATION

ಶಕ್ತಿಪೀಠ ಫೌಂಡೇಷನ್ ಜನಜಾಗೃತಿ ಸಭೆಯಲ್ಲಿ ಅವಿವಾಹಿತ ಕಾರ್ಯಕರ್ತರ ಒಂದು ತಂಡ, ನಮಗೆ ಹೆಣ್ಣು ಸಿಗುತ್ತಿಲ್ಲ, ನಮ್ಮಂಥವರು ಸಾವಿರಾರು ಜನ ನೋವು ಅನುಭವಿಸುತ್ತಿದ್ದೇವೆ ಎಂಬ ಅಳಲು ತೋಡಿಕೊಂಡಿದ್ದನ್ನು ಬರೆದಾಗ ರಾಜ್ಯದ ವಿವಿಧ ಮೂಲೆಗಳಿಂದ ವ್ಯಾಪಕ ಬೆಂಬಲ ಬಂದಿರುವುದು ನೋಡಿದರೆ ಇದೊಂದು ಸಾಮಾಜಿಕ ಪಿಡುಗು ಆಗಿರುವುದರಲ್ಲಿ ಎರಡು ಮಾತಿಲ್ಲ.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲೂ ವಿವಾಹ ಆಗದ ಯುವಕರ ಡಾಟಾ ಬೇಸ್ ಮಾಡಬೇಕು. ಅವರ ಸಮಸ್ಯೆಗಳನ್ನು ಅರಿತುಕೊಂಡು ಪರಿಹಾರಕ್ಕೆ ಏನು ಮಾರ್ಗೋಪಾಯ ಕಂಡು ಹಿಡಿಯಬೇಕು ಎಂಬ ಬಗ್ಗೆ ಸಂಬಂಧಿಸಿದ ಇಲಾಖೆಗಳ ಸಮನ್ವಯತೆಯಲ್ಲಿ ಒಂದು ನೀತಿಯನ್ನು ರೂಪಿಸದೇ ಇದ್ದಲ್ಲಿ ಮುಂದೆ ಇದೊಂದು ಸಮಾಜ ಕಂಟಕ ವಿಷಯವಾಗಲಿದೆ.

ವಿವಿಧ ಜನಾಂಗದ ಮಠಾಧಿಪತಿಗಳು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕಾಗಿದೆ. ರಾಜ್ಯದ ಪ್ರತಿಯೊಂದು ಗ್ರಾಮಪಂಚಾಯಿತಿ ಮತ್ತು ಸ್ಥಳೀಯ ನಗರ ಸಂಸ್ಥೆಗಳ ವ್ಯಾಪ್ತಿವಾರು ಹಂಚಿದರೂ ಇನ್ನೂ ಹೆಚ್ಚಿಗೆ ಮಠಾಧೀಶರು ಇರಬಹುದು.

ಜಾತಿರಾಜಕಾರಣ, ಓಲೈಕೆ ರಾಜಕಾರಣ ಬಿಟ್ಟು ನಮ್ಮ ಮಠಾಧೀಶರು ನಮ್ಮ ಸಮಸ್ಯೆ ಬಗ್ಗೆ ಏಕೆ ಬರುತ್ತಿಲ್ಲ ಎಂಬ ಆಕ್ರೋಶ ವ್ಯಕ್ತ ಪಡಿಸಿದ್ದನ್ನು ನೋಡಿದರೆ, ನಿಜಕ್ಕೂ ಇದೊಂದು ಹೊಸ ಆಂದೋಲನದ ಉದಯದ ಲಕ್ಷಣಗಳು ಗೋಚರಿಸುತ್ತಿವೆ.

ಗಂಡುಗಳಿಗೆ ಹೆಣ್ಣು ಸಿಗುತ್ತಿಲ್ಲವೇ?

  1. ರೈತರೇ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲವಂತೆ ?
  2. ಎಷ್ಟೇ ಸಂಬಳ ಬರಲಿ ಗಂಡುಗಳು ನಗರಗಳಲ್ಲಿ ಇರಬೇಕಂತೆ?
  3. ವಿವಾಹ ಆದ ತಕ್ಷಣ ಬೇರೆ ಮನೆ ಮಾಡ ಬೇಕಂತೆ?
  4. ಅತ್ತೆ-ಮಾವ, ನಾದಿನಿ, ಮೈದುನರು ಇರಬಾರದಂತೆ?
  5. ಅವಿದ್ಯಾವಂತರು ಮನುಷ್ಯರೇ ಅಲ್ಲವಂತೆ ?
  6. ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಪ್ರಮುಖ ಕಾರಣವಂತೆ?
  7. ವರದಕ್ಷಿಣೆ ಪಿಡುಗು ಮೂಲ ಕಾರಣವಂತೆ?

ಇತ್ಯಾದಿ

ಬರಹಗಳಿಗೆ ಮುಕ್ತ ಆಹ್ವಾನ.